ಪೆಟ್ರೋಲ್​ ಹಾಕಿ ಅಂತ ಹೇಳಿದರೆ ಬಂದದ್ದು ನೀರು! ಮುಂದೇನಾಯ್ತು?

petrol
ಪೆಟ್ರೋಲ್​ನಲ್ಲಿ ನೀರು ಇರುವುದನ್ನು ಪತ್ತೆ ಹಚ್ಚಿದ ಜನ!
Published on

ತಮಿಳುನಾಡು: ಇಲ್ಲೊಂದು ಪೆಟ್ರೋಲ್​ ಪಂಪ್​ನಲ್ಲಿ ಜನರು ಪೆಟ್ರೋಲ್​ ಹಾಕಿಸಲು ಮುಂದಾಗಿದ್ದು ಈ ಸಂದರ್ಭದಲ್ಲಿ ಜನರು ನೀರು ಬರುತ್ತಿರುವುದು ಕಂಡು ಬಂದಿದೆ. ತಕ್ಷಣ ಜನರು ಪೆಟ್ರೋಲ್​ ಪಂಪ್​ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ಪ್ರಕರಣ ಹೊಸೂರು ಸಮೀಪದ ಸೂಳಗಿರಿಯ ಪೆಟ್ರೋಲ್​ ಬಂಕ್​ನಲ್ಲಿ ನಡೆದಿದೆ. ಪೆಟ್ರೋಲ್ ಬಂಕ್​ನಲ್ಲಿ ನೀರು ಮಿಶ್ರಣ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದ್ದು ತಕ್ಷಣವೇ ಬಂಕ್ ಬಳಿ ಜನ ಜಮಾಯಿಸಿದ್ದಾರೆ.

ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಸೂಳಗಿರಿಯ ಎಚ್‌ಪಿ ಬಂಕ್​ನಲ್ಲಿ ಪೆಟ್ರೋಲ್‌ಗೆ ನೀರು ಬೆರೆಸಿರುವ ಬಗ್ಗೆ ಮಾಹಿತಿಯನ್ನು ಪರಿಶೀಲನೆ ಮಾಡಿದಾಗ ನೀರು ಬರುತ್ತಿರುವುದು ಕಂಫರ್ಮ್ ಆಗಿದ್ದು ತಕ್ಷಣ ಮಾಲೀಕರು ಪೆಟ್ರೋಲ್ ಬಂಕ್ ಸ್ಥಗಿತ ಮಾಡಿದ್ದಾರೆ. ಜನ ಜಮಾಯಿಸುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು ಮಾಹಿತಿ ಪಡೆದ ಚುಳಗಿರಿ ಪೊಲೀಸ್ ಅಧಿಕಾರಿಗಳು ಬಂದು ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net