

ಚೆನ್ನೈ: ಕೆಲವೇ ಸಾವಿರ ರೂಪಾಯಿಗಳನ್ನು ನೀಡಿದರೆ ಸಾಕು, ಯಾರದ್ದೋ ಹೆಂಡತಿಯನ್ನೇ ಅನುಭವಿಸಬಹುದು ಎಂಬ ಆಮಿಷವೊಡ್ಡುತ್ತಿದ್ದ ಗ್ಯಾಂಗ್ವೊಂದು ಸಿಕ್ಕಿಬಿದ್ದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 8 ಮಂದಿಯನ್ನು ಬಂಧಿಸಿದ್ದಾರೆ.
ಸೆಂಥಿಲ್ ಕುಮಾರ್, ಕುಮಾರ್, ಚಂದ್ರಮೋಹನ್, ಶಂಕರ್, ವೇಳ್ರಾಜ್, ಪೆರರಸನ್, ಸೆಲ್ವನ್ ಮತ್ತು ವೆಂಕಟೇಶ್ ಕುಮಾರ್ ಬಂಧಿತರು. ಇವರು ಒಂಟಿಯಾಗಿರುವ ಯುವಕರಿಗೆ ಕೆಲವು ಮಹಿಳೆಯರನ್ನು ತಮ್ಮ ಹೆಂಡತಿ ಎಂದು ತೋರಿಸಿ ಪರಿಚಯ ಮಾಡಿಸಿಕೊಳ್ಳುತ್ತಿದ್ದರು. ಬಳಿಕ ವೈಫ್ ಸ್ವ್ಯಾಪಿಂಗ್ ಹೆಸರಿನಲ್ಲಿ ಆ ಮಹಿಳೆಯರೊಂದಿಗೆ ಹಾಸಿಗೆ ಹಂಚಿಕೊಳ್ಳಲು ಬಿಡುತ್ತಿದ್ದರು.
ವೈಫ್ ಸ್ವ್ಯಾಪಿಂಗ್ ಪಾರ್ಟಿ ಎಂದು ಜಾಹೀರಾತು ನೀಡಿಯೇ ಕಳೆದ ಎಂಟು ವರ್ಷಗಳಿಂದ ಈ ದಂಧೆ ನಡೆಸುತ್ತಿದ್ದ ಇವರು ಕೊನೆಗೂ ಸಿಕ್ಕಿಬಿದ್ದಿದ್ದಾರೆ. ಕೊಯಮತ್ತೂರು, ಮಧುರೈ, ಸೇಲಂ, ಈರೋಡ್ ಮುಂತಾದ ನಗರಗಳಲ್ಲಿ ಹೀಗೆ ವೈಫ್ ಸ್ವ್ಯಾಪಿಂಗ್ ನಡೆಸುತ್ತಿದ್ದರು. ಚೆನ್ನೈ ಈಸ್ಟ್ ಕೋಸ್ಟ್ ರಸ್ತೆಯಲ್ಲಿ ಹೀಗೆ ನಡೆಯತ್ತಿದ್ದ ಪಾರ್ಟಿ ಬಗ್ಗೆ ಸ್ಥಳೀಯರು ದೂರು ನೀಡಿದ್ದ ಹಿನ್ನೆಲೆಯಲ್ಲಿ ದಾಳಿ ನಡೆಸಿದ್ದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ವೈಫ್ ಸ್ವ್ಯಾಪಿಂಗ್ ಎಂದು ಸೋಷಿಯಲ್ ಮೀಡಿಯಾ ಪೇಜ್ ಕ್ರಿಯೇಟ್ ಮಾಡಿದ್ದ ಆರೋಪಿಗಳು, 13 ಸಾವಿರದಿಂದ 25 ಸಾವಿರ ರೂ. ನೀಡಿದರೆ ವೈಫ್ ಸ್ವ್ಯಾಪಿಂಗ್ ನಡೆಸಬಹುದು ಎಂದು ಪ್ರಚಾರ ಮಾಡುತ್ತಿದ್ದರು. ಹೆಚ್ಚು ಹಣ ಕೊಟ್ಟಷ್ಟೂ ಹೆಚ್ಚು ಹೆಂಡತಿಯರನ್ನು ಒದಗಿಸುವುದಾಗಿಯೂ ಪ್ರಚಾರ ಮಾಡುತ್ತಿದ್ದರು ಎಂಬುದು ವಿಚಾರಣೆಯಲ್ಲಿ ತಿಳಿದುಬಂದಿದೆ.
ಮತ್ತೊಂದೆಡೆ ಇನ್ನಷ್ಟು ತನಿಖೆ ನಡೆಸಿದ ಪೊಲೀಸರು 30-40ರ ವಯಸ್ಸಿನ ಕೆಲವು ಮಹಿಳೆಯರನ್ನು ವಶಕ್ಕೆ ಪಡೆದಿದ್ದಾರೆ. ಅವರೆಲ್ಲರೂ ವಿವಾಹಿತೆಯರಾಗಿದ್ದು, ಹಣದ ಆಮಿಷಕ್ಕೆ ಒಳಗಾಗಿ ಈ ವೈಫ್ ಸ್ವ್ಯಾಪಿಂಗ್ನಲ್ಲಿ ತೊಡಗಿಸಿಕೊಂಡಿದ್ದರು ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ.