ವಿಮಾನದಲ್ಲೇ ಹೃದಯಾಘಾತ; ಆಕಾಶದಲ್ಲೇ ಹಾರಿಹೋದ ಪ್ರಾಣಪಕ್ಷಿ

Heart Attack (1)
Published on

ಮುಂಬೈ: ದೇಶದಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗಿದ್ದು, ಸದ್ಯಕ್ಕಂತೂ ಅದು ಯಾಕೆ ಸಂಭವಿಸುತ್ತಿದೆ ಎಂಬುದು ಬಗೆಹರಿಯದ ಸಂಗತಿಯಂತಾಗಿದೆ. ಈ ನಡುವೆ ಹೃದಯಾಘಾತದಿಂದಾದ ಸಾವಿನ ಪ್ರಕರಣಗಳು ಮುಂದುವರಿದಿದ್ದು, ಇನ್ನೊಂದು ಅಂಥದ್ದೇ ಪ್ರಕರಣ ಸಂಭವಿಸಿದೆ.

ವಿಶೇಷವೆಂದರೆ ಈ ಪ್ರಕರಣದಲ್ಲಿ ಆಕಾಶದಲ್ಲೇ ಪ್ರಾಣಪಕ್ಷಿ ಹಾರಿಹೋಗಿದೆ. ಅರ್ಥಾತ್, ವಿಮಾನದಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕರೊಬ್ಬರು ಹೃದಯಾಘಾತಕ್ಕೀಡಾಗಿ ಸಾವಿಗೀಡಾಗಿದ್ದಾರೆ. ಮುಂಬೈನಿಂದ ಬ್ಯಾಂಕಾಕ್​ಗೆ ಹೊರಟಿದ್ದ ವಿಮಾನದಲ್ಲಿ ಈ ಸಾವು ಸಂಭವಿಸಿದೆ.

ಭಾನುವಾರ ಇಂಡಿಗೊ 6ಇ-57 ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರು ಎದೆನೋವಿನಿಂದ ಅಸ್ವಸ್ಥರಾಗಿದ್ದರು. ವಿಮಾನ ಹೊರಟ ಒಂದು ಗಂಟೆಯೊಳಗೆ ಈ ಘಟನೆ ನಡೆದಿದ್ದು, ವೈದ್ಯಕೀಯ ಚಿಕಿತ್ಸೆಯ ಅನಿವಾರ್ಯತೆಯಿಂದ ವಿಮಾನವನ್ನು ಕೂಡಲೇ ಮ್ಯಾನ್ಮಾರ್​ನತ್ತ ಡೈವರ್ಟ್​ ಮಾಡಲಾಯಿತಾದರೂ, ಹೃದಯಾಘಾತಕ್ಕೀಡಾಗಿದ್ದ ಪ್ರಯಾಣಿಕ ಅಷ್ಟರಲ್ಲಾಗಲೇ ಸಾವಿಗೀಡಾಗಿದ್ದರು. ಸಾವಿಗೀಡಾದ ವ್ಯಕ್ತಿಯ ವಿವರ ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net