ಪೊಲೀಸರಿಂದಲೇ ಅಪಹರಣ, ಹಣಕ್ಕೆ ಬೇಡಿಕೆ?; ತಲೆಮರೆಸಿಕೊಂಡಿರುವ ಸಬ್​ ಇನ್​ಸ್ಪೆಕ್ಟರ್!

Accused Police
ಬಂಧಿತ ಹೆಡ್​ ಕಾನ್​ಸ್ಟೆಬಲ್ ಹರೀಶ್
Published on

ಬೆಂಗಳೂರು: ಪೊಲೀಸರ ವಿರುದ್ಧವೇ ಕಿಡ್ನ್ಯಾಪ್ ಹಾಗೂ ಬ್ಲ್ಯಾಕ್​ಮೇಲ್ ದೂರು ನೀಡಲಾಗಿದ್ದು, ಕಮಿಷನರ್​ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುತ್ತಿದ್ದಂತೆ ಆರೋಪಿಗಳಲ್ಲಿ ಒಬ್ಬನಾಗಿರುವ ಹೆಡ್​ಕಾನ್​ಸ್ಟೆಬಲ್ ಬಂಧನವಾಗಿದೆ. ಮತ್ತೊಂದೆಡೆ ಇನ್ನೊಬ್ಬ ಆರೋಪಿಯಾಗಿರುವ ಸಬ್​ ಇನ್​ಸ್ಪೆಕ್ಟರ್ ಪರಾರಿಯಾಗಿ ತಲೆಮರೆಸಿಕೊಂಡಿದ್ದಾನೆ.

ಹುಲಿ ಉಗುರು ಹಾಗೂ ಚರ್ಮವನ್ನು ಮಾರಾಟ ಮಾಡುತ್ತಿದ್ದವನನ್ನು ಶನಿವಾರ ಕರೆದೊಯ್ದಿದ್ದ ಪೊಲೀಸರು ನಂತರ ಆತನ ಕಡೆಯವರಿಗೆ ಕರೆ ಮಾಡಿ 40 ಲಕ್ಷ ರೂ. ಕೊಡುವಂತೆ ಬೇಡಿಕೆ ಇಟ್ಟಿದ್ದರು. ಈ ಹಿನ್ನೆಲೆಯಲ್ಲಿ ಮಾರತಹಳ್ಳಿ ಠಾಣೆ ಪಿಎಸ್​​ಐ ರಂಗೇಶ್ ಹಾಗೂ ಹೆಡ್​ ಕಾನ್​ಸ್ಟೆಬಲ್ ಹರೀಶ್ ವಿರುದ್ಧ ಬಾಗಲೂರು ಪೊಲೀಸ್​ ಠಾಣೆಯಲ್ಲಿ ದೂರು ನೀಡಲಾಗಿತ್ತು.

ಆರೋಪಿಯನ್ನು ಕರೆದೊಯ್ದಿದ್ದಲ್ಲದೆ ಆತನ ತಲೆಗೆ ಗನ್​ ಇಟ್ಟು ಹಣ ಕೊಡುವಂತೆ ಆತನ ಕಡೆಯವರಿಗೆ ಕರೆ ಮಾಡಿಸಿದ್ದಾಗಿ ದೂರು ನೀಡಲಾಗಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಕಮಿಷನರ್​ ಪ್ರತಾಪ್ ರೆಡ್ಡಿ, ಆರೋಪಿ ಪೊಲೀಸರನ್ನು ಬಂಧಿಸುವಂತೆ ಸೂಚನೆ ನೀಡಿದ್ದರು.

ಈ ಹಿನ್ನೆಲೆಯಲ್ಲಿ ನಿನ್ನೆ ಹೆಡ್​ ಕಾನ್​​ಸ್ಟೆಬಲ್ ಹರೀಶ್​ನನ್ನು ಬಾಗಲೂರು ಪೊಲೀಸರು ಬಂಧಿಸಿದ್ದರು. ಈ ವಿಷಯ ತಿಳಿಯುತ್ತಿದ್ದಂತೆ ಪರಾರಿಯಾದ ಎಸ್​ಐ ರಂಗೇಶ್ ತಲೆಮರೆಸಿಕೊಂಡಿದ್ದು, ಆತನಿಗಾಗಿ ತೀವ್ರ ಶೋಧ ನಡೆಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net