ಅತ್ಯಾಚಾರ ಪ್ರಕರಣ: ನ್ಯಾಯ ಕೊಡಿಸಿ, ನೀರಿನ ಟ್ಯಾಂಕ್ ಏರಿ ಕಣ್ಣೀರಿಟ್ಟ ಸಂತ್ರಸ್ತೆ!

Untitled design (81)
Published on

ರಾಜಸ್ಥಾನ: ಅತ್ಯಾಚಾರ ಎಸಗಿದ ಆರೋಪಿಗೆ ತಕ್ಕ ಶಿಕ್ಷೆ ವಿಧಿಸಬೇಕು, ಘಟನೆ ನಡೆದು ಒಂದು ತಿಂಗಳಾದರೂ ಆತನನ್ನು ಪೊಲೀಸರು ಏಕೆ ಬಂಧಿಸಿಲ್ಲ ಎಂದು ಸಂತ್ರಸ್ತೆ ಪ್ರಶ್ನಿಸಿದ್ದಾಳೆ. ಈ ವಿಚಾರವಾಗಿ ತೀವ್ರ ಮನನೊಂದ ಮಹಿಳೆ, ವಾಟರ್​ ಟ್ಯಾಂಕ್ ಮೇಲೆ ಏರಿ, ಆರೋಪಿ ಬಂಧನಕ್ಕೆ ಒತ್ತಾಯಿಸಿ ಕಣ್ಣೀರಿಟ್ಟಿದ್ದಾರೆ. ಘಟನೆ ರಾಜಸ್ಥಾನದ ದೌಸಾ ಜಿಲ್ಲೆಯಲ್ಲಿ ವರದಿಯಾಗಿದೆ.

ಸಂತ್ರಸ್ತೆಯೊಬ್ಬರು ತನ್ನ ದೂರನ್ನು ಅಧಿಕಾರಿಗಳು ಗಮನಿಸುವಂತೆ ಆಗ್ರಹಿಸಿ, ತನಗೆ ನ್ಯಾಯ ದೊರಕಿಸಿಕೊಡಿ ಎಂದು ನೀರಿನ ಟ್ಯಾಂಕ್ ಮೇಲೆ ಏರಿ ಮನವಿ ಮಾಡಿದ್ದಾರೆ. ಘಟನೆ ನಡೆದು ಒಂದು ತಿಂಗಳಾದರೂ ಅತ್ಯಾಚಾರಿ ಆರೋಪಿಯನ್ನು ಪೊಲೀಸರು ಏಕೆ ಇನ್ನೂ ಬಂಧಿಸಿಲ್ಲ? ಈ ಕೂಡಲೇ ಆತನನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ.

ಮಹಿಳೆಯ ಪ್ರಕಾರ ಆರೋಪಿ ವಿರುದ್ಧ ತಿಂಗಳ ಹಿಂದೆಯೇ ದೂರು ನೀಡಿದ್ದರು. ಆಕೆಯ ದೂರಿನ ಆಧಾರದ ಮೇಲೆ, ಐಪಿಸಿಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಮತ್ತು ಮ್ಯಾಜಿಸ್ಟ್ರೇಟ್‌ಗೆ ತನ್ನ ಹೇಳಿಕೆಯನ್ನು ಸಹ ದಾಖಲಿಸಿದ್ದಾರೆ. ಆದರೆ, ಇಲ್ಲಿಯವರೆಗೆ ಪೊಲೀಸರು ಆರೋಪಿಯನ್ನು ಬಂಧಿಸಿಲ್ಲ ಎನ್ನಲಾಗಿದೆ.

ಈ ಬೆಳವಣಿಗೆಯಿಂದ ಮನನೊಂದ ಮಹಿಳೆ ನೀರಿನ ಟ್ಯಾಂಕ್ ಹತ್ತಿ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿದ್ದಾರೆ. ಸ್ಥಳೀಯರಿಂದ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ ಮಹಿಳೆಯನ್ನು ಕೆಳಗಿಳಿಯುವಂತೆ ಮನವೊಲಿಸಿದರು. ಪೊಲೀಸರ ಸತತ ಪ್ರಯತ್ನಗಳ ಬಳಿಕ ಅವರು ಕೊಟ್ಟ ಭರವಸೆಯ ಮೇರೆಗೆ ಮಹಿಳೆ ಕೆಳಗಿಳಿದಿದ್ದಾರೆ ಎಂದು ವರದಿಯಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net