More

    ಮನೆಯಲ್ಲೇ ಕುಳಿತು ಆರಾಮಾಗಿ ಹಣ ಗಳಿಸುವ ಆಸೆ ಇದ್ರೆ ಈ ಸ್ಟೋರಿಯನ್ನೊಮ್ಮೆ ಓದಿ..!

    ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯರಾಗಿರುವ ಪ್ರತಿಯೊಬ್ಬರು ಓದಲೇಬೇಕಾದ ಸ್ಟೋರಿ ಇದು. ಮನೆಯಲ್ಲೇ ಕುಳಿತು ಆರಾಮಾಗಿ ದುಡ್ಡು ಸಂಪಾದನೆ ಮಾಡುವ ಆಸೆ ನಿಮಗಿದ್ದರೆ ಮೊದಲು ಈ ಸ್ಟೋರಿಯನ್ನು ಪೂರ್ತಿ ಓದಿದ ನಂತರ ಏನು ಮಾಡಬೇಕೆಂದು ನಿರ್ಧರಿಸಿ.

    ಹುಷಾರ್​! ಜಾಲತಾಣಿಗರನ್ನೇ ಟಾರ್ಗೆಟ್​ ಮಾಡಿರುವ ದುಷ್ಟರ ಗುಂಪೊಂದಿದೆ. ಆ್ಯಪ್​ಗಳ ಮೂಲಕ ಸೆಲೆಬ್ರಿಟಿಗಳ ಫೋಟೋ ಹಾಗೂ ವಿಡಿಯೋಗಳಿಗೆ ಲೈಕ್​ ಮತ್ತು ಶೇರ್​ ಮಾಡಿ ಕೈತುಂಬ ಹಣ ಗಳಿಸಿ ಅಂತ ನಂಬಿಸಿ ಕೊನೆಯಲ್ಲಿ ಪಂಗನಾಮ ಹಾಕುವ ಜಾಲತಾಣ ವಂಚಕರಿದ್ದಾರೆ.

    ವಂಚಕರ ಮಾತು ನಂಬಿ ನೀವೇನಾದರೂ ಹಣಕ್ಕೆ ಮರುಳಾದರೆ ನಿಮ್ಮ ಜೇಬಿಗೆ ಕತ್ತರಿ ಬೀಳುವುದು ಗ್ಯಾರೆಂಟಿ. ನಾವು ಹೇಳುತ್ತಿರುವುದು ಸುಳ್ಳಲ್ಲ, ಹಣದ ಆಮಿಷಕ್ಕೆ ಬಿದ್ದು ಲಕ್ಷಾಂತರ ರೂ. ಹಣ ಕಳೆದುಕೊಂಡವರಿದ್ದಾರೆ. ಹಣದ ಹಿಂದೆ ಹೋದವರು ಈಗ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.

    ಇದನ್ನೂ ಓದಿರಿ: ಭಾರತದಲ್ಲಿ ಪ್ರತಿ ವ್ಯಕ್ತಿ ಒಂದು ವರ್ಷಕ್ಕೆ ಪೋಲು ಮಾಡುವ ಆಹಾರ ಪ್ರಮಾಣ ಎಷ್ಟು ಗೊತ್ತಾ?

    ಮೋಸ ಹೋದ ಅಶ್ರದ್ ಮದನಿಯಿಂದ ಸೈಬರ್ ಕಳ್ಳರ ವಿರುದ್ಧ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇದೇ ರೀತಿ ಸೈಬರ್ ಕಳ್ಳರಿಂದ ಮೋಸಹೋದ 44 ಜನರಿಂದ ದಕ್ಷಿಣ ವಿಭಾಗದ ಸಿಇಎನ್ ಪೊಲೀಸ್ ಠಾಣೆಗೆ ದೂರು ದಾಖಲಾಗಿದೆ. ಕೂತಲ್ಲಿಯೇ ಕೈ ತುಂಬ ಹಣ ಸಂಪಾದನೆಯ ಆಸೆ ತೋರಿಸಿ 19 ಲಕ್ಷದ 76 ಸಾವಿರ ರೂ. ದೋಚಿದ್ದಾರೆ. ಸೂಪರ್ ಲೈಕ್ ಅಪ್ಲಿಕೇಷನ್ ಆ್ಯಪ್ ಮೂಲಕ ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ.

    ಸ್ನೇಹಿತರ ಮೂಲಕ ಅಶ್ರದ್​ಗೆ ಸೂಪರ್ ಲೈಕ್ ಅಪ್ಲಿಕೇಷನ್ ಆ್ಯಪ್ ಮಾಲೀಕ ಪರಿಚಯವಾಗಿದ್ದ. ಈ ವೇಳೆ ಮೊಬೈಲ್​ನಲ್ಲಿ ಆ್ಯಪ್ ಡೌನ್​​ಲೋಡ್ ಮಾಡಿಕೊಂಡು ಹಾಲಿವುಡ್, ಬಾಲಿವುಡ್ ಹಾಗೂ ಸ್ಯಾಂಡಲ್​ವುಡ್ ಸೇರಿದಂತೆ ಸಿನಿಮಾ ಸೆಲೆಬ್ರಿಟಿಗಳ ಪೋಟೋ ಹಾಗೂ ವಿಡಿಯೋಗಳನ್ನು ಲೈಕ್ ಮಾಡಿ ಶೇರ್ ಮಾಡಲು ಹೇಳಿದ್ದ. ನಿಮ್ಮ ಬ್ಯಾಂಕ್ ಖಾತೆಗೆ ಇಂತಿಷ್ಟು ಹಣ ಅಂತಾ ಬರುತ್ತೆ ಎಂದು ಅಮಿಷವೊಡ್ಡಿದ್ದರು.

