VIDEO | ಹಾವನ್ನೇ ಜಗಿದು ನುಂಗಿದ ಜಿಂಕೆ, ಇದು ಹುಲ್ಲಲ್ಲ ಹಾವು ಎಂದ ನೆಟ್ಟಿಗರು..!

snake eating deer
Published on

ದೆಹಲಿ: ಪ್ರಕೃತಿಯಲ್ಲಿ ಏನೆಲ್ಲ ವಿಚಿತ್ರಗಳು ಸಂಭವಿಸುತ್ತವೆ ಎಂಬುದಕ್ಕೆ ಸಾಕಷ್ಟು ಉದಾಹರಣಗಳಿವೆ. ಇದಕ್ಕೆ ಪುಷ್ಟಿ ಎಂಬಂತೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು, ಜಿಂಕೆಯೊಂದು ಹಾವನ್ನು ಜಗಿದು ನುಂಗುತ್ತಿರುವ ದೃಶ್ಯ ಎಲ್ಲೆಡೆ ಹರಿದಾಡುತ್ತಿದೆ.

ನಾವು-ನೀವು ತಿಳಿದುಕೊಂಡಂತೆ ಜಿಂಕೆ ಅನಾದಿಕಾಲದಿಂದಲೂ ಜಿಂಕೆ ಸಸ್ಯಹಾರಿ ಪ್ರಾಣಿಯಾಗಿದ್ದು, ಇದು ಸಸ್ಯ, ಹುಲ್ಲು ಮತ್ತಿತರ ಆಹಾರವನ್ನು ಸೇವಿಸುತ್ತದೆ. ಆದರೆ ಐಎಫ್​ಎಸ್​ ಅಧಿಕಾರಿ ಸುಸಾಂತಾ ನಂದಾ ಎಂಬುವರು ಶೇರ್​ ಮಾಡಿರುವ ವಿಡಿಯೋ ನೋಡಿ ಎಲ್ಲರೂ ದಿಗ್ಭ್ರಮೆಗೊಂಡಿದ್ದಾರೆ.

ವಿಡಿಯೋವನ್ನು ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿರುವ ಅಧಿಕಾರಿ, ಕ್ಯಾಮೆರಾಗಳು ನೈಸರ್ಗಿಕ ಪ್ರಪಂಚದ ಉತ್ತಮ ಗ್ರಹಿಕೆಯನ್ನು ಪಡೆಯಲು ನಮಗೆ ಅವಕಾಶ ಮಾಡಿಕೊಡುತ್ತವೆ. ಸಸ್ಯಹಾರಿಗಳು ಸಾಂದರ್ಭಿಕವಾಗಿ ಹಾವುಗಳನ್ನು ತಿನ್ನುತ್ತವೆ ಎಂಬ ಅಡಿಬಹರವನ್ನು ನೀಡಿದ್ದಾರೆ.

ಈ ವಿಡಿಯೋಗೆ ನೆಟ್ಟಿಗರು ತರಹೇವಾರಿ ಕಾಮೆಂಟ್​ಗಳನ್ನು ಮಾಡುತ್ತಿದ್ದು, ಕೆಲವರು ಜಿಂಕಗೆ ಸಸ್ಯಹಾರ ಪದಾರ್ಥವನ್ನು ತಿಂದು ಬೇಜಾರಗಿರಬೇಕು. ಅದಕ್ಕೆ ಮಾಂಸವನ್ನು ತಿನ್ನುತ್ತಿದೆ ಎಂದಿದ್ದಾರೆ. ಇನ್ನು ಕೆಲವರು ನಾನು ಶಾಲೆಯಲ್ಲಿ ಪರಿಸರ ವಿಜ್ಞಾನ ವಿಷಯವನ್ನು ಓದಿಲ್ಲ ಎಂಬಿತ್ಯಾದಿ ಕಾಮೆಂಟ್​ಗಳನ್ನು ಮಾಡುತ್ತಿದ್ದಾರೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net