ಹಳ್ಳಿ ಪಕ್ಕದ ನಾಲೆಯಲ್ಲಿ ಪತ್ತೆಯಾಯ್ತು ಭಾರೀ ಗಾತ್ರದ ತಿಮಿಂಗಿಲ ಶಾರ್ಕ್​ ಕಳೇಬರ!

Nullah
Published on

ಬಾಲಾಸೋರ್​: ಭಾರಿ ಗಾತ್ರದ ತಿಮಿಂಗಿಲ ಶಾರ್ಕ್ ಕಳೇಬರವು​ ನಾಲೆಯೊಂದರಲ್ಲಿ ಪತ್ತೆಯಾಗಿದೆ ಎಂದರೆ ಅದೊಂದು ಅಚ್ಚರಿಯೇ ಸರಿ. ಇಂಥದ್ದೆ ಒಂದು ಘಟನೆ ಒಡಿಶಾದಲ್ಲಿ ಭಾನುವಾರ ನಡೆದಿದೆ.

ಬಾಲಾಸೋರ್​ ಜಿಲ್ಲೆಯ ಖಾಂತಪಡಾ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಬರುವ ಕಾಂತಿಯಾಛೇರಾ ಗ್ರಾಮಕ್ಕೆ ಸಮೀಪದ ಸಮುದ್ರದಿಂದ ಸಂಪರ್ಕ ಕಲ್ಪಿಸುವ ನಾಲೆಯಲ್ಲಿ ತಿಮಿಂಗಿಲ ಶಾರ್ಕ್​ನ ಕಳೇಬರ ಪತ್ತೆಯಾಗಿದೆ.

ಪ್ರಾಣಿಯ ಸಾವಿಗೆ ಕಾರಣ ಏನೆಂಬುದು ತಿಳಿದುಬರಬೇಕಿದೆ. ಸದ್ಯ ಸ್ಥಳದಲ್ಲಿ ಕಳೇಬರವನ್ನು ತೆಗೆಯಲಾಗಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಕೂಡ ಆಗಿದೆ.

ಮೂರು ದಿನಗಳ ಹಿಂದಷ್ಟೇ ಸುಮಾರು 5 ಕ್ವಿಂಟಾಲ್​ ತೂಕದ ತಿಮಿಂಗಿಲ ಶಾರ್ಕ್​ ಮೀನುಗಾರರು ಹಿಡಿದು ದಡಕ್ಕೆ ತಂದಿದ್ದರು. ಆದರೆ, ಸ್ಥಳೀಯರ ಭಾರಿ ವಿರೋಧದ ಕಾರಣದಿಂದಾಗಿ ಅದನ್ನು ಮರಳಿ ಸಮುದ್ರಕ್ಕೆ ಬಿಟ್ಟಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net