    ಹಣದ ಆಸೆಗೆ ಅಶ್ರಪ್​ ಆ್ಯಪ್ ಡೌನ್​ಲೋಡ್ ಮಾಡಿಕೊಳ್ಳುವುದಾಗಿ ಒಪ್ಪಿಕೊಂಡಿದ್ದಾರೆ. ಈ ವೇಳೆ ಅಪ್ಲಿಕೇಷನ್ ಆ್ಯಪ್ ಖಾತೆ ತೆರೆಯಲು 50 ಸಾವಿರ ಹಣ ಕಟ್ಟುವಂತೆ ಹೇಳಿದ್ದಾರೆ. ಅದರಂತೆ 50 ಸಾವಿರ ರೂ. ಹಣ ಕಟ್ಟಿ ಅಶ್ರಪ್​ ಆ್ಯಪ್ ಡೌನ್​ಲೋಡ್ ಮಾಡಿಕೊಂಡಿದ್ದಾರೆ. ಬಳಿಕ ಸೆಲೆಬ್ರಿಟಿಗಳ ಪೋಟೋ ಮತ್ತು ವಿಡಿಯೋಗಳನ್ನ ಲೈಕ್ ಮಾಡಿ ಶೇರ್ ಮಾಡಿದ ಅಶ್ರಪ್ ಖಾತೆಗೆ ಆರಂಭದಲ್ಲಿ 8 ಸಾವಿರ ರೂ. ಹಣ ವರ್ಗಾವಣೆ ಆಗಿದೆ.

    ಇದನ್ನೂ ಓದಿರಿ: ಕರೊನಾಗೆ ನಲುಗಿದ ಆರ್ಥಿಕತೆ: ಕೇಂದ್ರದ ಆದಾಯಕ್ಕೆ ಬರೆ, ರಾಜ್ಯಕ್ಕೆ ಹೊರೆ!

    ಇದನ್ನು ನೋಡಿದ ಹಲವು ಮಂದಿ 50 ಸಾವಿರ ಹಣಕಟ್ಟಿ ಆ್ಯಪ್ ಡೌನ್​ಲೋಡ್ ಮಾಡಿಕೊಂಡಿದ್ದಾರೆ. ಹಣ ಪಡೆದ ಬಳಿಕ ಅಪ್ಲಿಕೇಷನ್ ಸ್ಥಗಿತಗೊಂಡಿದ್ದು, ಯಾರು ಸಂಪರ್ಕಕ್ಕೆ ಸಿಕ್ಕಿಲ್ಲ. ಹಣದಾಸೆಗೆ ಹೋದವರು ಕೊನೆಗೆ ಮೋಸಹೋಗಿರೋದು ಬೆಳಕಿಗೆ ಬಂದಿದೆ. ಈ ಘಟನೆ ಸಂಬಂಧ ಸೂಪರ್ ಲೈಕ್ ಅಪ್ಲಿಕೇಷನ್ ಆ್ಯಪ್​ನ ಮಾಲೀಕರ ವಿರುದ್ದ ದೂರು ನೀಡಿದ್ದಾರೆ. ಸದ್ಯ ದೂರು ದಾಖಲಿಸಿಕೊಂಡಿರುವ ದಕ್ಷಿಣ ವಿಭಾಗದ ಸಿಇಎನ್ ಠಾಣೆಯ ಪೊಲೀಸರಿಂದ ತನಿಖೆ ಮುಂದುವರಿದಿದೆ. (ದಿಗ್ವಿಜಯ ನ್ಯೂಸ್​)

    ಅನುಮಾನ ಬಂದು ಬಾತ್​​ರೂಮ್​ನಲ್ಲಿನ ಕನ್ನಡಿ ತೆಗೆದ ಮಹಿಳೆಗೆ ಕಾದಿತ್ತು ಬಿಗ್​ ಶಾಕ್​..!

    ಮಿಷನ್ ಪ್ರಾರಂಭ; ಮೊದಲ ದಿನದ ಶೂಟಿಂಗ್ ಅನುಭವ ಹಂಚಿಕೊಂಡ ರಶ್ಮಿಕಾ…

    ಫ್ರೋಜನ್ ಫುಡ್ ನಾಟ್ ಗುಡ್! ಇಂದು ಘನೀಕೃತ ಆಹಾರ ತಡೆ ದಿನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts