More

    ಒಡಿಶಾ ರೈಲು ದುರಂತ: ಭಾರತ ಇತಿಹಾಸದಲ್ಲಿ ಸಂಭವಿಸಿರುವ ಭೀಕರ ರೈಲು ಅಪಘಾತಗಳ ಚಿತ್ರಣ ಇಲ್ಲಿದೆ…

    ನವದೆಹಲಿ: ಒಡಿಶಾದಲ್ಲಿ ಶುಕ್ರವಾರ ಸಂಜೆ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ 233 ಮಂದಿ ಮೃತಪಟ್ಟು, 900ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ತಮ್ಮ ಕುಟುಂಬದ ಸದಸ್ಯರನ್ನು ಕಳೆದುಕೊಂಡ ಕುಟುಂಬಗಳಲ್ಲಿ ಆಕ್ರಂದನ ಮುಗಿಲು ಮುಟ್ಟಿದ್ದು, ಗಾಯಾಳುಗಳ ಚೀರಾಟ ಮನಕಲಕುವಂತಿದೆ. ಈ ಅಪಘಾತದ ತೀವ್ರತೆ ಭಯಹುಟ್ಟಿಸುವಂತಿದೆ. ಸ್ವಾಂತತ್ರ್ಯ ಭಾರತದ ನಂತರ ಸಂಭವಿಸಿದ ಅತ್ಯಂತ ಮಾರಾಣಾಂತಿಕ ಅಪಘಾತಗಳಲ್ಲಿ ಒಡಿಶಾ ರೈಲು ದುರಂತ ಕೂಡ ಒಂದಾಗಿದೆ ಎಂದು ಅಂಕಿ-ಅಂಶಗಳು ತಿಳಿಸಿವೆ.

    ಭಾರತದ ಇತಿಹಾಸದಲ್ಲಿ ಸಂಭವಿಸಿರುವ ಅತ್ಯಂತ ಭೀಕರ ರೈಲು ಅಪಘಾತಗಳ ಚಿತ್ರಣ ಇಲ್ಲಿದೆ…
    * 1981ರ ಜೂನ್​ 6ರಂದು ಭಾರತವು ಅತ್ಯಂತ ಭೀಕರ ರೈಲು ದುರಂತಕ್ಕೆ ಸಾಕ್ಷಿಯಾಯಿತು. ಬಿಹಾರದಲ್ಲಿ ಈ ದುರಂತ ಘಟಿಸಿತು. ಸೇತುವೆಯನ್ನು ದಾಟುವಾಗ ರೈಲು ಬಾಗಮತಿ ನದಿಗೆ ಬಿದ್ದು, ಸುಮಾರು 750ಕ್ಕೂ ಹೆಚ್ಚು ಮಂದಿ ಅಸುನೀಗಿದರು.

    * 1995ರ ಆಗಸ್ಟ್​ 20ರಂದು ಉತ್ತರ ಪ್ರದೇಶದ ಫಿರೋಜಾಬಾದ್​ ಬಳಿ ಪುರುಷೋತ್ತಮ್​ ಎಕ್ಸ್​ಪ್ರೆಸ್​ ರೈಲು, ಸ್ಟೇಷನರಿ ಕಾಳಿಂದಿ ಎಕ್ಸ್‌ಪ್ರೆಸ್ ರೈಲಿಗೆ ಡಿಕ್ಕಿ ಹೊಡೆಯಿತು. ಈ ಭಯಾನಕ ಅಪಘಾತದಲ್ಲಿ 305ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡರು.

    ಇದನ್ನೂ ಓದಿ: ಪಾಕ್ ಹಣದುಬ್ಬರ ಗಗನಕ್ಕೆ; ಬಡವರು, ಮಧ್ಯಮ ವರ್ಗದವರು ಕಂಗಾಲು

    * 1988ರ ನೆವೆಂಬರ್​ 26ರಂದು ಪಂಜಾಬ್​ನ ಖನ್ನಾದಲ್ಲಿ ಫ್ರಂಟಿಯರ್ ಗೋಲ್ಡನ್ ಟೆಂಪಲ್ ರೈಲಿನ ಹಳಿತಪ್ಪಿದ ಮೂರು ಬೋಗಿಗಳಿಗೆ ಜಮ್ಮು ತವಿ-ಸೀಲ್ದಾ ಎಕ್ಸ್‌ಪ್ರೆಸ್ ಡಿಕ್ಕಿ ಹೊಡೆದಿತ್ತು. ಈ ಅಪಘಾತದಲ್ಲಿ 212 ಮಂದಿ ಅಸುನೀಗಿದರು.

    * 1999ರ ಆಗಸ್ಟ್​ 2ರಂದು ಪಶ್ಚಿಮ ಬಂಗಾಳದ ಗೈಸಾಲ್​ನಲ್ಲಿ ರೈಲು ದುರಂತ ಸಂಭವಿಸಿತು. ಉತ್ತರ ಫ್ರಂಟಿಯರ್ ರೈಲ್ವೆ ಕತಿಹಾರ್ ವಿಭಾಗದ ಗೈಸಾಲ್ ನಿಲ್ದಾಣದಲ್ಲಿ ಬ್ರಹ್ಮಪುತ್ರ ರೈಲು, ಅವಧ್ ಅಸ್ಸಾಂ ಎಕ್ಸ್‌ಪ್ರೆಸ್‌ಗೆ ಅಪ್ಪಳಿಸಿತು. ಪರಿಣಾಮ 285 ಮಂದಿ ಮೃತಪಟ್ಟು, 300ಕ್ಕೂ ಅಧಿಕ ಮಂದಿ ಗಾಯಗೊಂಡರು. ಈ ದುರಂತದಲ್ಲಿ ಬಹುತೇಕ ಸಂತ್ರಸ್ತರು ಸೇನೆ, ಬಿಎಸ್​ಎಫ್​ ಮತ್ತು ಸಿಆರ್​ಪಿಎಫ್​ ಸಿಬ್ಬಂದಿಯಾಗಿದ್ದರು.

    * 2016ರ ನವೆಂಬರ್​ 20ರಂದು ಇಂದೋರ್-ರಾಜೇಂದ್ರ ನಗರ ಎಕ್ಸ್‌ಪ್ರೆಸ್‌ನ 14 ಬೋಗಿಗಳು ಉತ್ತರ ಪ್ರದೇಶದ ಕಾನ್ಪುರದಿಂದ ಸುಮಾರು 60 ಕಿ.ಮೀ ದೂರದಲ್ಲಿರುವ ಪುಖ್ರಾಯನ್‌ನಲ್ಲಿ ಹಳಿತಪ್ಪಿದವು. ಈ ಅವಘಡದಲ್ಲಿ 152 ಮಂದಿ ಮೃತಪಟ್ಟು, 260ಕ್ಕೂ ಅಧಿಕ ಮಂದಿ ಗಾಯಾಳುಗಳಾದರು.

    * 2002ರ ಸೆಪ್ಟೆಂಬರ್​ 9ರಂದು ಪಶ್ಚಿಮ ಬಂಗಾಳದ ಹೌರಾ ರಾಜಧಾನಿ ಎಕ್ಸ್‌ಪ್ರೆಸ್ ರೈಲು ಬಿಹಾರ ರಾಜ್ಯದ ಔರಂಗಾಬಾದ್ ಜಿಲ್ಲೆಯ ರಫಿಗಂಜ್‌ನ ಧಾವೆ ನದಿಯ ಸೇತುವೆಯ ಮೇಲೆ ಹಳಿತಪ್ಪಿ 140ಕ್ಕೂ ಹೆಚ್ಚು ಜನರು ಸಾವಿಗೀಡಾದರು. ಇದು ಉಗ್ರರ ಕೃತ್ಯ ಎಂಬ ಸುದ್ದಿಯು ಆಯಿತು.

    * 1964ರ ಡಿಸೆಂಬರ್​ 23ರಂದು ಪಂಬನ್-ಧನುಷ್ಕೋಡಿ ಪ್ಯಾಸೆಂಜರ್ ರೈಲು ರಾಮೇಶ್ವರಂ ಸೈಕ್ಲೋನ್‌ನಿಂದ ಕೊಚ್ಚಿಹೋಗಿ, ಅದರಲ್ಲಿದ್ದ 126 ಪ್ರಯಾಣಿಕರು ಮೃತಪಟ್ಟರು.

    ಇದನ್ನೂ ಓದಿ: ಒಡಿಶಾ ರೈಲು ದುರಂತ; ಸಂತ್ರಸ್ತರ ಸಂಬಂಧಿಕರಿಗಾಗಿ ಇಲ್ಲಿವೆ ಸಹಾಯವಾಣಿ ಸಂಖ್ಯೆಗಳು

    * 2010ರ ಮೇ 28ರಂದು ಜ್ಞಾನೇಶ್ವರಿ ಎಕ್ಸ್‌ಪ್ರೆಸ್ ರೈಲು ಹಳಿತಪ್ಪಿ ಭೀಕರ ದುರಂತ ಸಂಭವಿಸಿತು. ಮುಂಬೈಗೆ ತೆರಳುತ್ತಿದ್ದ ರೈಲು ಜಾರ್‌ಗ್ರಾಮ್ ಬಳಿ ಹಳಿತಪ್ಪಿ, ಮುಂದೆ ಬರುತ್ತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆಯಿತು. ಇದರ ಪರಿಣಾಮ 148 ಪ್ರಯಾಣಿಕರು ಕೊನೆಯುಸಿರೆಳೆದರು.

    ಒಡಿಶಾ ರೈಲು ದುರಂತ ಸಂಭವಿಸಿದ್ದು ಹೇಗೆ?

    ಶುಕ್ರವಾರ (ಜೂ. 2) ಪಶ್ಚಿಮ ಬಂಗಾಳದ ಹೌರಾ ನಗರದಿಂದ ತಮಿಳುನಾಡಿನ ಚೆನ್ನೈಗೆ ತೆರಳುತ್ತಿದ್ದ ಕೊರಮಂರಲ್​ ಎಕ್ಸ್​ಪ್ರೆಸ್​ ರೈಲಿನ ಕೆಲವು ಬೋಗಿಗಳು ಹಳಿತಪ್ಪಿ ಪಕ್ಕದ ಹಳಿಗಳ ಮೇಲೆ ಬಿದ್ದವು. ಈ ವೇಳೆ ಮತ್ತೊಂದು ಕಡೆಯಿಂದ ಬರುತ್ತಿದ್ದ ಯಶವಂತಪುರ-ಹೌರ ಸೂಪರ್​ಪಾಸ್ಟ್​ ಟ್ರೈನ್​ ಹಳಿ ಮೇಲೆ ಬಿದ್ದಿ ಕೋರಮಂಡಲ್​ ಎಕ್ಸ್​ಪ್ರೆಸ್​ ಟ್ರೈನ್​ ಬೋಗಿಗಳಿಗೆ ಡಿಕ್ಕಿ ಹೊಡೆದಿದೆ ಎಂದು ರೈಲ್ವೆ ಸಚಿವಾಲಯದ ವಕ್ತಾರ ಅಮಿತಾಬ್​ ಶರ್ಮ ಅವರು ತಿಳಿಸಿದ್ದಾರೆ. (ಏಜೆನ್ಸೀಸ್​)

    ಒಡಿಶಾ ರೈಲು ದುರಂತ: ಸಾವಿನ ಸಂಖ್ಯೆ 233ಕ್ಕೆ ಏರಿಕೆ, 900ಕ್ಕೂ ಅಧಿಕ ಮಂದಿಗೆ ಗಾಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts