ಮುತ್ತು ತಂದ ಆಪತ್ತು: ಪತಿಯ ನಾಲಿಗೆಯನ್ನೇ ಕಚ್ಚಿ ಗಾಯಗೊಳಿಸಿದ ಹೆಂಡತಿ

andra kiss
Published on

ಕರ್ನೂಲ್: ಪತ್ನಿಯೊಬ್ಬಳು ಉದ್ದೇಶಪೂರ್ವಕವಾಗಿ ತನ್ನ ಪತಿಯ ನಾಲಿಗೆಯನ್ನು ಕಚ್ಚಿದ ವಿಲಕ್ಷಣ ಘಟನೆ ಆಂಧ್ರಪ್ರದೇಶದ ಕರ್ನೂಲ್‌ನ ತುಗ್ಗಲಿ ಮಂಡಲದ ಯಲ್ಲಮ್ಮಗುಟ್ಟ ತಾಂಡಾದಲ್ಲಿ ನಡೆದಿದೆ.

ಇದನ್ನೂ ಓದಿ: ಬಾಲಿವುಡ್ ನಟನಿಗೆ 1.55 ಕೋಟಿ ರೂ. ವಂಚನೆ: ನಂಬಿದವರಿಂದಲೇ ಮೋಸ..?

ತಾಂಡಾದ ನಿವಾಸಿಯಾಗಿರುವ ಚಂದು ನಾಯ್ಕ್ ಎಂಬಾತನ ನಾಲಿಗೆಗೆ ಗಾಯಗಳಾಗಿದ್ದು, ಆತನ ಪುಷ್ಪಾವತಿವೇ ಈ ಕೃತ್ಯವನ್ನು ಎಸಗಿದ್ದಾಳೆ. ಚಂದು ನಾಯ್ಕ ಹಾಗೂ ಆತನ ಪರಸ್ಪರ ಪ್ರೀತಿಸಿ 2015ರಲ್ಲಿ ಮದುವೆಯಾಗಿದ್ದು, ಈ ದಂಪತಿಗಳಿಗೆ ಇಬ್ಬರು ಮಕ್ಕಳಿದ್ದಾರೆ. ದಂಪತಿಯ ನಡುವೆ ಹೊಂದಾಣಿಕೆಯ ಸಮಸ್ಯೆಗಳಿದ್ದು, ಕಳೆದ ಎರಡು ವರ್ಷಗಳಿಂದ ಆಗಾಗ್ಗೆ ಜಗಳವಾಡುತ್ತಿದ್ದರು.

ಶುಕ್ರವಾರದಂದು ಚಂದು ಮದ್ಯ ಸೇವಿಸಿದ ನಂತರ ಪತಿಗೆ ಮುತ್ತು ನೀಡಲು ಯತ್ನಿಸಿದ್ದಾನೆ, ಆದರೆ ಈ ವೇಳೆ ಆತನ ಪತ್ನಿ ನಿರಾಕರಿಸಿದ್ದಾಳೆ. ಕೊನೆಗೆ ಚಂದು ಬಲವಂತವಾಗಿ ಚಂದು ತನ್ನ ಹೆಂಡತಿಗೆ ಮುತ್ತು ಕೊಡಲು ಮುಂದಾಗಿದ್ದು, ಈ ವೇಳೆ ಆಕೆ ಆತನ ನಾಲಿಗೆಯನ್ನು ಕಚ್ಚಿದ್ದಾಳೆ. ಘಟನೆಯಿಂದಾಗಿ ಚಂದುವಿನ ನಾಲಿಗೆ ಗಂಭೀರವಾಗಿ ಗಾಯವಾಗಿದ್ದು ಕೂಡಲೇ ಆತನನನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ.

ಇದನ್ನೂ ಓದಿ: ಜನರ ಬದುಕೇ ಹಾಲಾಹಲ, ಸರ್ಕಾರದ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಕಿಡಿ

ತನ್ನ ಇಚ್ಛೆಗೆ ವಿರುದ್ಧವಾಗಿ ಹಲ್ಲೆ ನಡೆಸಿ, ಬಲವಂತವಾಗಿ ಮುತ್ತು ನೀಡಿದ್ದರಿಂದ ಹೀಗೆ ಮಾಡಿರುವುದಾಗಿ ಪುಷ್ಪಾವತಿ ಜೊನ್ನಗಿರಿ ಪೊಲೀಸರಿಗೆ ದೂರು ನೀಡಿದ್ದಾಳೆ. ಇದೇ ವೇಳೆ ಆಕೆ ಉದ್ದೇಶಪೂರ್ವಕವಾಗಿ ನಾಲಿಗೆ ಕಚ್ಚಿದ್ದಾಳೆ ಎಂದು ತಾರಾಚಂದ್ ನಾಯ್ಕ್ ಆರೋಪಿಸಿದ್ದಾನೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net