ನಿದ್ರಾಹೀನತೆಯಲ್ಲಿ ಭಾರತಕ್ಕೆ ಎರಡನೇ ಸ್ಥಾನ; ನಿದ್ರಾಹೀನತೆಗೆ ಪ್ರಮುಖ ಕಾರಣವೇ ಇದು!

Sleep Deprived
Published on

ನವದೆಹಲಿ: ಇಂದು ವಿಶ್ವ ನಿದ್ರಾ ದಿನ. ಜಗತ್ತಿನಾದ್ಯಂತ ಆಚರಿಸುತ್ತಿರುವ ಈ ಅಂತಾರಾಷ್ಟ್ರೀಯ ನಿದ್ರಾ ದಿನದ ಹಿನ್ನೆಲೆಯಲ್ಲಿ ನಿದ್ರೆಗೆ ಸಂಬಂಧಿಸಿದ ಒಂದಷ್ಟು ಸಂಗತಿಗಳು ಹೊರಬರುವುದು ಸರ್ವೇಸಾಮಾನ್ಯ. ಅದೇ ರೀತಿ ಈ ವರ್ಷವೂ ನಿದಿರೆಯ ಬಗ್ಗೆ ಕೆಲವು ಮಾಹಿತಿ ಬಹಿರಂಗಗೊಂಡಿದೆ.

ಅದರಲ್ಲೂ ನಿದ್ರಾಹೀನತೆಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ ಎಂಬುದು ಅಧ್ಯಯನವೊಂದರಿಂದ ಬಹಿರಂಗಗೊಂಡಿದೆ. ನಿದ್ರಾಹೀನತೆಯ ವಿಚಾರದಲ್ಲಿ ಜಗತ್ತಿನಲ್ಲಿ ಜಪಾನ್ ಮೊದಲ ಸ್ಥಾನದಲ್ಲಿದ್ದರೆ, ಭಾರತ ಎರಡನೇ ಸ್ಥಾನದಲ್ಲಿದೆ.

ZzzQuil ಇಂಡಿಯಾ ನ್ಯಾಷನಲ್​ ಸ್ಲೀಪ್​ ಸರ್ವೇ ಪ್ರಕಾರ ನಿದ್ರಾಹೀನತೆ ಪ್ರಮುಖ ಕಾರಣ ಕೂಡ ಬಯಲಾಗಿದೆ. ನಿದ್ರಾಹೀನತೆಯಲ್ಲಿ ಬಳಲುತ್ತಿರುವವರ ಪೈಕಿ ಶೇ. 54 ಜನರಲ್ಲಿ ಅವರ ನಿದ್ರಾಸಮಸ್ಯೆಗೆ ಸೋಷಿಯಲ್​ ಹಾಗೂ ಡಿಜಿಟಲ್ ಮೀಡಿಯಾ ವ್ಯಸನವೇ ಕಾರಣ ಎಂಬುದೂ ತಿಳಿದುಬಂದಿದೆ.

ಮತ್ತೊಂದೆಡೆ ದ ಗ್ರೇಟ್ ಇಂಡಿಯಾ ಸ್ಲೀಪ್​ ಸ್ಕೋರ್​​ಕಾರ್ಡ್​ ಪ್ರಕಾರ ಭಾರತದಲ್ಲಿ ಶೇ. 87 ಮಂದಿ ಮಲಗುವುದಕ್ಕೂ ಮುನ್ನ ಸ್ಮಾರ್ಟ್​ಫೋನ್​ ಬಳಸುವುದೇ ನಿದ್ರಾಹೀನತೆಗೆ ಪ್ರಮುಖ ಕಾರಣ. ಇನ್ನು ಮಹಿಳೆಯರಲ್ಲಿ ಸುಮಾರು ಶೇ. 67 ಮಂದಿ ಕೆಲಸದ ವೇಳೆ ತೂಕಡಿಸಿದರೆ, ಪುರುಷರಲ್ಲಿ ಈ ಪ್ರಮಾಣ ಶೇ. 56. ಅದರಲ್ಲೂ ಕಳೆದ ಒಂದು ವರ್ಷದಲ್ಲಿ ಕೆಲಸದ ವೇಳೆ ತೂಕಡಿಸುವವರ ಪ್ರಮಾಣ ಭಾರತದಲ್ಲಿ ಶೇ. 21 ಹೆಚ್ಚಾಗಿದೆ ಎಂದೂ ಈ ಅಧ್ಯಯನ ಹೇಳಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net