

ಕೋಲಾರ: ಸಕ್ರೀಯ ಸಾಮಾಜಿಕ ಜಾಲತಾಣಗಳಲ್ಲಿ ಒಂದಾದ ಫೇಸ್ಬುಕ್ನಲ್ಲಿ ದಿನವೂ ಹೊಸ ಹೊಸ ಜನರ ಪರಿಚಯ ಆಗುತ್ತಲೇ ಇರುತ್ತವೆ. ಕೆಲವೊಮ್ಮೆ ಫೇಸ್ಬುಕ್ನಲ್ಲಾದ ಪರಿಚಯ ಆತ್ಮೀಯ ಗೆಳೆತನಕ್ಕೆ ಕಾರಣಗುತ್ತದೆ. ಜತೆಗೆ ಅನೇಕರು ಫೇಸ್ಬುಕ್ ಪರಿಚಯಸ್ಥರನ್ನೇ ಪ್ರೀತಿಸಿ ವಿವಾಹವಾಗಿದ್ದಾರೆ. ಇನ್ನು ಕೆಲವರ ಬಾಳಿನಲ್ಲಿ ಬಿರುಕು ಉಂಟಾಗಲೂ ಕೂಡ ಫೇಸ್ಬುಕ್ ಕಾರಣವಾಗಿದೆ.
ಇದೀಗ ಇಲ್ಲೊಬ್ಬಳು ವಿವಾಹಿತೆ ತನ್ನ ಗಂಡನ ವಿರುದ್ಧ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾಳೆ. ಈಕೆಯ ಗಂಡ ಫೇಸ್ಬುಕ್ನಲ್ಲಿ ಸಕ್ರೀಯನಾಗಿದ್ದ. ಈ ವೇಳೆ ಸುಂದರಿಯೊಬ್ಬಳ ಪರಿಚಯ, ಆತ್ಮೀಯ ಸ್ನೇಹಕ್ಕೆ ತಿರುಗಿತ್ತು. ಇಬ್ಬರೂ ಪ್ರತಿ ದಿನ ಗಂಟೆಗಟ್ಟಲೇ ಮಾತನಾಡಿಕೊಳ್ಳುತ್ತಿದ್ದರು. ಈ ವಿಚಾರ ಪತ್ನಿಗೆ ಗೊತ್ತಾಗಿದೆ.
ತನ್ನ ಗಂಡ ಶಶಿಕುಮಾರ್ ಫೇಸ್ಬುಕ್ ಸುಂದರಿಯ ಹಿಂದೆ ಬಿದ್ದಿರುವುದರಿಂದ ಪತ್ನಿ ಆಶಾರಾಣಿ ನೊಂದುಕೊಂಡಿದ್ದಳು. ಶಶಿಕುಮಾರ್ ಫೇಸ್ಬುಕ್ ಸುಂದರಿಯನ್ನು ಈ ಹಿಂದೆ ಭೇಟಿಯಾಗಿದ್ದಾಗ ತೆಗೆದಿದ್ದ ಪೋಟೋ ತೋರಿಸಿ ಪತ್ನಿಗೆ ಚಿತ್ರಹಿಂಸೆ ನೀಡುತ್ತಿದ್ದ. ಗಂಡನ ವರ್ತನೆಯಿಂದ ಮನನೊಂದ ಆಶಾರಾಣಿ ವಿಷ ಸೇವಿಸಿ ಆತ್ಮಹತ್ಯೆಗೆ ಮಾಡಿಕೊಳ್ಳಲು ಯತ್ನಿಸಿದ್ದಾಳೆ.
ಈ ಘಟನೆ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಸೋಮಯಾಜಲಹಳ್ಳಿ ಗ್ರಾಮದಲ್ಲಿ ನಡೆದಿದೆ. ಸದ್ಯ ಆತ್ಮಹತ್ಯೆಗೆ ಯತ್ನಿಸಿ ಬದುಕುಳಿದಿರುವ ಆಶಾರಾಣಿಯನ್ನು ಶ್ರೀನಿವಾಸಪುರ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಶ್ರೀನಿವಾಸಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.