More

    ನ್ಯಾಯದೇವತೆ | ಗಂಡ ಪ್ರತಿ ದಿನ ಹೊಡೆದು ಹಿಂಸಿಸುತ್ತಾರೆ, ಏನು ಮಾಡಬೇಕು?

    ನ್ಯಾಯದೇವತೆ | ಗಂಡ ಪ್ರತಿ ದಿನ ಹೊಡೆದು ಹಿಂಸಿಸುತ್ತಾರೆ, ಏನು ಮಾಡಬೇಕು?ಪ್ರಶ್ನೆ: ಗಂಡ ಪ್ರತಿ ದಿನ ನನಗೆ ಹೊಡೆದು ಬಡಿದು ಹಿಂಸೆ ಮಾಡುತ್ತಿದ್ದಾರೆ. ಇದು ಐದು ವರ್ಷಗಳಿಂದ ನಡೆದುಬರುತ್ತಿದೆ. ನನಗೆ ಎರಡು ವರ್ಷದ ಮಗುವಿದೆ. ತವರಿನವರ ಸಹಾಯವೂ ಇಲ್ಲ. ತವರಿನವರು ತುಂಬಾ ಬಡವರು. ಈಗ ಗಂಡನನ್ನು ಬಿಟ್ಟು ಹೊರಗೆ ಬರೋಣ ಎಂದರೆ ನನಗೆ ಮತ್ತು ನನ್ನ ಮಗುವಿಗೆ ಯಾರ ಸಹಾಯವೂ ಇಲ್ಲ. ಆದರೆ ಅವರ ಒದೆ, ಕೆಟ್ಟ ಮಾತು ಇವೆಲ್ಲಾ ಸಹಿಸಲು ಆಗುವುದೇ ಇಲ್ಲ. ಒಂದೊಂದು ಸಲ ಹೊಡೆದಾಗಲೂ ರಕ್ತ ಹೆಪ್ಪುಗಟ್ಟಿ ಮೈಯೆಲ್ಲಾ ಬಾಸುಂಡೆ ಆಗುತ್ತದೆ. ಎಷ್ಟೋ ಸಾರಿ ಮುಖದ ಮೇಲೆಲ್ಲಾ ಗಾಯವಾಗಿದೆ. ಇದಕ್ಕೆ ನಾನು ಏನು ಮಾಡಬೇಕು? ದಯವಿಟ್ಟು ತಿಳಿಸಿ.

    ಉತ್ತರ: ನೀವು ಸ್ವಲ್ಪವೂ ಹೆದರಬೇಕಾಗಿಲ್ಲ. ಪತಿ ನಿಮ್ಮನ್ನು ಹೊಡೆದ ತಕ್ಷಣ ಅಥವಾ ಸಾಧ್ಯವಾದಷ್ಟು ಬೇಗ ಹತ್ತಿರದ ಪೊಲೀಸು ಠಾಣೆಯಲ್ಲಿ ಕಂಪ್ಲೇಂಟು ಕೊಡಿ. ನಿಮ್ಮ ತಾಲೂಕಿನ ನ್ಯಾಯಾಲಯದಲ್ಲಿ , ಕಾನೂನು ಸೇವಾ ಕೇಂದ್ರ ಇರುತ್ತದೆ. ಅಲ್ಲಿಗೆ ಹೋಗಿ ಎಲ್ಲ ನೋವನ್ನೂ ಹೇಳಿಕೊಳ್ಳಿ. ಅಲ್ಲಿಯ ಕಾರ್ಯದರ್ಶಿಯವರು ನಿಮಗೆ ಮತ್ತು ಮಗುವಿಗೆ ಎಲ್ಲ ರಕ್ಷಣೆ ಕೊಡುವ ಸಹಾಯ ಮಾಡುತ್ತಾರೆ. ನಿಮ್ಮ ಪತಿಯನ್ನು ಕರೆಯಿಸಿ ಮಾತಾಡುತ್ತಾರೆ. ಅವರು ಯಾವುದೇ ರೀತಿಯ ತೊಂದರೆ ಮಾಡದಂತೆ ನೋಡಿಕೊಳ್ಳುತ್ತಾರೆ. ನಿಮಗೆ ಜೀವಕ್ಕೆ ಅಪಾಯ ಇದೆ ಎಂದು ಗೊತ್ತಾದರೆ ನಿಮ್ಮನ್ನು ಯಾವುದಾದರೂ ಆಶ್ರಯ/ ರಕ್ಷಣಾ ಗೃಹ/ಷೆಲ್ಟರ್ ಹೋಂನಲ್ಲಿ ಇರಿಸುವ ವ್ಯವಸ್ಥೆಯನ್ನೂ ಮಾಡುತ್ತಾರೆ. ವಿಷಪೂರಿತವಾದ ವಿವಾಹದಲ್ಲಿ ಮುಂದುವರಿಯಬೇಕೆನ್ನುವ ಮುಲಾಜಿಗೆ ಸಿಗಬೇಡಿ. ನಿಮ್ಮ ಮತ್ತು ನಿಮ್ಮ ಮಗುವಿನ ದೈಹಿಕ ಮತ್ತು ಮಾನಸಿಕ ಆರೋಗ್ಯ ಮುಖ್ಯ ಎನ್ನುವುದನ್ನು ಅರ್ಥ ಮಾಡಿಕೊಳ್ಳಿ.

    ಪ್ರಶ್ನೆ: ದತ್ತು ಮಗನಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕು ಇದೆಯೇ?

    ಉತ್ತರ: ಒಂದು ಕುಟುಂಬದಲ್ಲಿ ಇಬ್ಬರೇ ಗಂಡು ಮಕ್ಕಳು ಇದ್ದು ಮೊದಲನೇ ಮಗನಿಗೆ ಮಕ್ಕಳು ಇರುವುದಿಲ್ಲ. ಅವರು ಮದುವೆ ಆಗಿ 30 ವರುಷ ಕಳೆದಿದ್ದು, ಎರಡನೇ ಮಗನಿಗೆ ಒಂದು ಹೆಣ್ಣು ಮಗು, ಒಂದು ಗಂಡು ಮಗು ಇದೆ. ಈಗ ಮೊದಲನೇ ಮಗ ದತ್ತು ಮಗು ತೆಗೆದುಕೊಂಡಿದ್ದಾರೆ. ಆ ಮಗುವಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಭಾಗ ದೊರಕುವ ಅಧಿಕಾರ ಇರುತ್ತದೆಯೇ. ದಯವಿಟ್ಟು ತಿಳಿಸಿ

    ದತ್ತು ಮಗನಿಗೆ, ಸ್ವಂತ ಹುಟ್ಟಿದ ಮಗನಿಗೆ ಏನೆಲ್ಲಾ ಹಕ್ಕುಗಳು ಇರುತ್ತವೆಯೋ ಆ ಎಲ್ಲಾ ಹಕ್ಕುಗಳೂ ಇದ್ದೇ ಇರುತ್ತವೆ.

    (ಲೇಖಕರು-ಕರ್ನಾಟಕ ಉಚ್ಚ ನ್ಯಾಯಾಲಯದ ಹಿರಿಯ ವಕೀಲರು ಮತ್ತು ಹಿರಿಯ ಮಧ್ಯಸ್ಥಿಕೆಗಾರರು)

    ಮುಂದಿನ ಒಂದು ವರ್ಷದಲ್ಲಿನ ಉಚಿತ ಚಿಕಿತ್ಸೆಗೆಂದೇ 65 ಕೋಟಿ ರೂ. ಮೀಸಲು: ಅಮೃತ ಆಸ್ಪತ್ರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts