

ಇಸ್ಲಮಾಬಾದ್: ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶಾಹೀದ್ ಅಫ್ರಿದಿ ಮಗಳು ಅನ್ಸಾ ಅಫ್ರಿದಿಗೆ ಶಾದಿ ಭಾಗ್ಯ ಕೂಡಿ ಬಂದಿದ್ದು, ಪ್ರಸ್ತುತ ಪಾಕ್ ತಂಡದ ವೇಗದ ಬೌಲರ್ ಶಾಹೀನ್ ಷಾ ಅಫ್ರಿದಿಯನ್ನು ಅನ್ಸಾ ವರಿಸಲಿದ್ದಾರೆ. ಸದ್ಯದಲ್ಲಿ ಇಬ್ಬರ ನಿಶ್ಚಿತಾರ್ಥ ನಡೆಯಲಿದೆ ಎಂದು ಅಫ್ರಿದಿ ಕುಟುಂಬ ಖಚಿತಪಡಿಸಿವೆ.
ಅಫ್ರಿದಿ ಮನೆಗೆ ಮದುವೆ ಪ್ರಸ್ತಾವನೆ ಕಳುಹಿಸಿದ್ದಾಗಿ ಮತ್ತು ಅದನ್ನು ಅಫ್ರಿದಿ ಕುಟುಂಬ ಒಪ್ಪಿರುವ ವಿಚಾರವನ್ನು ಶಾಹೀನ್ ತಂದೆ ಅಯಾಜ್ ಖಾನ್ ಸಹ ಖಚಿತಪಡಿಸಿದ್ದಾರೆ. ಕಳೆದ ಕೆಲವು ತಿಂಗಳಿಂದ ಎರಡು ಕುಟುಂಬ ಮದುವೆ ಬಗ್ಗೆ ಚರ್ಚೆ ಮಾಡುತ್ತಿದ್ದೆವು. ಇದೀಗ ಇಬ್ಬರ ನಡುವೆ ಮಾತುಕತೆ ನಡೆದಿರುವುದು ಸಂತಸದ ವಿಚಾರ. ಆದಷ್ಟು ಬೇಗ ದಿನಾಂಕ ನಿಗದಿಯಾಗುವ ಭರವಸೆ ಇದೆ ಎಂದು ಅಯಾಜ್ ಖಾನ್ ಹೇಳಿದ್ದಾರೆ.
ಅಫ್ರಿದಿ ಟ್ವೀಟ್ಗ ಪ್ರತಿಕ್ರಿಯೆ ನೀಡಿರುವ ಶಾಹೀನ್, ನಿಮ್ಮ ಪ್ರಾರ್ಥನೆಗೆ ಧನ್ಯವಾದಗಳು. ನೀವು ನಮ್ಮ ರಾಷ್ಟ್ರದ ಹೆಮ್ಮೆ ಎಂದಿದ್ದಾರೆ.
ಇನ್ನು ಅಫ್ರಿದಿ ಮತ್ತು ಶಾಹೀನ್ ಇಬ್ಬರು ಪಾಕಿಸ್ತಾನ ಸೂಪರ್ ಲೀಗ್ ಪಂದ್ಯದಲ್ಲಿ ಆಡಿದ್ದಾರೆ. (ಏಜೆನ್ಸೀಸ್)