VIDEO | ಮರದ ಎಲೆಗಳನ್ನು ತಿಂದ ಸಿಂಹ, ದೃಶ್ಯ ನೋಡಿ ಹುಬ್ಬೇರಿಸಿದ ನೆಟ್ಟಿಗರು..!

lion
Published on

ದೆಹಲಿ: ಪ್ರಕೃತಿಯಲ್ಲಿ ವಿಚಿತ್ರಗಳು ಆಗಾಗ ಸಂಭವಿಸುತ್ತಲೇ ಇರುತ್ತವೆ ಎಂಬುದಕ್ಕೆ ಸಾಕಷ್ಟು ಉದಾಹರಣಗಳಿವೆ. ಇದಕ್ಕೆ ಪುಷ್ಟಿ ಎಂಬಂತೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು, ಸಿಂಹವೊಂದು ಮರದ ಎಲೆಯನ್ನು ತಿನ್ನುತ್ತಿರುವ ದೃಶ್ಯ ಎಲ್ಲೆಡೆ ಹರಿದಾಡುತ್ತಿದೆ.

ಸಿಂಹ ಅನಾದಿಕಾಲದಿಂದಲೂ ಮಾಂಸಹಾರಿ ಪ್ರಾಣಿಯಾಗಿದ್ದು, ಅದು ಮಾಂಸವನ್ನು ಸೇವಿಸುತ್ತದೆ ಎಂಬುದು ತಿಳಿದ ವಿಚಾರ. ಆದರೆ ಐಎಫ್​ಎಸ್​ ಅಧಿಕಾರಿ ಸುಸಾಂತಾ ನಂದಾ ಎಂಬುವರು ಶೇರ್​ ಮಾಡಿರುವ ವಿಡಿಯೋ ನೋಡಿ ಎಲ್ಲರೂ ದಿಗ್ಭ್ರಮೆಗೊಂಡಿದ್ದಾರೆ.


ಸಿಂಹಗಳು ಕೆಲವೊಮ್ಮೆ ಹುಲ್ಲು ಮತ್ತು ಎಲೆಗಳನ್ನು ತಿನ್ನುತ್ತವೆ. ಇದು ಕೇಳಲು ಆಶ್ಚರ್ಯ ಎನಿಸಿದರೂ ಅದು ಹಾಗೇ ಮಾಡಲು ಹಲವು ಕಾರಣಗಳಿವೆ. ಸಿಂಹಗಳಿಗೂ ಕೂಡ ಮಾನವರಂತೆ ಕೆಲವೊಮ್ಮೆ ಹೊಟ್ಟೆ ನೋವು ಕಾಡುತ್ತದೆ. ಇದನ್ನು ಶಮನ ಮಾಡಲು ಸಿಂಹಗಳು ಎಲೆಗಳು ಮತ್ತು ಹುಲ್ಲುಗಳನ್ನು ತಿನ್ನುತ್ತವೆ. ಇದು ಹೊಟ್ಟೆ ನೋವನ್ನು ಪರಿಹರಿಸಲು ಸಹಾಯ ಮಾಡುವುದರ ಜತೆಗೆ ದೇಹಕ್ಕೆ ಅಗತ್ಯವಿರುವ ನೀರನ್ನು ನೀಡುತ್ತದೆ. ಬೆಕ್ಕು ಮತ್ತು ಸಿಂಹ ಒಂದೇ ಕುಟುಂಬ ವರ್ಗಕ್ಕೆ ಸೇರಿವೆ. ಬೆಕ್ಕುಗಳು ಕೆಲವೊಮ್ಮೆ ಹೇಗೆ ಹುಲ್ಲು ತಿನ್ನುವುದನ್ನು ನಾವು ನೋಡಿರುತ್ತೇವೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net