ಯುಗಾದಿ ದಿನವೇ ಮುಗಿದ ಬದುಕು!; ಪತಿಯ ಅನುಮಾನಕ್ಕೆ ಪತ್ನಿ ಬಲಿ

Accused Ashwathappa
Published on

ಚಿಕ್ಕಬಳ್ಳಾಪುರ‌: ವರ್ಷಾರಂಭದ ಯುಗಾದಿಯಂದೇ ಇಲ್ಲೊಬ್ಬಾಕೆಯ ಜೀವನವೇ ಕೊನೆಗೊಂಡಿದೆ. ಅದರಲ್ಲೂ ಈಕೆಯ ಬದುಕು ಮುಗಿಯಲು ಪತಿಯೇ ಕಾರಣವಾಗಿದ್ದಾನೆ. ಅರ್ಥಾತ್, ಗಂಡನೇ ಹೆಂಡತಿಯನ್ನು ಕೊಲೆ ಮಾಡಿದ್ದಾನೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿದೆ.

ಶಿಡ್ಲಘಟ್ಟ ತಾಲೂಕಿನ ಚಿಕ್ಕದಿಬ್ಬೂರಹಳ್ಳಿ ಗ್ರಾಮದಲ್ಲಿ ಈ ಪ್ರಕರಣ ನಡೆದಿದೆ. ಚಿಕ್ಕದಿಬ್ಬೂರಹಳ್ಳಿ ಗ್ರಾಮದ ಗಾಯತ್ರಿ (35) ಕೊಲೆಯಾದ ಮಹಿಳೆ. ಈಕೆಯ ಪತಿ ಅಶ್ವತ್ಥಪ್ಪ (42) ಕೊಲೆ ಆರೋಪಿ. ಪತ್ನಿಯ ಮೇಲಿನ ಅನುಮಾನದಿಂದ ಈತ ಈ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

ಗಾಯತ್ರಿಯನ್ನು ದೊಣ್ಣೆಯಿಂದ ಹೊಡೆದು, ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಈ ದಂಪತಿಗೆ ಇಬ್ಬರು ಮಕ್ಕಳಿದ್ದು, ಅವರೀಗ ತಾಯಿಯನ್ನು ಕಳೆದುಕೊಂಡಂತಾಗಿದೆ. ದಿಬ್ಬೂರಹಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net