More

    ಹುಡುಗಿಯರು ಗುಂಪು ಗುಂಪಾಗಿ ಡ್ಯಾನ್ಸ್ ಮಾಡುತ್ತಿದ್ದರೂ ಎಲ್ಲರ ಕಣ್ಣು ಮಾತ್ರ ಬಿಳಿ ಟೀ ಶರ್ಟ್ ಧರಿಸಿದ ಆ ಯುವತಿಯ ಮೇಲಿತ್ತು!

    ನವದೆಹಲಿ: ವಿಶೇಷವಾಗಿ ‘ದೆಹಲಿ ಮೆಟ್ರೋ’ ಇಂಟರ್​​​ನೆಟ್​​ನಲ್ಲಿ ಸಾಕಷ್ಟು ಪ್ರಸಿದ್ಧವಾಗಿದೆ. ಪ್ರತಿದಿನ ಮೆಟ್ರೋ ಕೋಚ್‌ಗಳಲ್ಲಿ ಜಗಳ, ನೃತ್ಯ ಇತ್ಯಾದಿಗಳ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತವೆ. ಆದರೆ ಈಗ ಇಂತಹುದೇ ಘಟನೆಗಳು ಭಾರತೀಯ ರೈಲ್ವೆಯ ರೈಲುಗಳಲ್ಲಿಯೂ ಕಂಡುಬರುತ್ತಿವೆ. ಹೌದು, ಇತ್ತೀಚೆಗೆ ರೈಲೊಂದರ ಬೋಗಿಗಳಲ್ಲಿ ಹುಡುಗಿಯರು ಡ್ಯಾನ್ಸ್ ಮಾಡುವ ಹಲವು ವಿಡಿಯೋಗಳು ರಿವೀಲ್ ಆದವು. ಏತನ್ಮಧ್ಯೆ ಮತ್ತೊಮ್ಮೆ ಅಂತಹದ್ದೇ ವಿಡಿಯೋ ವೈರಲ್ ಆಗುತ್ತಿದೆ.

    ಹೌದು, ಈ ಬಾರಿ ಅನೇಕ ಹುಡುಗಿಯರ ಗುಂಪು ಕೋಚ್‌ನಲ್ಲಿ ನೃತ್ಯ ಮಾಡುತ್ತಿದ್ದಾರೆ. ಕೋಚ್ ನಲ್ಲಿ ಕುಣಿಯುವುದು ಮಾತ್ರವಲ್ಲದೆ, ತಮ್ಮ ಚಮತ್ಕಾರವನ್ನೂ ತೋರಿಸುತ್ತಿದ್ದಾರೆ. ಇದನ್ನೆಲ್ಲಾ ನೋಡುತ್ತಿದ್ದ ಹುಡುಗಿಯೊಬ್ಬಳ ಮುಖದ ಹಾವಭಾವ ಈಗ ಎಲ್ಲರ ಗಮನ ಸೆಳೆಯುತ್ತಿದೆ. ಜತೆಗೆ ಇವುಗಳನ್ನು ನಿಲ್ಲಿಸಲು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುವಂತೆ ಜನರು ರೈಲ್ವೆ ಇಲಾಖೆಗೆ ವಿನಂತಿ ಮಾಡಿಕೊಳ್ಳುತ್ತಿದ್ದಾರೆ.

    ಹುಡುಗಿಯರು ಗುಂಪು ಗುಂಪಾಗಿ ಡ್ಯಾನ್ಸ್ ಮಾಡುತ್ತಿದ್ದರೂ ಎಲ್ಲರ ಕಣ್ಣು ಮಾತ್ರ ಬಿಳಿ ಟೀ ಶರ್ಟ್ ಧರಿಸಿದ ಆ ಯುವತಿಯ ಮೇಲಿತ್ತು!

    ಈ ವಿಡಿಯೋವನ್ನು X ಹ್ಯಾಂಡಲ್​​​ನಲ್ಲಿ @desimojito ನಿಂದ ಪೋಸ್ಟ್ ಮಾಡಲಾಗಿದ್ದು, ವಿಡಿಯೋ ನೋಡಿದ ಪ್ರತಿಯೊಬ್ಬರು ಬಿಳಿ ದಿರಿಸು ಧರಿಸಿರುವ ಆ ಹುಡುಗಿಯ ಎಕ್ಸ್​​​ಪ್ರೆಶನ್​​​​ ಬಗ್ಗೆ ಮಾತನಾಡಿದ್ದಾರೆ. ಸುದ್ದಿ ಬರೆಯುವ ತನಕ, ಟ್ವೀಟ್ 12 ಲಕ್ಷ ವೀಕ್ಷಣೆಗಳು ಮತ್ತು ಸುಮಾರು 9 ಸಾವಿರ ಲೈಕ್‌ಗಳು ಪಡೆದಿದೆ. ಅಲ್ಲದೆ, ನೂರಾರು ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಕೆಲವರು ರೈಲಿನಲ್ಲಿ ಇಂತಹವುಗಳು ಏಕೆ ಹೆಚ್ಚುತ್ತಿವೆ ಎಂದು ಕೇಳಿದರೆ, ಮತ್ತೆ ಕೆಲವರು ಇದಕ್ಕೆ ರೀಲ್ ಮತ್ತು ವೀಲ್ ಎಂಬ ಶೀರ್ಷಿಕೆಯನ್ನು ನೀಡಿದ್ದಾರೆ. ಇಂತಹ ಪ್ರಯಾಣಿಕರಿಗೆ ರೈಲ್ವೆ ದಂಡ ವಿಧಿಸಬೇಕು ಎಂದೆಲ್ಲಾ ಕಾಮೆಂಟ್​​​ ಮಾಡಿದ್ದು, ಈ ಸಂಪೂರ್ಣ ವಿಷಯದ ಬಗ್ಗೆ ನಿಮ್ಮ ಅಭಿಪ್ರಾಯವೇನು? ಕಾಮೆಂಟ್‌ಗಳಲ್ಲಿ ತಿಳಿಸಿ.

    ವಿಡಿಯೋದಲ್ಲಿ ಏನಿದೆ? 
    ಕೆಲವೇ ಕೆಲವು ಸೆಕೆಂಡುಗಳ ಕಾಲವಿರುವ ವಿಡಿಯೋದಲ್ಲಿ, ಭಾರತೀಯ ರೈಲ್ವೆಯ ಕೋಚ್‌ನಲ್ಲಿ ಹುಡುಗಿಯರ ಗ್ರೂಪ್​​​​ ಡಾನ್ಸ್​​​ ಮಾಡುತ್ತಿರುವುದನ್ನು ನಾವು ನೋಡಬಹುದು. ಇದೇ ಸಮಯದಲ್ಲಿ, ಇತರ ಪ್ರಯಾಣಿಕರು ಸಹ ಕೋಚ್‌ನಲ್ಲಿ ಇದ್ದಾರೆ. ಆದರೆ ಈ ಹುಡುಗಿಯರು ಮಾತ್ರ ಕೂಲ್ ಆಗಿ ಡ್ಯಾನ್ಸ್ ಮಾಡುತ್ತಿದ್ದಾರೆ. ಕೆಲವು ಪ್ರಯಾಣಿಕರು ಅವರ ನೃತ್ಯ ನೋಡಿ ಖುಷಿಪಡುತ್ತಿದ್ದರೆ, ಕೆಲವರು ತೊಂದರೆಯಾಗುತ್ತಿರುವ ಬಗ್ಗೆ ಹೇಳಿಕೊಂಡಿದ್ದಾರೆ. ಇದೆಲ್ಲದರ ಜೊತೆಗೆ ಅವರ ನೃತ್ಯವನ್ನು ನೋಡಿ ಅವರ ಬಳಿ ಕುಳಿತಿದ್ದ ಹುಡುಗಿಯೊಬ್ಬರ ಹಾವಭಾವ ಕೂಡ ಹೆಚ್ಚಿನ ಗಮನ ಸೆಳೆದಿದೆ. ಆ ಹುಡುಗಿಯನ್ನು ನೋಡಿದವರು ಇದು ಹೆಚ್ಚಿನ ಪ್ರಯಾಣಿಕರ ಸ್ಥಿತಿ ಎಂದು ಹೇಳುತ್ತಿದ್ದಾರೆ.

    ಅಯೋಧ್ಯೆಯಲ್ಲಿ ಇಂದಿನಿಂದ ರಾಮೋತ್ಸವ ಆರಂಭ: ಮಾ.24ರವರೆಗೆ ವೈವಿಧ್ಯಮಯ ಕಾರ್ಯಕ್ರಮ, 35 ಸಾವಿರ ಕಲಾವಿದರು ಭಾಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts