ಮದುವೆ ಸಂಭ್ರಮದಲ್ಲಿರುವಾಗಲೇ ಹೃದಯಾಘಾತ; ನರ್ತಿಸುತ್ತಿರುವಾಗ ಕುಸಿದು ಬಿದ್ದು ಸಾವಿಗೀಡಾದ ಮಹಿಳೆ

Heart Attack (2)
Published on

ತೆಲಂಗಾಣ: ಸಂಭ್ರಮದಲ್ಲಿರುವಾಗಲೇ ಶೋಕದ ವಾತಾವರಣ ಆವರಿಸಿಕೊಳ್ಳುತ್ತಿರುವ, ಕುಸಿದು ಬಿದ್ದು ಸಾವಿಗೀಡಾಗುತ್ತಿರುವ ಪ್ರಕರಣಗಳು ಹೆಚ್ಚಾಗಿದ್ದು, ಮತ್ತೊಂದು ಪ್ರಕರಣ ಈ ಪಟ್ಟಿಗೆ ಸೇರಿದೆ. ಮಹಿಳೆಯೊಬ್ಬರು ಮದುವೆ ಸಂಭ್ರಮದಲ್ಲಿರುವಾಗಲೇ ಹೃದಯಾಘಾತಕ್ಕೀಡಾಗಿ ಮೃತಪಟ್ಟಿದ್ದಾರೆ.

ತೆಲಂಗಾಣದ ಖಮ್ಮಂ ಜಿಲ್ಲೆಯ ಅಲ್ಲೀಪುರಂ ನಿವಾಸಿ ರಾಣಿ (30) ಎಂಬಾಕೆ ಸಾವಿಗೀಡಾದ ಮಹಿಳೆ. ಖಮ್ಮಂ ಹೊರವಲಯದ ಸೀತಂಪೇಟೆ ಎಂಬಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭದಲ್ಲಿ ಈ ಸಾವು ಸಂಭವಿಸಿದೆ. ಸಂಬಂಧಿಯ ಮದುವೆಗೆ ಬಂದಿದ್ದ ಈಕೆ ಇತರರೊಡನೆ ನೃತ್ಯಕ್ಕೆ ಹೆಜ್ಜೆ ಹಾಕಿದ್ದರು.

ಮದುವೆಯ ಕೊನೆಯಲ್ಲಿ ವಧುವನ್ನು ಪತಿಯ ಮನೆಗೆ ಕಳುಹಿಸಿಕೊಡುವಾಗ ನರ್ತಿಸುತ್ತಿದ್ದ ರಾಣಿ ಕುಸಿದು ಕೆಳಕ್ಕೆ ಬಿದ್ದಿದ್ದರು. ಕೂಡಲೇ ಆಕೆಯನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಾಗಲೇ ಮೃತಪಟ್ಟಿದ್ದಾಗಿ ವೈದ್ಯರು ಖಚಿತ ಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net