ದೆಹಲಿಯಲ್ಲಿ ಭೂಕಂಪ!; ವರ್ಷಾರಂಭದಲ್ಲೇ ನಡುಗಿದ ಭೂಮಿ, ಆತಂಕದಲ್ಲಿ ರಾಜಧಾನಿಯ ಜನತೆ

Earthquake (1)
Published on

ನವದೆಹಲಿ: ವರ್ಷದ ಮೊದಲ ದಿನವಾದ ಯುಗಾದಿಯಂದೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭೂಕಂಪ ಸಂಭವಿಸಿದ್ದು, ಆತಂಕ ಸೃಷ್ಟಿಸಿದೆ. ಇಂದು ಸಂಜೆ ಸುಮಾರಿಗೆ ಈ ಭೂಕಂಪನ ಉಂಟಾಗಿದ್ದು, ರಿಕ್ಟರ್ ಮಾಪಕದಲ್ಲೂ ಇದರ ತೀವ್ರತೆ ದಾಖಲಾಗಿದೆ.

ನ್ಯಾಷನಲ್ ಸೆಂಟರ್​ ಫಾರ್ ಸೀಸ್ಮಾಲಜಿ (ಎನ್​ಸಿಎಸ್​) ಮಾಹಿತಿ ಪ್ರಕಾರ ಇಂದು ಸಂಜೆ 4.42 ನಿಮಿಷದಲ್ಲಿ ಭೂಕಂಪ ಉಂಟಾಗಿದ್ದು, ರಿಕ್ಟರ್ ಮಾಪಕದಲ್ಲಿ ಇದರ ತೀವ್ರತೆ 2.7ರಷ್ಟಿತ್ತು. ಅದರಲ್ಲೂ ಈ ಭೂಕಂಪದ ಕೇಂದ್ರಬಿಂದು ಪಶ್ಚಿಮ ದೆಹಲಿ ಭಾಗದಲ್ಲಿ ಕಂಡುಬಂದಿತ್ತು ಎಂದು ಎನ್​ಸಿಎಸ್ ಹೇಳಿದೆ.

ಅಫ್ಘಾನಿಸ್ತಾನ ಕೇಂದ್ರಬಿಂದುವಾಗಿದ್ದ ಭಾರಿ ಭೂಕಂಪ ನಿನ್ನೆ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ ಅದರ ತೀವ್ರತೆ 6.8ರಷ್ಟಿತ್ತು. ಈ ಭೂಕಂಪ ಅಫ್ಘಾನಿಸ್ತಾನ, ಪಾಕಿಸ್ತಾನ ಮಾತ್ರವಲ್ಲದೆ ಉತ್ತರ ದೆಹಲಿಯ ಕೆಲವು ಭಾಗದಲ್ಲಿ ಕಂಪನವನ್ನು ಉಂಟುಮಾಡಿತ್ತು. ಇದರ ಮರುದಿನವೇ ಇಂದು ಮತ್ತೆ ಭೂಕಂಪ ಉಂಟಾಗಿದ್ದು ಆತಂಕವನ್ನು ಹೆಚ್ಚಾಗಿಸಿದೆ.

ಇದು ಲಘು ಭೂಕಂಪವಾದರೂ ದೆಹಲಿಯ ಜಾಮಿಯಾನಗರ, ಕಲ್ಕಜಿ ಮತ್ತು ಷಹದಾರ ಪ್ರದೇಶಗಳಲ್ಲಿ ಕಟ್ಟಡಗಳು ವಾಲಿದ್ದಲ್ಲದೆ, ಬಿರುಕುಂಟಾಗಿವೆ ಎಂದು ದೆಹಲಿ ಅಗ್ನಿಶಾಮಕ ದಳಕ್ಕೆ ಕರೆಗಳು ಬಂದಿದ್ದವು. ಆದರೆ ಅಂಥ ಯಾವುದೇ ಬೆಳವಣಿಗೆ ಕಂಡುಬಂದಿಲ್ಲ, ಜನರು ಆತಂಕ ಹಾಗೂ ಅನುಮಾನದಿಂದ ಕರೆ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net