More

    ಬಾಂಗ್ಲಾದೇಶ ಲೆಜೆಂಡ್ಸ್ ತಂಡಕ್ಕೆ ಸತತ ಎರಡನೇ ಸೋಲು

    ರಾಯ್‌ಪುರ: ನಾಯಕ ಕೆವಿನ್ ಪೀಟರ್ಸೆನ್ (42ರನ್, 17 ಎಸೆತ, 7 ಬೌಂಡರಿ, 1 ಸಿಕ್ಸರ್) ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಇಂಗ್ಲೆಂಡ್ ಲೆಜೆಂಡ್ಸ್ ತಂಡ ರಸ್ತೆ ಸುರಕ್ಷತಾ ವಿಶ್ವ ಸರಣಿ ಟಿ20 ಟೂರ್ನಿಯಲ್ಲಿ ಶುಭಾರಂಭ ಕಂಡಿತು. ಭಾನುವಾರ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ತಂಡ 7 ವಿಕೆಟ್‌ಗಳಿಂದ ಬಾಂಗ್ಲಾದೇಶ ತಂಡವನ್ನು ಸೋಲಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ಲೆಜೆಂಡ್ಸ್ ತಂಡ 5 ವಿಕೆಟ್‌ಗೆ 113 ರನ್ ಪೇರಿಸಲಷ್ಟೇ ಶಕ್ತವಾಯಿತು. ಪ್ರತಿಯಾಗಿ ಇಂಗ್ಲೆಂಡ್ ಲೆಜೆಂಡ್ಸ್ ತಂಡ 14 ಓವರ್‌ಗಳಲ್ಲಿ 3 ವಿಕೆಟ್‌ಗೆ 117 ರನ್‌ಗಳಿಸಿ ಜಯದ ನಗೆ ಬೀರಿತು. ಸೋಮವಾರ ನಡೆಯಲಿರುವ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಲೆಜೆಂಡ್ಸ್ ಹಾಗೂ ಶ್ರೀಲಂಕಾ ಲೆಜೆಂಡ್ಸ್ ತಂಡಗಳು ಎದುರಾಗಲಿವೆ.

    ಬಾಂಗ್ಲಾದೇಶ ಲೆಜೆಂಡ್ಸ್: 5 ವಿಕೆಟ್‌ಗೆ 113 (ಮುಶ್ಫಿಕರ್ ರೆಹಮಾನ್ 30, ಖಲೀದ್ ಮಶೂದ್ 31, ಕ್ರಿಸ್ ಟ್ರೆಮ್‌ಲೆಟ್ 10ಕ್ಕೆ 2), ಇಂಗ್ಲೆಂಡ್ ಲೆಜೆಂಡ್ಸ್ : 14 ಓವರ್‌ಗಳಲ್ಲಿ 3 ವಿಕೆಟ್‌ಗೆ 117 (ಕೆವಿನ್ ಪೀಟರ್ಸೆನ್ 42, ಡರೇನ್ ಮ್ಯಾಡಿ 32*, ಫಿಲ್ ಮುಸ್ಟಾರ್ಡ್ 27, ಮೊಹಮದ್ ರಫೀಕ್ 31ಕ್ಕೆ 2).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts