ಈ ರಾಶಿಯವರಿಗೆ ಧನಲಾಭ ಆಗುವುದರಲ್ಲಿ ಸಂದೇಹವಿಲ್ಲ: ವಾರಭವಿಷ್ಯ

Vaara-Bhavishya
Published on
ಮೇಷ

ವರ್ಷ ಋತುವಿನ ಅರ್ಧಭಾಗವು ಕಳೆದು ನಿಜಶ್ರಾವಣದ ವ್ರತಾಧಿಗಳು ವರಮಹಾಲಕ್ಷ್ಮೀವ್ರತ, ಮಂಗಳಗೌರಿ, ರಾಬಂಧನ, ಅದರೊಂದಿಗೆ ಗಾಯತ್ರಿ ಉಪಾಸನೆ ನಡೆದಿದ್ದು, ಮಾಸದ ಅಂತ್ಯದಲ್ಲಿ ಕೃಷ್ಣಾಷ್ಟಮಿ ಬಂದು ಮಂಗಳಕರ ಶ್ರಾವಣವು ಸಂಪನ್ನವಾಗುತ್ತದೆ. ಎಲ್ಲಾ ವ್ರತಗಳಿಗೂ ಅದಕ್ಕೆ ತಕ್ಕನಾದ ಸತ್ಪಲಗಳನ್ನು ಋಷಿಗಳು ಹೇಳಿದ್ದಾರೆ. ಮನಸ್ಸಿನ ಸ್ಥಿರತೆ, ಸುಸ್ಥಿರ ಆರೋಗ್ಯ, ಧನಲಾಭ ಆಗುವುದರಲ್ಲಿ ಸಂದೇಹವಿಲ್ಲ. ಮೇಷ ರಾಶಿಯವರಿಗೆ ಗುರು&ರಾಹು ಲಗ್ನದಲ್ಲೇ ಇದ್ದು, ವ್ರತಾದಿ ಪೂಜೆಗಳನ್ನು ಮಾಡಿದಲ್ಲಿ ಒಳ್ಳೆಯ ಲ ಪಡೆಯುವುದರಲ್ಲಿ ಸಂದೇಹವಿಲ್ಲ ಷಣ್ಮುಖನನ್ನು ಪೂಜಿಸಿ. ಅಸಾಧ್ಯವಾದ ಕೆಲಸಗಳು ಸುಲಭವಾಗಿ ಜರುಗುವುದರಲ್ಲಿ ಸಂದೇಹವಿಲ್ಲ.

ವೃಷಭ

ರಾಶ್ಯಾಧಿಪತಿಯಾದ ಶುಕ್ರನು ಇನ್ನೂ ಕಟಕದಲ್ಲಿ ಇರುವುದು, ದ್ವಾದಶದಲ್ಲಿ ಗುರುವಿರುವುದರಿಂದ, ಗುರುಬಲ ಇಲ್ಲದೆ ಗುರು ರಾಹುಗ್ರಸ್ತನಾಗಿದ್ದಾನೆ. ಆದರೂ ಶನಿಯು ಸ್ವಕ್ಷೇತ್ರದಲ್ಲಿ ದಶಮದಲ್ಲಿ ಇರುವುದರಿಂದ ತಾರ್ಕಿಕವಾಗಿ ಅಂತ್ಯವಾಗುವ ವ್ಯಾಪಾರ&ವಹಿವಾಟುಗಳು ನಿಧಾನವಾಗಿ ಸತ್ಪಲ ಧನವನ್ನು ನೀಡುತ್ತಾನೆ. ರಾಹುವಿಗಾಗಿ ನಾಗರಾಜನ ಪೂಜೆ, ದುರ್ಗೆಯನ್ನು ಪೂಜಿಸುವುದು ಮರೆಯದಿರಿ.

ಮಿಥುನ

ಮಿಥುನ ರಾಶಿಗೆ ದ್ವೀತಿಯದಲ್ಲಿ ರವಿ-ಬುಧರು ಅತ್ಯಂತ ಮಿತ್ರತ್ವ ಪಡೆದು ನಿಮ್​ ವಹಿವಾಟುಗಳಲ್ಲಿ ಪರಿಪೂರ್ಣವಾಗಿ ತೊಡಗಿಸಿಕೊಂಡು ಶ್ರಮ&ಶ್ರದ್ಧೆ, ಸತ್ಯದಿಂದ, ಭಗವಂತನನ್ನು ನೆನೆದು ಕೆಲಸ ಮಾಡಿದಲ್ಲಿ ಲಾಭ, ಸಂತೋಷವನ್ನು ಕಾಣುವುದರಲ್ಲಿ ಸಂದೇಹವಿಲ್ಲ. ಶ್ರಾವಣಮಾಸದಲ್ಲಿ ಲಕ್ಷ್ಮೀ ವೆಂಕಟೇಶ್ವರನನ್ನು, ಸೀತೆಯನ್ನು ಹುಡುಕಿಕೊಟ್ಟ ಹನುಮಂತನನ್ನು ಪೂಜಿಸಿ. ನೀವು ಕಳೆದುಕೊಂಡ ಭೋಗಭಾಗ್ಯಗಳನ್ನು ಪಡೆಯುವಿರಿ. ಹನುಮಾನ್​ ಚಾಲೀಸ, ಆಂಜನೇಯ ಅಷ್ಟೋತ್ತರ ಪಠಿಸಿ.

ಕಟಕ

ಗುರುವಿನ ಉಚ್ಛ ಕ್ಷೇತ್ರವಾದ ಕಟಕ ರಾಶಿಯಲ್ಲಿ ಶುಕ್ರನು ಇದ್ದು, ದ್ವೀತಿಯದಲ್ಲಿ ರವಿ ಗುದರಿದ್ದಾರೆ. ಕನ್ಯಾರಾಶಿಯಲ್ಲಿ ಅಂಗಾರಕನು, ತುಲಾರಾಶಿ ಕೇತು, ನಿಮ್ಮ ಆರೋಗ್ಯದಲ್ಲಿ ವ್ಯತ್ಯಯವಾಗುವ ಕಾಲವಿದು. ಈಶ್ವರನ ಕೃಪೆಯೊಂದಿದ್ದರೆ ಸಾಕು ಕಷ್ಟಗಳು ಕರಗುತ್ತದೆ. ಆರೋಗ್ಯವನ್ನು ಕಾಪಾಡಿಕೊಂಡು ತಮ್ಮ ಸೊಗಸಾದ ಜೀವನವನ್ನು ಬಾಳಿರಿ. ಪಾರ್ವತಿ ಸಹಿತ ಸಾಂಬಸದಾಶಿವನನ್ನು ಪೂಜಿಸಿ.

ಸಿಂಹ

ಸಿಂಹ ರಾಶಿಯಲ್ಲಿ ರವಿ-ಬುಧರಿದ್ದು, ಒಳ್ಳೆಯ ಸೂಚನೆಯನ್ನು ಬೆಳಕು ಕೊಡುವ ಸೂರ್ಯನು ಉದಯದಿಂದ &ಅಸ್ತನಾಗುವವರೆಗೂ ನಿಮ್ಮನ್ನು ಕಾಪಾಡುವವನು. ಆಧ್ಯಾತ್ಮಕ ರುದ್ರನೂ ಹೃದಯ ಪಾರಾಯಣನ ಪ್ರೀತಿಗಾಗಿ ಗೋಧಿ-ಬೆಲ್ಲವನ್ನು ಸಜ್ಜನರಿಗೆ ದಾನ ಮಾಡಿ. ನಿಮ್ಮ ಜೀವನದಲ್ಲಿ ಅಭ್ಯಾಗತರು ಬಂದು ಸಹಾಯ ನೀಡಿ ಕೆಲಸಗಳನ್ನು ನಡೆಸಿಕೊಡುತ್ತಾರೆ.

ಕನ್ಯಾ

ಅಂಗಾರಕನಿಗೆ ಬುಧನ ಮನೆ ಸ್ವಕ್ಷೇತ್ರವೂ ಅಲ್ಲ, ಮಿತ್ರ ಕ್ಷೇತ್ರವೂ ಅಲ್ಲ. ದ್ವೀತಿಯದಲ್ಲಿ ಕೇತುವಿದ್ದು, ನಿಮ್ಮ ಮನಸ್ಸನ್ನು ಹಾಳುಮಾಡಿ ಪರಿತಪಿಸಬೇಡಿ. ಅಷ್ಟಮದ ಗುರುವು ನಿಮಗೆ ಏನನ್ನೂ ಕೊಡಲಾರನು. ಏಕಾಂಗಿಯಾಗಿ ಶನಿಯೊಬ್ಬನೆ ನಿಮಗೆ ವ್ಯವಹಾರದಲ್ಲಿ ಅಲ್ಪಸ್ವಲ್ಪ ಯಶಸ್ಸು ಕೊಟ್ಟು ನಿಮ್ಮನ್ನು ಕಷ್ಟದಿಂದ ಪಾರುಮಾಡುತ್ತಾನೆ. ಅಲ್ಲಿಗೆ ನಿರಂತರವಾಗಿ ವಿಷ್ಣು ಸಹಸ್ರನಾಮ ಪಾರಾಯಣ ದಣಾಮೂರ್ತಿ ಸ್ತೋತ್ರ ಪಠಿಸಿ. ದಣಾಮೂರ್ತಿಗೆ ಕಡಲೆ-ಗುಡಾ(ಬೆಲ್ಲ) ನೈವೇದ್ಯ ಮಾಡಿ ದಾನಮಾಡಿ. ದೈವ ಸಹಾಯ ನಿಮ್ಮನ್ನು ಕಾಪಾಡುತ್ತದೆ.

ತುಲಾ

ನ್ಯಾಯದೇವತೆಯು ಧರ್ಮದ ಅದಿದೇವತೆಯಾಗಿದ್ದಾಳೆ. ಸಪ್ತಮದಲ್ಲಿ ಗುರುವಿರುವುದರಿಂದ ನೀವು ಧರ್ಮದಿಂದ ನಡೆದಿದ್ದೇ ಆದರೆ ಅನ್ಯಾಯವಾಗುವುದಿಲ್ಲ. ಯಾರೇ ಆಗಿರಲಿ. ಕೋರ್ಟ್​-ಕಚೇರಿ, ನ್ಯಾಯಸಂಬಂಧಿತ ಕೆಲಸಗಳು ಪೂರ್ಣಗೊಂಡು ನಿಮಗೆ ಹರ್ಷದ ಹೊನಲನ್ನು ತರುತ್ತದೆ. ಈ ಭಾಗ್ಯವನ್ನು ಪಡೆಯಲು ಲಲಿತಾ ಪರಮೇಶ್ವರಿಯನ್ನು ಪೂಜಿಸಿ. ಲಲಿತಾ ಸಹಸ್ರನಾಮ ಪಾರಾಯಣ ಮಾಡಿರಿ.

ವೃಶ್ಚಿಕ

ಲಕ್ಷ್ಮೀನರಸಿಂಹಸ್ವಾಮಿ ಹಿರಣ್ಯ ಕಶ್ಯಪುವನ್ನು ವಧೆ ಮಾಡಿ ಕರಾಳ ವಿಷದ ಸೋಂಕಿನಿಂದ ಕೈಗಳು ಉರಿಯುತ್ತಿದ್ದಾಗ ಮಹಾಲಕ್ಷ್ಮೀಯು ಔದುಂಬರದ ಗಿಡದಲ್ಲಿ ಕುಳಿತು ಔದುಂಬರದ ಹಣ್ಣುಗಳಿಂದ ಅದರ ಜ್ವಾಲಾ ಉರಿಯನ್ನು ತಡೆದು, ಸಾಕ್ಷಾತ್​ ನರಸಿಂಹನೇ ನಾನು ಸದಾ ಔದುಂಬರ ವೃಕ್ಷದಲ್ಲಿ ನೆಲೆಸಿದ್ದೇನೆಂದು ಹೇಳಿದ್ದಾನೆ. ನಿಮ್ಮಂತೆ ಕೆಲಸ ಆಗಿಲ್ಲವೆಂದಾದರೆ ಕುಲದೇವರ ಅನುಗ್ರಹ ಇಲ್ಲವೆಂದೋ ಅಥವಾ ನಿಮ್ಮ ಪ್ರಾರ್ಥನೆ ಸಾಲದೋ ಎಂದು ಅರಿತುಕೊಂಡು, ಏಕಕಾಲದಲ್ಲಿ ಲಕ್ಷ್ಮೀ ನರಸಿಂಹನನ್ನು, ಸುಬ್ರಹ್ಮಣ್ಯನನ್ನು ಪೂಜಿಸಿ.

ಧನುಸ್ಸು

ಗುರುವಿನ ಸ್ಥಾನ ಧನರ್​ ರಾಶಿ. ಅಲ್ಲಿಂದ ಸಪ್ತಮ ಸ್ಥಾನವು ಮಿಥುನ ರಾಶಿಯಾಗಿದ್ದು, ರಾಶ್ಯಾಧಿಪತಿ ಬುಧನೇ ಆಗಿದ್ದು, ಶುಭಗ್ರಹನಾಗಿದ್ದಾನೆ. ಈಗ ನಿಮ್ಮ ಜೀವನದ ದೆಶೆಯು ಚೆನ್ನಾಗಿದ್ದು, ನಿಮ್ಮಲ್ಲಿ ವಿನಯವಿದ್ದು, ವಿದ್ಯಾಸಂಪನ್ನರೂ ಆಗಿದ್ದೀರ. ನಿಮ್ಮ ಸಂಪರ್ಕದ ಖಾತೆಯಲ್ಲಿ ದುಷ್ಟರನ್ನು, ಬೇಡದವರನ್ನು ದೂರವಿಟ್ಟು, ಏಕಾಂಗಿಯಾಗಿ ಹೋಗಾಡಿ ನಿಮ್ಮ ದೈವ ಬಲವು ಕಾರ್ಯಗಳಲ್ಲಿ ಜಯವನ್ನು ನೀಡುತ್ತದೆ. ದಣಾಮೂರ್ತಿಯನ್ನು ಗುರುದತ್ತಾತ್ರೇಯನನ್ನು ಪ್ರಾರ್ಥಿಸಿ. ಗುರುಚರಿತ್ರೆಯ 14ನೇ ಅಧ್ಯಾಯ ಪಾರಾಯಣ ಮಾಡಿರಿ.

ಮಕರ

ಮಕರ ರಾಶಿಯವರಿಗೆ ಶನಿ ಸ್ವಕ್ಷೇತ್ರವಾದ ಮಕರದಲ್ಲೇ ವಕ್ರಗತಿಯಲ್ಲಿ ಸಂಚರಿಸುತ್ತಿದ್ದು, ಉಷಾ, ಧನಿಷ್ಠ, ಶ್ರಾವಣ, ಶತಭಿಷ ನಕ್ಷತ್ರಗಳಿಗೆ ಮಕರ&ಕುಂಬ ಅಧಿಪತಿ ಶನಿಯೇ ಆಗಿದ್ದಾನೆ. ಕಾರ್ಯಗಳು ತಡವಾದರೂ ಚಿಂತಿಸಬೇಡಿ ಕೊಡುವ ದೇವರು ನಾವು ಇಷ್ಟಪಟ್ಟದ್ದನ್ನು ಕೊಡದೆ ಇದ್ದಾಗ, ಅವನ ಸಂಕಲ್ಪದಲ್ಲಿ ನಮಗೆ ಮತ್ತೇನೋ ಉತ್ತಮವಾದದ್ದನ್ನೇ ಇಟ್ಟಿರುತ್ತಾನೆ ಎಂದು ತೀರ್ಮಾನಿಸಿ. ದೇವರ ಪ್ರಾರ್ಥನೆಯನ್ನು ಮುಂದುವರೆಸಿ, ಅನಂತವಾಗಿ ಶನಿಯನ್ನು ಪ್ರಾರ್ಥಿಸಿ, ಕುಲದೇವರನ್ನು , ಕುಲಗುರುಗಳನ್ನು ಆರಾಧಿಸಿ ನಿಮ್ಮ ಕೆಲಸಗಳು ಪೂರ್ಣ ಗೊಳ್ಳುತ್ತವೆ.

ಕುಂಭ

ಶನಿಯು ವಕ್ರಗತಿಯಲ್ಲಿ ದ್ವಾದಶದಲ್ಲಿದ್ದರೂ, ತನ್ನ ಸ್ವಂತ ಮನೆಯಲ್ಲೇ ಇದ್ದಾನೆ. ಯಾರೂ ತನ್ನ ಮನೆಗೆ ತಾನೇ ಕೆಡಕನ್ನು ಮಾಡಿಕೊಳ್ಳುವುದಿಲ್ಲ. ಶನಿಯ ಅನುಗ್ರಹವಿರಲು ನೀವು ನ್ಯಾಯ, ಧರ್ಮದಿಂದ ನಡೆದು, ಸಭ್ಯತೆಯಿಂದ ವರ್ತಿಸಿದಲ್ಲಿ ನಿಮ್ಮನ್ನು ಕಾಪಾಡಿ ಕೈಹಿಡಿದು ನಿಮ್ಮ ಜೀವನವನ್ನು ನಡೆಸುತ್ತಾನೆ. ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ. ತಿಲದಾನ ನೀಡಿ. ಎಳ್ಳುದಿಪವನ್ನು ಹಚ್ಚಿರಿ. ನಿಮ್ಮ ಪಾಪಗಳು ಭಸ್ಮವಾಗಿ ನಿಮ್ಮ ದುಃಖ-ದುಮ್ಮಾನ ದೂರವಾಗುತ್ತದೆ.

ಮೀನ

ಗುರುಗಾಶಿಯಾದರೂ, ಮೀನ ರಾಶಿಯವರಿಗೆ ಸಪ್ತಮಸ್ಥಾನ ಕನ್ಯಾರಾಶಿಯಾಗಿದ್ದು, ಮತ್ತದೇ ಬುಧನು ಆಧಿಪತ್ಯ ಇರುವ ರಾಶಿಯು ಪ್ತ ಲಗಳನ್ನು ಕೊಡುತ್ತಾನೆ. ಅಲ್ಲಿಗೆ ಮೀನ ಕನ್ಯಾರಾಶಿಯವರು ಗುರುವನ್ನು ಪೂಜಿಸಬೇಕೆಂಬ ಸಂದೇಶ ಪರರನ್ನು ಟೀಕಿಸುವುದು, ಗುರುನಿಂದನೆ ಮಾಡುವುದು, ಗುರುವಾಕ್ಯದಲ್ಲಿ ವಿಶ್ವಾಸ ಇಲ್ಲದಿದ್ದರೆ ಕಷ್ಟಗಳ ರಾಶಿಯೇ ಬರುತ್ತದೆ. 12ರ ಶನಿ ಸಂಚಾರ ಇದ್ದರೂ, ದ್ವೀತಿಯ ಗುರು ಸುಖದ ಹಾದಿ ತೋರುತ್ತಾನೆ. ಸಾಲಿಗ್ರಾಮ ಗುರು ನರಸಿಂಹನನ್ನು ಪೂಜಿಸಿ. ಮಂತ್ರಾಲಯದ ಗುರು ರಾಯರನ್ನು ಪೂಜಿಸಿ. 9 ದಿನಗಳು ರಾಯರ ಮಠಕ್ಕೆ ತೆರಳಿ ಪಂಚಾಮೃತ ಅಭಿಷೇಕ ಮಾಡಿಸಿ. ಶುಭವಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net