More

    ವೀಕ್ಷಕರ ಪ್ರಕಾರ ಈ ಬಾರಿಯ ಬಿಗ್​ಬಾಸ್​ ಮನೆಯಲ್ಲಿ ಭಾರಿ ಸದ್ದು ಮಾಡುವ ಸ್ಪರ್ಧಿಗಳು ಯಾರ‍್ಯಾರು?

    ಬೆಂಗಳೂರು: ಪ್ರತಿಬಾರಿ ಬಿಗ್​ಬಾಸ್​ ಶೋ ಆರಂಭವಾದಾಗ ವೀಕ್ಷಕರ ಕಣ್ಣು ಸ್ಪರ್ಧಿಗಳ ಆಯ್ಕೆ ಮೇಲೆ ಬಿದ್ದಿರುತ್ತದೆ. ಇದಾದ ಬಳಿಕ ಯಾವ ಸ್ಪರ್ಧಿಗಳು ಬಿಗ್​ಬಾಸ್​ ಮನೆಯಲ್ಲಿ ಹೆಚ್ಚು ದಿನ ಉಳಿಯಲಿದ್ದಾರೆ ಎಂಬ ಲೆಕ್ಕಾಚಾರ ಶುರುವಾಗುತ್ತದೆ. ಈ ಬಾರಿಯ ಸ್ಪರ್ಧೆಗಳ ಆಯ್ಕೆ ವಿಚಾರಕ್ಕೆ ಬಂದಾಗ ಬಹುತೇಕ ವೀಕ್ಷಕರಿಗೆ ಖುಷಿಯಾಗಿದೆ.

    ಬಿಗ್​ಬಾಸ್​ ಶೋ ಅಂತಾ ಬಂದಾಗ ಮನೆಯೊಳಗಿನ ಚರ್ಚೆಗಿಂತ ಮನೆಯ ಹೊರಗಿನ ವಾದ-ವಿವಾದವೇ ಜಾಸ್ತಿ. ಬಿಗ್​ ಮನೆಯಲ್ಲಿ ವಿವಾದದ ಅಲೆ ಎದ್ದಾಗಲೂ ಸಹ ವೀಕ್ಷಕರು ಸ್ಪರ್ಧಿಗಳಾಡುವ ಮಾತಿನ ರೀತಿಯಲ್ಲಿ ತಮ್ಮದೇ ರೀತಿಯಲ್ಲಿ ವಿಶ್ಲೇಷಣೆ ಮಾಡುವುದನ್ನು ನೋಡಿರುತ್ತೇವೆ. ಹೀಗೆ ಅನೇಕ ರೀತಿಯಲ್ಲಿ ಸ್ಪರ್ಧಿಗಳನ್ನು ವೀಕ್ಷಕರು ಗಮನಿಸುತ್ತಿರುತ್ತಾರೆ.

    ಇದನ್ನೂ ಓದಿರಿ: ಮನೆಯಲ್ಲೇ ಕುಳಿತು ಆರಾಮಾಗಿ ಹಣ ಗಳಿಸುವ ಆಸೆ ಇದ್ರೆ ಈ ಸ್ಟೋರಿಯನ್ನೊಮ್ಮೆ ಓದಿ..!

    ಕಾರ್ಯಕ್ರಮ ಆರಂಭವಾಗಿ ಮೊದಲ ವಾರದ ಅಂತಿಮ ಬಂದಿದ್ದು, ಈಗಾಗಲೇ ಎಲ್ಲ ಸ್ಪರ್ಧಿಗಳ ಚಲನಾವಲನವನ್ನು ವೀಕ್ಷಕರು ಗಮನಿಸಿದ್ದಾರೆ. ಹೀಗಾಗಿ ಈ ಬಾರಿ ಬಿಗ್ ಬಾಸ್​​ ಮನೆಯಲ್ಲಿ ವಿವಾದದ ಅಲೆಯನ್ನು ಎಬ್ಬಿಸುವ ಜತೆ ಭಾರಿ ಸದ್ದು ಮಾಡುವ ಸ್ಪರ್ಧಿಗಳು ಯಾರಾಗಲಿದ್ದಾರೆ ಎಂಬುದನ್ನು ವೀಕ್ಷಕರು ಹೆಸ್​ ಮಾಡಿದ್ದು, ಅವರ ಹೆಸರು ಈ ಕೆಳಕಂಡಂತಿದೆ.

    ವೀಕ್ಷಕರ ಪ್ರಕಾರ ನಿಧಿ ಸುಬ್ಬಯ್ಯ, ಶಮಂತ್​ ಬ್ರೋ ಗೌಡ, ಕೆ.ಪಿ. ಅರವಿಂದ್​ ಮತ್ತು ವೈಷ್ಣವಿ ಗೌಡ ಮನೆಯಲ್ಲಿ ಹೆಚ್ಚು ಸದ್ದು ಮಾಡಲಿದ್ದಾರಂತೆ. ಆದರೆ, ಇನ್ನು ಕೆಲವರ ಪ್ರಕಾರ ಮಂಜು ಪಾವಗಡ ಸಖತ್​ ಮನರಂಜನೆ ನೀಡಲಿದ್ದಾರಂತೆ. ಇನ್ನು ಪ್ರಶಾಂತ್​ ಸಂಬರಗಿ ವಿವಾದದ ಸುರಿಮಳೆಗೈಯಲಿದ್ದು, ಈ ಬಾರಿಯ ಬಿಗ್​ಬಾಸ್​ ಕಳೆದ ಆವೃತ್ತಿಗಿಂತ ಕೊಂಚ ವಿಭಿನ್ನವಾಗಿರಲಿದೆ ಎಂದು ವೀಕ್ಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)

    ಅಶೋಕವನದಲ್ಲಿ ಮನರಂಜನೆಯ ಜೋಕಾಲಿ; ಹೀರೋ ಸಿನಿಮಾ ವಿಮರ್ಶೆ

    ‘ಜಿಂದಗಿ ನಾ ಮಿಲೇಗಿ ದೋಬಾರಾ 2’ ಚಿತ್ರಕ್ಕೆ ಆಲಿಯಾ ಭಟ್ ನಾಯಕಿ

    ರಾಮ್ ಸೇತು ಚಿತ್ರಕ್ಕೆ ಶ್ರೀಲಂಕನ್ ಚೆಲುವೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts