

ಆದರೆ ಕೆಲವು ಮರಗಳಲ್ಲಿ ರಾತ್ರಿಹೊತ್ತು ನೇರವಾಗಿ ಸೂರ್ಯನ ಕಿರಣಗಳು ಇಲ್ಲದೇ ಇದ್ದರೂ ಅಂದಿನ ಹವಾಗುಣದ ಉಷ್ಣಾಂಶವನ್ನು ಉಪಯೊಗಿಸಿಕೊಂಡು ದ್ಯುತಿಸಂಶ್ಲೇಷಣೆ ಮಾಡುತ್ತವೆ. ಕೆಲವು ಸಸ್ಯಗಳು ಚಂದ್ರನ ಬೆಳಕಿನ ಶಕ್ತಿ ಗುರುತ್ವಾಕರ್ಷಣೆ ಶಕ್ತಿಯಿಂದ ಮರಗಳ ಒಳಗಿರುವ ಉಷ್ಣಾಂಶತೆಯಿಂದ ದ್ಯುತಿಸಂಶ್ಲೇಷಣೆ ಮಾಡುತ್ತವೆ. ಆದ್ದರಿಂದ ಕೆಲವು ಸಸ್ಯಗಳಲ್ಲಿ ಹುಣ್ಣಿಮೆ ಮತ್ತು ಅಮಾವಾಸ್ಯೆಗಳ ಸಮಯದಲ್ಲಿ ದ್ಯುತಿಸಂಶ್ಲೇಷಣೆಯಲ್ಲಿ ಸ್ವಲ್ಪ ವ್ಯತ್ಯಾಸವಾಗುತ್ತದೆ. ಮತ್ತು ಮರದ ಒಳಗಿರುವ ಉಷ್ಣಾಂಶತೆಯು ಪ್ರತಿ ಮರಕ್ಕೂ ವ್ಯತ್ಯಾಸವಾಗುತ್ತದೆ. ಅರಳಿ ಮರದಲ್ಲಿ ಮನುಷ್ಯನ ದೇಹಕ್ಕೆ ಅಗತ್ಯವಿರುವ ಸೆರಟೋನಿನ್ ಎಂಬ ರಾಸಾಯನಿಕ ಅನಿಲ ಉತ್ಪತ್ತಿಯಾಗಿ ಗಾಳಿಯ ಮುಖಾಂತರ ನಮ್ಮ ದೇಹವನ್ನು ಸೇರಿ ಸಹಾಯ ಮಾಡುತ್ತದೆ. ಆದ್ದರಿಂದ ಅರಳಿ, ಆಲ, ಅತ್ತಿ ಮುಂತಾದ ಮರಗಳನ್ನು ನಾವು ಪೂಜಿಸುತ್ತೇವೆ.