ಹಿರಿಯ ಮಗಳ ಲವ್​​ ಕಹಾನಿ: ಫೋನ್​ನಲ್ಲಿ ಗದರಿದ ತಂದೆ, ಪ್ರಾಣ ಬಿಟ್ಟ ಮೂವರು

itah
Published on

ಇಟಾಹ್‌: ಒಂದೇ ಕುಟುಂಬದ ಮೂವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಇಟಾಹ್​​ ಎಂಬಲ್ಲಿ ನಡೆದಿದೆ.

ಇದನ್ನೂ ಓದಿ: ಸೆಲ್ಫಿ ವ್ಯಾಮೋಹಕ್ಕೆ ಕ್ಷಣಾರ್ಧದಲ್ಲೇ ಹೋಯ್ತು ಯುವಕನ ಪ್ರಾಣ: ಸ್ನೇಹಿತರ ಮುಂದೆಯೇ ನಡೆದ ಘಟನೆ

ಮೃತರನ್ನು ತಾಯಿ ಅನುರಾಧ(45), ಮಗಳು ಸಂಧ್ಯಾ(17) ಮತ್ತು ಶಿವಾನಿ(15) ಎಂದು ಗುರುತಿಸಲಾಗಿದ್ದು, ಘಟನೆ ವೇಳೆ ಕಿರಿಯ ಮಗಳು ಮುಸ್ಕಾನ್‌(10) ಎಂಬುವಳನ್ನು ಮೊಬೈಲ್​ ನೆಪವೊಡ್ಡಿ ಹೊರಗಡೆ ಕಳುಹಿಸಿದ್ದರು. ಆಕೆ ಮನೆಗೆ ಬಂದ ಕೂಡಲೇ ಮೂವರ ಮೃತದೇಹಗಳನ್ನು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.

ಹಿರಿಯ ಮಗಳು ಸಂಧ್ಯಾ ಗ್ರಾಮದ ಸುಮಿತ್ ಯುವಕನೊಂದಿಗೆ ಪ್ರೇಮ ಸಂಬಂಧ ಹೊಂದಿದ್ದಳು. ಇಬ್ಬರೂ ಮದುವೆಯಾಗಲು ಬಯಸಿದ್ದರು. ಆದರೆ ಕುಟುಂಬ ಸದಸ್ಯರು ಸಿದ್ಧರಿರಲಿಲ್ಲ. ಈ ನಡುವೆ ಸುಮಿತ್​ ಆತ್ಮಹತ್ಯೆ ಮಾಡಿಕೊಂಡಿದ್ದ. ಈ ಸುದ್ದಿಯು ನೋಯ್ಡಾದಲ್ಲಿ ಕೆಲಸ ಮಾಡುತ್ತಿದ್ದ ಸಂಧ್ಯಾಳ ತಂದೆ ನರೇಂದ್ರಗೆ ತಿಳಿದಿದ್ದು, ಆತ ಫೋನ್‌ನಲ್ಲಿ ಪತ್ನಿ ಮತ್ತು ಪುತ್ರಿಯರನ್ನು ಗದರಿಸಿದ್ದರು. ಇದರಿಂದ ಮನೆಯಲ್ಲಿ ಮನಸ್ತಾಪ ಶುರುವಾಗಿತ್ತು.

ಈ ಹಿನ್ನೆಲೆ ಮನನೊಂದಿದ್ದ ಮೂವರು ಆತ್ಮಹತ್ಯೆ ನಿರ್ಧರಿಸಿದ್ದು, ಕಿರಿಯ ಮಗಳು ಮುಸ್ಕಾನ್​ಗೆ ಮೊಬೈಲ್​​​ನಲ್ಲಿ ಚಾರ್ಜ್​ ಖಾಲಿಯಾಗಿದೆ. ಪೂರ್ತಿ ಚಾಜ್​ ಮಾಡಿಕೊಂಡು ಬಾ ಎಂದು ಹೇಳಿ ಗ್ರಾಮದ ಪರಿಚಯಸ್ಥರ ಮನೆಗೆ ಕಳುಹಿಸಿದ್ದರು. ಅದರಂತೆ ಮುಸ್ಕಾನ್​ ಹೊರ ನಡೆದಿದ್ದು, ಆ ಬಳಿಕ ಒಂದೇ ಹಗ್ಗವನ್ನು ಮೂರು ತುಂಡುಗಳನ್ನು ಕತ್ತರಿಸಿ ಮೂವರು ನೇಣು ಹಾಕಿಕೊಂಡಿದ್ದಾರೆ.

ಇದನ್ನೂ ಓದಿ: VIDEO| ಬಸ್​ಗೆ ಬೆಂಕಿ: ಪ್ರಾಣಾಪಾಯದಿಂದ ಸುಮಾರು 45 ಪ್ರಯಾಣಿಕರು ಪಾರು

ಮೊದಲು ಹಗ್ಗವನ್ನು ತುಂಡರಿಸಿ ಹೆಣ್ಣು ಮಕ್ಕಳಿಗೆ ನೀಡಿ ನಂತರ ತಾಯಿ ನೇಣು ಬಿಗಿದುಕೊಂಡಿದ್ದಾಳೆ ಎಂದು ಊಹಿಸಲಾಗುತ್ತಿದೆ. ಸಾವಿನ ಬಗ್ಗೆ ಈಗಾಗಲೇ ನರೇಂದ್ರನಿಗೆ ಮಾಹಿತಿ ನೀಡಲಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net