ಬೇಟೆಗಾರರ ಬಲೆಗೆ ಸಿಲುಕಿ ಕಾಲು ಕಳೆದುಕೊಂಡಿದ್ದ ಕರಡಿಗೆ ಕೃತಕ ಕಾಲು ಜೋಡಣೆ: ದೇಶದಲ್ಲೇ ಮೊದಲು! Bannerghatta National Park

Bannerghatta National Park
Published on

Bannerghatta National Park : ಮನುಷ್ಯರು ಕಾಲು ಕಳೆದುಕೊಂಡಾಗ ಕೃತಕ ಕಾಲು ಜೋಡಣೆ ಮಾಡುವುದು ಸಾಮಾನ್ಯ. ಸಾಕು ಪ್ರಾಣಿಗಳಿಗೂ ಅಳವಡಿಸಿರುವ ಉದಾಹರಣೆಗಳಿವೆ. ಆದರೆ, ವನ್ಯ ಜೀವಿಗಳ ವಿಚಾರಕ್ಕೆ ಬಂದಾಗ ಅಪರೂಪದಲ್ಲಿ ಅಪರೂಪ ಎನ್ನಬಹುದು. ಅಂಥಾ ಅಪರೂಪದ ಘಟನೆ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ನಡೆದಿದೆ.

ಹೌದು, ಕಾಲಿಲ್ಲದ ಕರಡಿಗೆ ಕೃತಕ ಕಾಲು ಜೋಡಣೆ ಯಶಸ್ವಿಯಾಗಿದ್ದು, ಪಶು ವೈದ್ಯಕೀಯ ಕ್ಷೇತ್ರದಲ್ಲಿ ಒಂದು ಮೈಲಿಗಲ್ಲು ಸೃಷ್ಟಿಯಾಗಿದೆ. ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಕರಡಿಗೆ ಕೃತಕ ಕಾಲು ಜೋಡಣೆ ಮಾಡಲಾಗಿದೆ.

Bannerghatta National Park

ವಸಿಕರನ್ ಹೆಸರಿನ ಕರಡಿ ಬೇಟೆಗಾರರ ಬಲೆಗೆ ಸಿಲುಕಿ ಜೀವನ್ಮರಣ ಹೋರಾಟ ನಡೆಸಿತ್ತು. ಹಿಂಬದಿಯ ಎಡಗಾಲು ಮುರಿದು ನರಳಾಡುತ್ತಿದ್ದ ಕರಡಿಯನ್ನು ಬಳ್ಳಾರಿ ಅರಣ್ಯ ಪ್ರದೇಶದಿಂದ ರಕ್ಷಣೆ ಮಾಡಿ, ಬನ್ನೇರುಘಟ್ಟದ ಕರಡಿ ಆರೈಕೆ ಕೇಂದ್ರಕ್ಕೆ ಕರೆತರಲಾಗಿತ್ತು. ಗಾಯಗೊಂಡಿದ್ದ ಕರಡಿಗೆ ಚಿಕಿತ್ಸೆ ನೀಡಿದ ಬಳಿಕ ಆರೋಗ್ಯ ಸುಧಾರಣೆಯಾಗಿತ್ತು. ಬಳಿಕ ಮೂರು ಕಾಲಿನಿಂದ ನಡೆಯಲು ಅಭ್ಯಾಸ ಮಾಡಿಕೊಂಡಿತ್ತು.

ಹೀಗಿರುವಾಗ ಪ್ರಾಣಿಗಳ ಜಾಗತಿಕ ಮೂಳೆ ತಜ್ಞರಾದ ಅಮೆರಿಕದ ಡೆರಿಕ್ ಕಂಪನಾ ಬನ್ನೇರುಘಟ್ಟಕ್ಕೆ ಭೇಟಿ ನೀಡಿದ್ದರು. ಈ ವೇಳೆ ವಸಿಕರನ್ ಕರಡಿ ಕುಂಟುತ್ತಾ ಓಡಾಡುವುದುನ್ನು ಗಮನಿಸಿದ್ದರು. ಇದರಿಂದ ಅವರ ಮನುಸ್ಸು ಕರಗಿತು. ಬಳಿಕ ಮಣ್ಣು ತೋಡಲು, ಮರ ಹತ್ತಲು ಹಾಗೂ ಮೇವು ಸಂಗ್ರಹಿಸಲು ಡೆರಿಕ್ ಕಂಪನಾ ಅವರು ಕೃತಕ ಕಾಲನ್ನ ಸಿದ್ದಪಡಿಸಿದರು.

Bannerghatta National Park

ಕರ್ನಾಟಕ ಅರಣ್ಯ ಇಲಾಖೆ ಸಹಯೋಗದಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನವನ ಮತ್ತು ವೈಲ್ಡ್ ಲೈಫ್ sos ಸಂಸ್ಥೆ ಕರಡಿಗೆ ಕೃತಕ ಕಾಲು ಜೋಡಣೆ ಮಾಡಿಸಿದೆ. ಮೂರು ದಿನಗಳ ಕಾಲ ನಡೆದ ಕಾಲು ಜೋಡಣೆಯ ಚಿಕಿತ್ಸೆ ಯಶಸ್ವಿಯಾಗಿದ್ದು, ಕೃತಕ ಕಾಲಿನಿಂದ ವಸಿಕರನ್​ ಕರಡಿ ಮೊದಲಿನ ಹಾಗೆ ಓಡಾಡುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net