ಶವದ ಮೇಲೆ ನಾಣ್ಯಗಳನ್ನು ಏಕೆ ಎಸೆಯುತ್ತಾರೆ ಗೊತ್ತಾ? ಇಲ್ಲಿದೆ ನೋಡಿ ಅಚ್ಚರಿಯ ಉತ್ತರ! Money

Money
Published on

Money : ಕುಟುಂಬದಲ್ಲಿ ಯಾರಾದರೂ ಸತ್ತಾಗ ಎಲ್ಲರೂ ಗೊಳೋ ಎಂದು ಅಳುವುದು ಸಾಮಾನ್ಯ. ಶವದ ಅಂತ್ಯಕ್ರಿಯೆ ಮುಗಿಯುವವರೆಗೂ ಕಣ್ಣೀರಿನಲ್ಲಿಯೇ ಕೈ ತೊಳೆಯುತ್ತಾರೆ. ಇಡೀ ಮನೆ ದುಃಖದಿಂದ ತುಂಬಿರುತ್ತದೆ. ಅಂತಹ ಸಮಯದಲ್ಲೂ ಅನೇಕ ವಿಧಿ-ವಿಧಾನಗಳನ್ನು ನಡೆಸಿ ಅಂತ್ಯಕ್ರಿಯೆಯನ್ನು ನೆರವೇರಿಸಲಾಗುತ್ತದೆ. ಇನ್ನು ಅಂತ್ಯಕ್ರಿಯೆ ವಿಧಿ-ವಿಧಾನಗಳು ಎಲ್ಲೆಡೆ ಒಂದೇ ರೀತಿ ಇರುವುದಿಲ್ಲ. ಕೆಲವರು ಕಣ್ಣೀರಿನ ವಿದಾಯ ಹೇಳಿದರೆ, ಇನ್ನು ಕೆಲವರು ಸಂಭ್ರಮದಿಂದಲೇ ಅಂತ್ಯಕ್ರಿಯೆ ನಡೆಸುತ್ತಾರೆ.

ಅಂತ್ಯಕ್ರಿಯೆಗೆ ಶವವನ್ನು ತೆಗೆದುಕೊಂಡು ಹೋಗುವಾಗ ಡ್ರಮ್ ಬಾರಿಸುವುದು ಮತ್ತು ಪಟಾಕಿಗಳನ್ನು ಸಿಡಿಸುವುದನ್ನು ನೀವೆಲ್ಲರೂ ನೋಡೇ ಇರುತ್ತೀರಿ. ಹೂಮಾಲೆಗಳನ್ನು ಹಾಕುತ್ತಾರೆ. ಅಲ್ಲದೆ, ದಾರಿಯುದ್ದಕ್ಕೂ ಸಣ್ಣ ನಾಣ್ಯಗಳನ್ನು ಶವದ ಮೇಲೆ ಎಸೆಯುತ್ತಾರೆ. ಆದರೆ, ನಾಣ್ಯವನ್ನು ಏಕೆ ಎಸೆಯುತ್ತಾರೆ ಎಂದು ಕೇಳಿದರೆ ಬಹುತೇಕ ಮಂದಿಗೆ ಉತ್ತರವೇ ತಿಳಿದಿಲ್ಲ. ಸಾಮಾನ್ಯವಾಗಿ, ನಾವು ಹಣವನ್ನು ಲಕ್ಷ್ಮಿ ದೇವಿಯ ರೂಪವೆಂದು ಪರಿಗಣಿಸುತ್ತೇವೆ. ಈ ರೀತಿಯ ಮೆರವಣಿಗೆಯ ಸಮಯದಲ್ಲಿ ರಸ್ತೆಯಾದ್ಯಂತ ಸಣ್ಣ ನಾಣ್ಯಗಳನ್ನು ಹರಡುವುದರ ಹಿಂದಿನ ಕಾರಣ ಏನಿರಬಹುದು ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.

ಬದುಕಿದ್ದಾಗ ಎಷ್ಟೇ ಸಂಪಾದಿಸಿದರೂ, ಸತ್ತ ನಂತರ ಒಂದು ರೂಪಾಯಿಯನ್ನೂ ತಮ್ಮೊಂದಿಗೆ ತೆಗೆದುಕೊಂಡು ಹೋಗಲು ಸಾಧ್ಯವಾಗುವುದಿಲ್ಲ ಎಂಬ ಸಂದೇಶವನ್ನು ಸಾರಲು ಈ ರೀತಿ ಹಣವನ್ನು ಎಸೆಯುತ್ತಾರೆ ಎಂದು ಹೇಳಲಾಗುತ್ತದೆ. ನಾಳೆ ನಿಮ್ಮ ಪರಿಸ್ಥಿತಿಯೂ ಹಾಗೆಯೇ ಇರುವುದರಿಂದ, ಧರ್ಮನಿಷ್ಠೆ ಮತ್ತು ನೀತಿವಂತಿಕೆಯಿಂದ ಬದುಕಲು ಸಂದೇಶವಾಗಿ ಈ ರೀತಿ ನಾಣ್ಯಗಳನ್ನು ಎಸೆಯಲಾಗುತ್ತದೆ ಎಂದು ಹೇಳಲಾಗಿದೆ.

ಸತ್ತವರ ಅಂತ್ಯಕ್ರಿಯೆಯ ಮೆರವಣಿಗೆಗಳಲ್ಲಿ ಹಣ ಎಸೆಯುವುದನ್ನು ನಾವು ಹಲವು ವರ್ಷಗಳಿಂದ ನೋಡುತ್ತಿದ್ದೇವೆ. ಈ ರೀತಿ ಎಸೆದ ಹಣವನ್ನು ಹೆಚ್ಚಾಗಿ ಭಿಕ್ಷುಕರು ಮತ್ತು ಮಕ್ಕಳು ಸಂಗ್ರಹಿಸುತ್ತಾರೆ. ಹೀಗೆ ಮಾಡಿದರೆ, ಕುಟುಂಬ ಸದಸ್ಯರು ಮೃತರ ಹೆಸರಿನಲ್ಲಿ ಬಡವರಿಗೆ ಸಹಾಯ ಮಾಡುವ ತೃಪ್ತಿಯನ್ನು ಹೊಂದಿರುತ್ತಾರೆ. ಅಂತ್ಯಕ್ರಿಯೆಯ ಮೆರವಣಿಗೆಗಳಲ್ಲಿ ಹೂವುಗಳು ಮತ್ತು ಕಡಲೆಪುರಿಯನ್ನು ಚೆಲ್ಲುವ ಪದ್ಧತಿ ಬಹಳ ಹಿಂದಿನಿಂದಲೂ ಇದೆ. ಹೂವುಗಳನ್ನು ಚೆಲ್ಲುವುದು ಎಂದರೆ ಸತ್ತವರನ್ನು ಗೌರವಿಸುವುದು ಮತ್ತು ಅವರನ್ನು ದೇವರೆಂದು ಪರಿಗಣಿಸುವುದು ಎಂದರ್ಥ. ಇನ್ನು ಕಡಲೆಪುರಿಯನ್ನು ಚೆಲ್ಲಿದರೆ ಅವುಗಳನ್ನು ಪಕ್ಷಿಗಳು ಮತ್ತು ಕೀಟಗಳನ್ನು ತಿನ್ನುತ್ತವೆ.

ನೀವು ಬದುಕಿರುವಾಗ ಎಷ್ಟೇ ಕೋಟಿ ಸಂಪಾದಿಸಿದರೂ, ನಾವು ನಮ್ಮೊಂದಿಗೆ ಒಂದು ರೂಪಾಯಿಯನ್ನು ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ. ಆದರೆ ನಾವು ಆ ಹಣಕ್ಕಾಗಿ ನಮ್ಮ ಜೀವನದುದ್ದಕ್ಕೂ ಹೋರಾಡುತ್ತೇವೆ. ಜೀವನ ಎಷ್ಟು ವಿಚಿತ್ರ ಅಲ್ವಾ?

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net