More

    ಸಿಗ್ನಲ್​ ದುರಸ್ತಿ ವೇಳೆ ಜವರಾಯನಂತೆ ಅಪ್ಪಳಿಸಿದ ರೈಲು; ಮೂವರ ದುರ್ಮರಣ

    ಮುಂಬೈ: ಸಿಗ್ನಲ್​ ದುರಸ್ತಿ ಕಾರ್ಯ ನಡೆಯುತ್ತಿದ್ದ ವೇಳೆ ರೈಲೊಂದು ಕಾರ್ಮಿಕರಿಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಪ್ರಾಣ ಬಿಟ್ಟಿರುವ ಘಟನೆ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಸಾಯ್‌ ರಸ್ತೆ ಮತ್ತು ನೈಗಾಂವ್ ನಿಲ್ದಾಣಗಳ ನಡುವೆ ನಡೆದಿದೆ. ಘಟನೆಯೂ ಸೋಮವಾರ ತಡರಾತ್ರಿ ನಡೆದಿದ್ದು, ಘಟನೆ ಸಂಬಂಧ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಪಶ್ಚಿಮ ರೈಲ್ವೆ (WR) ಆದೇಶಿಸಿದೆ.

    ಮೃತರನ್ನು ಮುಖ್ಯ ಸಿಗ್ನಲಿಂಗ್ ಇನ್‌ಸ್ಪೆಕ್ಟರ್‌ ವಾಸು ಮಿತ್ರ, ಎಲೆಕ್ಟ್ರಿಕಲ್ ಸಿಗ್ನಲಿಂಗ್ ನಿರ್ವಾಹಕ ಅಧಿಕಾರಿ ಸೋಮನಾಥ ಉತ್ತಮ್ ಲಂಬುಟ್ರೆ, ಸಹಾಯಕ ಸಚಿನ್ ವಾಂಖೆಡೆ ಎಂದು ಗುರುತಿಸಲಾಗಿದೆ.

    Railway Man

    ಇದನ್ನೂ ಓದಿ: ಭಾರತ್​ ಜೋಡೋ ನ್ಯಾಯ್​ ಯಾತ್ರೆ; ರಾಹುಲ್​ ಗಾಂಧಿ ವಿರುದ್ಧ ಪ್ರಕರಣ ದಾಖಲಿಸುವಂತೆ ಸೂಚನೆ

    ಈ ಕುರಿತು ಪ್ರತಿಕ್ರಿಯಿಸಿರುವ ಪಶ್ಚಿಮ ರೈಲ್ವೆಯ ಹಿರಿಯ ಅಧಿಕಾರಿಯೊಬ್ಬರು, ವಸಾಯ್‌ ರಸ್ತೆ ಮತ್ತು ನೈಗಾಂವ್ ನಿಲ್ದಾಣಗಳ ನಡುವಿನ ಸಿಗ್ನಲ್​ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಮ ಅದನ್ನು ಪರಿಶೀಲಿಸಲು ಮೂವರು ಅಧಿಕಾರಿಗಳು ತೆರಳಿದದ್ದರು. ಮೂವರು ಅಧಿಕಾರಿಗಳು ನಿರ್ವಹಣೆ ಕಾರ್ಯದಲ್ಲಿ ತೊಡಗಿದ್ದರು. ಇದೇ ಮಾರ್ಗದಲ್ಲಿ ಬಂದ ಚರ್ಚ್‌ಗೇಟ್ – ವಿರಾರ್ ರೈಲು ದುರಸ್ಥಿ ಕಾರ್ಯದಲ್ಲಿ ತೊಡಗಿದ್ದ ಮೂವರಿಗೆ ಡಿಕ್ಕಿ ಹೊಡೆದಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಮೃತರ ಕುಟುಂಬಸ್ಥರಿಗೆ ತಕ್ಷಣಕ್ಕೆ ತಲಾ 55 ಸಾವಿರ ರೂ. ಪರಿಹಾರ ನೀಡಲಾಗಿದೆ. ಮುಂದಿನ 15 ದಿನಗಳಲ್ಲಿ ಇತರೆ ಭತ್ಯೆಗಳು ಸೇರಿದಂತೆ ತಲಾ ₹40 ಲಕ್ಷ ರೂ. ಪರಿಹಾರ ನೀಡಲಾಗುವುದು. ಈ ಸಂಬಂಧ ತನಿಖೆಗೆ ಆದೇಶಿಸಲಾಗಿದ್ದು, ವರದಿ ಆಧರಿಸಿ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಪಶ್ಚಿಮ ರೈಲ್ವೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts