More

    ಒಡಿಶಾ ರೈಲು ದುರಂತ: 18 ರೈಲುಗಳ ಸಂಚಾರ ರದ್ದು, ಏಳು ರೈಲುಗಳ ಮಾರ್ಗ ಬದಲಾವಣೆ

    ಬೆಂಗಳೂರು: ಒಡಿಶಾದಲ್ಲಿ ಭೀಕರ ರೈಲು ಅಪಘಾತ ಹಿನ್ನೆಲೆಯಲ್ಲಿ ಹಲವು ರೈಲುಗಳ ಸಂಚಾರವನ್ನು ರದ್ದು ಮಾಡಲಾಗಿದ್ದು, ಕೆಲ ಮಾರ್ಗಗಳನ್ನು ಬದಲಿಸಲಾಗಿದೆ. ರೈಲು ದುರಂತದಲ್ಲಿ ಸಾವಿನ ಸಂಖ್ಯೆ 233ಕ್ಕೆ ಏರಿಕೆಯಾಗಿದ್ದು, ಸುಮಾರು 900ಕ್ಕೂ ಅಧಿಕ ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.

    18 ರೈಲುಗಳ ಸಂಚಾರವನ್ನು ರದ್ದು ಮಾಡಿ, 7 ರೈಲು ಮಾರ್ಗವನ್ನು ಬದಲಿಸಲಾಗಿದೆ ಎಂಬ ಮಾಹಿತಿ ತಿಳಿಬಂದಿದೆ. ಹೌರಾ-ಪುರಿ ಸೂಪರ್‌ಫಾಸ್ಟ್‌ ಎಕ್ಸ್‌ಪ್ರೆಸ್‌ ರೈಲು, ಹೌರಾ-ಬೆಂಗಳೂರು ಸೂಪರ್‌ಫಾಸ್ಟ್‌ ಎಕ್ಸ್‌ಪ್ರೆಸ್‌ ಮತ್ತು ಹೌರಾ-ಚೆನ್ನೈ ರೈಲುಗಳು ರದ್ದಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಇದನ್ನೂ ಓದಿ: ಒಡಿಶಾ ರೈಲು ದುರಂತ: ಭಾರತ ಇತಿಹಾಸದಲ್ಲಿ ಸಂಭವಿಸಿರುವ ಭೀಕರ ರೈಲು ಅಪಘಾತಗಳ ಚಿತ್ರಣ ಇಲ್ಲಿದೆ…

    ಹೌರಾ ಎಕ್ಸ್‌ಪ್ರೆಸ್‌ ರೈಲು ಹೌರಾ ಜಂಕ್ಷನ್​ಗೆ ತೆರಳಲು ಎರಡು ದಿನಗಳ ಕಾಲ ಹಿಡಿಯುತ್ತದೆ. ತನ್ನ ಪ್ರಯಾಣದಲ್ಲಿ ಹೌರಾ ಎಕ್ಸ್​ಪ್ರೆಸ್​ ರೈಲು ಮೂರು ರಾಜ್ಯಗಳನ್ನು ದಾಟಲಿದೆ. ಬೆಂಗಳೂರಿನಿಂದ ಹೊರಟು -ಆಂಧ್ರ – ಒಡಿಶಾ – ಕೊಲ್ಕತ್ತಾವನ್ನು ಸೇರಲಿದೆ. ನಿನ್ನೆಯು ಸಹ ಬೆಂಗಳೂರಿನಿಂದ ಹೌರಾ ರೈಲು ಹೊರಟಿತ್ತು. ಬೆಂಗಳೂರಿನಿಂದ-ಹೌರಾ ಜಂಕ್ಷನ್​ಗೆ ಬರೋಬ್ಬರಿ 1937 ಕಿ.ಮೀ ಪ್ರಯಾಣಯಾಣಿಸಬೇಕಿತ್ತು.‌ ಬೆಂಗಳೂರಿನಿಂದ ಬಾಲಸೋರ್ ಜಿಲ್ಲೆಗೆ 1706 ಕಿ.ಮೀ ಪ್ರಯಾಣ ಮಾಡಿತ್ತು. ಇನ್ನು ಕೇವಲ 230 ಕಿ.ಲೋ ಪ್ರಯಾಣ ಬಾಕಿ ಇತ್ತು. ಆ ಸಂದರ್ಭದಲ್ಲಿ ಅಪಘಾತ ಸಂಭವಿಸಿದೆ.

    ಇಂದು ಸಹ ಕೆ.ಆರ್ ಪುರಂನಿಂದ ಹೌರಾ ಎಕ್ಸ್​ಪ್ರೆಸ್​ ರೈಲು ಹೊರಡಬೇಕಿತ್ತು. ಆದರೆ, ದುರಂತ ಹಿನ್ನೆಲೆ ರದ್ದಾಗಿದೆ. ಇಂದು ಬೆಳಗ್ಗೆ 10.50ಕ್ಕೆ ರೈಲು ಹೊರಡಬೇಕಿತ್ತು. ಘಟನೆಯಲ್ಲಿ ಸಾಕಷ್ಟು ಸಾವು-ನೋವುಗಳು ಉಂಟಾಗಿದ್ದು‌ ಮತ್ತು ಹಳಿಗಳು ಹಾಳಾಗಿರುವ ಕಾರಣ ರೈಲು ಪ್ರಯಾಣ ರದ್ದಾಗಿದೆ.

    ರದ್ದಾದ ರೈಲುಗಳ ಪಟ್ಟಿ ಇಲ್ಲಿದೆ

    * ಹೌರಾ-ಪುರಿ ಎಕ್ಸ್‌ಪ್ರೆಸ್ (12837) ರೈಲು ಸಂಚಾರವು ಜೂನ್ 2ರಂದು ಪ್ರಾರಂಭವಾಗಬೇಕಿತ್ತು.
    * ಹೌರಾ-ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಎಕ್ಸ್‌ಪ್ರೆಸ್ (12863) ರೈಲು ಪ್ರಯಾಣವು ಜೂನ್ 2 ರಂದು ಪ್ರಾರಂಭವಾಗಬೇಕಿತ್ತು.
    * ಹೌರಾ-ಚೆನ್ನೈ ಮೇಲ್ (12839) ಸಂಚಾರವು ಜೂನ್ 2 ರಂದು ಪ್ರಾರಂಭವಾಗಬೇಕಿತ್ತು.
    * ಶಾಲಿಮಾರ್-ಪುರಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ (12895) ರೈಲು ಪ್ರಯಾಣವು ಜೂನ್ 2 ರಂದು ಆರಂಭವಾಗಬೇಕಿತ್ತು.
    * ಶಾಲಿಮಾರ್-ಸಂಬಲ್ಪುರ್ ಎಕ್ಸ್‌ಪ್ರೆಸ್ (20831) ರೈಲು ಸಂಚಾರವು ಜೂನ್ 2ರಂದು ಪ್ರಾರಂಭವಾಗಬೇಕಿತ್ತು.
    * ಸಂತ್ರಗಚಿ-ಪುರಿ ವಿಶೇಷ (02837) ರೈಲು ಪ್ರಯಾಣವು ಜೂನ್ 2ರಂದು ಪ್ರಾರಂಭವಾಗಬೇಕಿತ್ತು.
    * ಸೀಲ್ದಾ-ಪುರಿ ಡುರೊಂಟೊ ಎಕ್ಸ್‌ಪ್ರೆಸ್ (22201) ರೈಲು ಸಂಚಾರವು ಜೂನ್ 2ರಂದು ಪ್ರಾರಂಭವಾಗಬೇಕಿತ್ತು.
    * ಬಾಲಸೋರ್-ಭುವನೇಶ್ವರ ವಿಶೇಷ (08411) ರೈಲು ಪ್ರಯಾಣವು ಜೂನ್ 2ರಂದು ಆರಂಭವಾಗಬೇಕಿತ್ತು.
    * ಜಲೇಶ್ವರ-ಪುರಿ ವಿಶೇಷ (08415) ರೈಲು ಸಂಚಾರವು ಜೂನ್ 3 ರಂದು ಆರಂಭವಾಗಬೇಕಿತ್ತು.
    * ಬ್ಯಾಂಗ್ರಿಪೋಸಿ-ಪುರಿ, ಎಕ್ಸ್‌ಪ್ರೆಸ್ (12891) ರೈಲು ಪ್ರಯಾಣವು ಜೂನ್ 3ರಂದು ಪ್ರಾರಂಭವಾಗಬೇಕಿತ್ತು.
    * ಖರಗ್‌ಪುರ-ಖುರ್ದಾ ರೋಡ್ ಎಕ್ಸ್‌ಪ್ರೆಸ್ (18021) ರೈಲು ಸಂಚಾರವು ಜೂನ್ 3ರಂದು ಪ್ರಾರಂಭವಾಗಬೇಕಿತ್ತು.
    * ಖರಗ್‌ಪುರ -ಭದ್ರಕ್ ವಿಶೇಷ (08063) ರೈಲು ಜೂನ್ 3ರಂದು ಹೊರಡಬೇಕಿತ್ತು.
    * 22895 ಹೌರಾ-ಪುರಿ ಎಕ್ಸ್‌ಪ್ರೆಸ್ ಪ್ರಯಾಣವು ಜೂನ್ 3, 2023 ರಂದು ಪ್ರಾರಂಭವಾಗಬೇಕಿತ್ತು.
    * ಹೌರಾ-ಸಿಕಂದರಾಬಾದ್ ಎಕ್ಸ್‌ಪ್ರೆಸ್ (12703) ಪ್ರಯಾಣವು ಜೂನ್ 3ರಂದು ಪ್ರಾರಂಭವಾಗಬೇಕಿತ್ತು.
    * ಶಾಲಿಮಾರ್-ಪುರಿ ಎಕ್ಸ್‌ಪ್ರೆಸ್ (12821) ಪ್ರಯಾಣವು ಜೂನ್ 3ರಂದು ಪ್ರಾರಂಭವಾಗಬೇಕಿತ್ತು.
    * ಹೌರಾ-ಸರ್ ಎಂ ವಿಶ್ವೇಶ್ವರೈವ ಟರ್ಮಿನಲ್ ಎಕ್ಸ್‌ಪ್ರೆಸ್ (12245) ಪ್ರಯಾಣವು ಜೂನ್ 3ರಂದು ಪ್ರಾರಂಭವಾಗಬೇಕಿತ್ತು.
    * ಬಾಲಸೋರ್-ಭದ್ರಕ್ ವಿಶೇಷ (08031) ರೈಲು ಪ್ರಯಾಣವು ಜೂನ್ 3ರಂದು ಪ್ರಾರಂಭವಾಗಬೇಕಿತ್ತು.
    * ಶಾಲಿಮಾರ್-ಹೈದರಾಬಾದ್ ಈಸ್ಟ್ ಕೋಸ್ಟ್ ಎಕ್ಸ್‌ಪ್ರೆಸ್ (18045) ರೈಲು ಪ್ರಯಾಣವು ಜೂನ್ 3ರಂದು ಪ್ರಾರಂಭವಾಗಬೇಕಿತ್ತು.
    * ಹೌರಾ-ತಿರುಪತಿ ಎಕ್ಸ್‌ಪ್ರೆಸ್ (20889) ರೈಲು ಪ್ರಯಾಣವು ಜೂನ್ 3ರಂದು ಪ್ರಾರಂಭವಾಗಬೇಕಿತ್ತು.
    * ಭದ್ರಕ್-ಹೌರಾ ಎಕ್ಸ್‌ಪ್ರೆಸ್ (18044) ರೈಲು ಪ್ರಯಾಣವು ಜೂನ್ 3ರಂದು ಪ್ರಾರಂಭವಾಗಬೇಕಿತ್ತು.
    * ಜಜ್‌ಪುರ್ ಕಿಯೋಂಜರ್ ರಸ್ತೆ-ಖರಗ್‌ಪುರ ಎಕ್ಸ್‌ಪ್ರೆಸ್ (18038) ರೈಲು ಪ್ರಯಾಣವು ಜೂನ್ 3ರಂದು ಪ್ರಾರಂಭವಾಗಬೇಕಿತ್ತು.
    * ಹೌರಾ-ಭುವನೇಶ್ವರ ಎಕ್ಸ್‌ಪ್ರೆಸ್ (12073) ರೈಲು ಪ್ರಯಾಣವು ಜೂನ್ 3ರಂದು ಪ್ರಾರಂಭವಾಗಬೇಕಿತ್ತು.
    * ಭುವನೇಶ್ವರ-ಹೌರಾ ಎಕ್ಸ್‌ಪ್ರೆಸ್ (12074) ರೈಲು ಪ್ರಯಾಣವು ಜೂನ್ 3ರಂದು ಪ್ರಾರಂಭವಾಗಬೇಕಿತ್ತು.
    * ಹೌರಾ-ಪುರಿ ಶತಾಬ್ದಿ ಎಕ್ಸ್‌ಪ್ರೆಸ್ (12277) ರೈಲು ಪ್ರಯಾಣವು ಜೂನ್ 3 ರಂದು ಪ್ರಾರಂಭವಾಗಬೇಕಿತ್ತು.
    * ಪುರಿ-ಹೌರಾ ಶತಾಬ್ದಿ ಎಕ್ಸ್‌ಪ್ರೆಸ್ (12078) ರೈಲು ಪ್ರಯಾಣವು ಜೂನ್ 3ರಂದು ಪ್ರಾರಂಭವಾಗಬೇಕಿತ್ತು.
    * ಭದ್ರಕ್-ಬಾಲಾಸೋರ್ ವಿಶೇಷ (08032) ರೈಲು ಪ್ರಯಾಣವು ಜೂನ್ 3ರಂದು ಪ್ರಾರಂಭವಾಗಬೇಕಿತ್ತು.
    * ಭದ್ರಕ್-ಬಾಲಾಸೋರ್ ವಿಶೇಷ (08032) ರೈಲು ಪ್ರಯಾಣವು ಜೂನ್ 3ರಂದು ಪ್ರಾರಂಭವಾಗಬೇಕಿತ್ತು.
    * ಪುರಿ-ಶಾಲಿಮಾರ್ ಎಕ್ಸ್‌ಪ್ರೆಸ್ (12822) ರೈಲು ಪ್ರಯಾಣವು ಜೂನ್ 3ರಂದು ಪ್ರಾರಂಭವಾಗಬೇಕಿತ್ತು.
    * ಪುರಿ-ಆನಂದ್ ವಿಹಾರ್ ಎಕ್ಸ್‌ಪ್ರೆಸ್ (12815) ರೈಲು ಪ್ರಯಾಣವು ಜೂನ್ 3ರಂದು ಪ್ರಾರಂಭವಾಗಬೇಕಿತ್ತು.
    * ಭದ್ರಕ್-ಖರಗ್‌ಪುರ ವಿಶೇಷ (08064) ರೈಲು ಪ್ರಯಾಣವು ಜೂನ್ 3 ರಂದು ಪ್ರಾರಂಭವಾಗಬೇಕಿತ್ತು.
    * ಪುರಿ-ಹೌರಾ ವಂದೇ ಭಾರತ್ ಎಕ್ಸ್‌ಪ್ರೆಸ್ (22896) ರೈಲು ಪ್ರಯಾಣವು ಜೂನ್ 3ರಂದು ಪ್ರಾರಂಭವಾಗಬೇಕಿತ್ತು.
    * ಪುರಿ-ಜಲೇಶ್ವರ ವಿಶೇಷ (08416) ರೈಲು ಪ್ರಯಾಣವು ಜೂನ್ 3ರಂದು ಪ್ರಾರಂಭವಾಗಬೇಕಿತ್ತು.
    * ಪುರಿ-ಪಾಟ್ನಾ ವಿಶೇಷ (08439) ಪ್ರಯಾಣವು ಜೂನ್ 3 ರಂದು ಪ್ರಾರಂಭವಾಗಬೇಕಿತ್ತು.

    ಇದನ್ನೂ ಓದಿ: ಒಡಿಶಾ ರೈಲು ದುರಂತ; ಸಂತ್ರಸ್ತರ ಸಂಬಂಧಿಕರಿಗಾಗಿ ಇಲ್ಲಿವೆ ಸಹಾಯವಾಣಿ ಸಂಖ್ಯೆಗಳು

    ಮಾರ್ಗ ಬದಲಿಸಿದ ರೈಲುಗಳ ಪಟ್ಟಿ ಇಲ್ಲಿದೆ

    * ಜೂನ್ 2 ರಂದು ಪ್ರಯಾಣ ಆರಂಭಿಸಿದ ಪುರಿ-ನವದೆಹಲಿ ಪುರುಸೊತ್ತಮ್ ಎಕ್ಸ್‌ಪ್ರೆಸ್ (12801) ರೈಲು ಪುರಿಯಿಂದ ಜಖಾಪುರ ಮತ್ತು ಜರೋಲಿ ಮಾರ್ಗವಾಗಿ ಪ್ರಯಾಣಿಸಿದೆ.
    * ಜೂನ್ 2 ರಂದು ಸಂಚಾರ ಆರಂಭಿಸಿರುವ ಪುರಿ-ಋಷಿಕೇಶ ಕಳಿಂಗ ಉತ್ಕಲ್ ಎಕ್ಸ್‌ಪ್ರೆಸ್ (18477) ರೈಲು ಪುರಿಯಿಂದ ಅಂಗುಲ್-ಸಂಬಲ್‌ಪುರ್ ಸಿಟಿ-ಜಾರ್ಸುಗುಡಾ ರಸ್ತೆ-ಐಬಿ ಮಾರ್ಗವಾಗಿ ಪ್ರಯಾಣಿಸಿದೆ.
    * ಜೂನ್ 2 ರಂದು ಪುರಿಯಿಂದ ಹೊರಟ ಪುರಿ-ಪಾಟ್ನಾ ವಿಶೇಷ (03229) ರೈಲು ಜಖಾಪುರ-ಜರೋಲಿ ಮಾರ್ಗವಾಗಿ ಪ್ರಯಾಣಿಸಿದೆ.
    * ಜೂನ್ 1 ರಂದು ಚೆನ್ನೈನಿಂದ ಹೊರಟ ಚೆನ್ನೈ-ಹೌರಾ ಮೇಲ್ (12840) ರೈಲು ಜಖಾಪುರ-ಜರೋಲಿ ಮಾರ್ಗವಾಗಿ ಸಂಚರಿಸುತ್ತಿದೆ.
    * ಜೂನ್ 1 ರಂದು ವಾಸ್ಕೋದಿಂದ ಹೊರಟ ವಾಸ್ಕೋ ಡ ಗಾಮಾ-ಹೌರಾ ಅಮರಾವತಿ ಎಕ್ಸ್‌ಪ್ರೆಸ್ (18048) ರೈಲು ಜಖಾಪುರ-ಜರೋಲಿ ಮಾರ್ಗವಾಗಿ ಚಲಿಸುತ್ತಿದೆ.
    * ಜೂ. 2ರಂದು ಸಂಚಾರ ಆರಂಭಿಸಿರುವ ಸಿಕಂದರಬಾದ್​-ಶಾಲಿಮಾರ್​ ಎಕ್ಸ್​ಪ್ರೆಸ್​ (22850) ರೈಲು ಜಖಾಪುರ ಮತ್ತು ಜರೋಲಿ ಮಾರ್ಗವಾಗಿ ಸಂಚರಿಸುತ್ತಿದೆ.
    * ಜೂನ್ 2 ರಂದು ಹೊರಟ ಸಂಬಲ್‌ಪುರ-ಶಾಲಿಮಾರ್ ಎಕ್ಸ್‌ಪ್ರೆಸ್ (22804) ರೈಲು ಸಂಬಲ್‌ಪುರದಿಂದ ಸಂಬಲ್‌ಪುರ ನಗರ-ಜಾರ್ಸುಗುಡಾ ಮಾರ್ಗವಾಗಿ ಪ್ರಯಾಣಿಸಿದೆ.

    233 ಮಂದಿಯನ್ನು ಬಲಿಪಡೆದ ಒಡಿಶಾ ರೈಲು ದುರಂತ ಹೇಗಾಯ್ತು? ಘಟನೆಗೆ ಕಾರಣ ಏನು? ಇಲ್ಲಿದೆ ಮಾಹಿತಿ…

    ಒಡಿಶಾ ರೈಲು ದುರಂತ: ಭಾರತ ಇತಿಹಾಸದಲ್ಲಿ ಸಂಭವಿಸಿರುವ ಭೀಕರ ರೈಲು ಅಪಘಾತಗಳ ಚಿತ್ರಣ ಇಲ್ಲಿದೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts