ಬಾಲಿವುಡ್ ನಟನಿಗೆ 1.55 ಕೋಟಿ ರೂ. ವಂಚನೆ: ನಂಬಿದವರಿಂದಲೇ ಮೋಸ..?

vivek
Published on

ಮುಂಬೈ: ಮೂವರು ವ್ಯಕ್ತಿಗಳು ತನಗೆ ಹಣಕಾಸಿನ ವಿಚಾರದಲ್ಲಿ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ ಬಾಲಿವುಡ್ ನಟ ಪೊಲೀಸರಿಗೆ ದೂರು ನೀಡಿದ್ದಾರೆ.

ಇದನ್ನೂ ಓದಿ: ಮಹಿಳೆಯರ ಭದ್ರತೆ ಬಗ್ಗೆ ತಮ್ಮ ಸರ್ಕಾರದ ವಿರುದ್ಧವೇ ಟೀಕೆ: ಸತ್ಯ ಹೇಳಿದ್ದಕ್ಕೆ ನನ್ನನ್ನು ವಜಾ ಮಾಡಿದ್ದಾರೆಂದ ಸಚಿವ

ವಿವೇಕ್ ಒಬೆರಾಯ್​​ಗೆ ಅವರು ಈವೆಂಟ್ ಮತ್ತು ಚಲನಚಿತ್ರ ನಿರ್ಮಾಣ ಸಂಸ್ಥೆಯಲ್ಲಿ ಹೂಡಿಕೆಯ ಮೇಲೆ ಉತ್ತಮ ಆದಾಯವನ್ನು ನೀಡುವುದಾಗಿ ಭರವಸೆ ನೀಡಿದ ಮೂವರು ವ್ಯಕ್ತಿಗಳಿಂದ 1.55 ಕೋಟಿ ರೂಪಾಯಿಗಳನ್ನು ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ

ನಟನ ಚಾರ್ಟರ್ಡ್ ಅಕೌಂಟೆಂಟ್, ಮೂವರ ವಿರುದ್ಧ ಅಂಧೇರಿ ಪೂರ್ವದ ಎಂಐಡಿಸಿ ಪೊಲೀಸ್ ಠಾಣೆಯಲ್ಲಿ ಬುಧವಾರ ದೂರು ದಾಖಲಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಆ ಮೂವರು ನಟನ ಬ್ಯುಸಿನೆಸ್​ ಪಾರ್ಟನ​ರ್​ ಎಂದು ಹೇಳಲಾಗಿದ್ದು, ಕಾರ್ಯಕ್ರಮ ಮತ್ತು ಸಿನಿಮಾಗೆ ಬಂಡವಾಳ ಹೂಡಿದರೆ ಹೆಚ್ಚಿನ ಲಾಭ ಕೊಡಲಾಗುವುದು ಎಂದು ಹೇಳಿದ್ದರು.

ಆದರೆ ಹಣವನ್ನು ಹೂಡಿಕೆ ಮಾಡಿದ ಬಳಿಕ, ಆ ಹಣವನ್ನು ತಮ್ಮ ಸ್ವಂತಕ್ಕಾಗಿ ಬಳಸಿಕೊಂಡಿದ್ದಾರೆ. ಈ ಮೂಲಕ ತನಗೆ ಸುಮಾರು 1.55 ಕೋಟಿ ರೂ. ವಂಚನೆ ಆಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಮೂವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದ್ದು, ಈ ಪ್ರಕರಣದ ತನಿಖೆ ನಡೆಯುತ್ತಿದೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net