More

    ರಾಮರಾಜ್ಯ – ರಾಷ್ಟ್ರಕ್ಕೆ ಒಂದು ಆದರ್ಶ

    ಸದ್ಗುರು
    ಭಾರತದಲ್ಲಿ ದೇವರಂತೆ ಪೂಜಿಸಲ್ಪಡುವ ಜನರು, ಆ ಹಂತಕ್ಕೆ ಏರಿದವರು. ಉದಾಹರಣೆಗೆ, ರಾಮನನ್ನು ದೇವರಂತೆ ಪೂಜಿಸಲಾಗುತ್ತದೆ. ಆದರೆ ಅವನು ಅತ್ಯುತ್ತಮ ರಾಜನೆಂದು ಪರಿಗಣಿಸಲ್ಪಟ್ಟ ಕಾರಣ ಆ ಸ್ಥಾನಕ್ಕೆ ಏರಿದ. ಅವನ ಆಡಳಿತವು ಅತ್ಯಂತ ಕರುಣೆಯಿಂದ ತುಂಬಿದ ಮತ್ತು ಅತ್ಯಂತ ನ್ಯಾಯಯುತ ಆಡಳಿತವಾಗಿತ್ತು. ಮತ್ತು ಅನೇಕ ವಿಧಗಳಲ್ಲಿ, ಈ 6000 ವರ್ಷಗಳಲ್ಲಿ ಈ ನಾಗರಿಕತೆಯನ್ನು ನಿರ್ಮಿಸುವಲ್ಲಿ ರಾಮನ ಕಾಲ, ಒಂದು ರೀತಿಯ ಆಧಾರ ಸ್ತಂಭವಾಗಿದೆ.

    ಇಪ್ಪತ್ತನೇ ಶತಮಾನದ ಆರಂಭದಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟ ನಡೆಯುತ್ತಿದ್ದಾಗಲೂ, ಮಹಾತ್ಮ ಗಾಂಧಿಯವರು ರಾಮರಾಜ್ಯವನ್ನು ಸ್ಥಾಪಿಸುವ ಬಗ್ಗೆ ಮಾತನಾಡುತ್ತಿದ್ದರು. ಅಂದರೆ ಜಾತಿ, ಮತ, ಬಣ, ಅಥವಾ ಇನ್ಯಾವುದೇ ಭೇದವಿಲ್ಲದೇ ಎಲ್ಲರೂ ಸಮಾನರಾಗಿ ಬದುಕುವ ಮತ್ತು ಎಲ್ಲರಿಗೂ ಸಮಾನ ಅವಕಾಶವಿರುವ ರಾಜ್ಯ. ಈಗಲೂ, ಸ್ಥಳೀಯ ಭಾಷೆಗಳಲ್ಲಿ ಯಾರಾದರು “ಆದರ್ಶ ರಾಷ್ಟ್ರ” ಎಂದು ಹೇಳಬೇಕೆಂದರೆ, ಅವರು “ರಾಮರಾಜ್ಯ” ಎಂದು ಹೇಳುತ್ತಾರೆ.

    ಆದರೆ ಇತ್ತೀಚಿನ ದಿನಗಳಲ್ಲಿ ಕೆಲವರಿಂದ ರಾಮನು ಪುರುಷ-ಮೇಲರಿಮೆ ಹೊಂದಿದ್ದವನು ಎಂಬ ವಾದಗಳಿವೆ, ಅವನು ತನ್ನ ಹೆಮ್ಮೆ ಅಥವಾ ಅಭದ್ರತೆಯ ಕಾರಣದಿಂದ ತನ್ನ ಹೆಂಡತಿಯನ್ನು ಕಾಡಿಗೆ ಕಳುಹಿಸಿದ ಎಂದು ಮಾತನಾಡುತ್ತಾರೆ. ಯೂತ್‌ ಆಂಡ್ ಟ್ರುತ್ ಅಭಿಯಾನದ ಸಮಯದಲ್ಲಿ, ದೇಶದ ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲಿ ಒಬ್ಬ ಯುವಕ ನನಗೆ, “ರಾಮನು ತನ್ನ ಹೆಂಡತಿಯನ್ನು ನಡೆಸಿಕೊಂಡ ರೀತಿ, ಅವನು ಅವಳನ್ನು ಶ್ರೀಲಂಕಾದಿಂದ ಮರಳಿ ಕರೆತಂದ ನಂತರ ಅವಳನ್ನು ಪುನಃ ಕಾಡಿಗೆ ಕಳುಹಿಸಿದ, ಸ್ವಲ್ಪ ಸಮಯದವರೆಗೆ ಅವಳು ಬೇರೆಡೆ ಇದ್ದುದರ ಕಾರಣ ಅವನು ಅದರ ಬಗ್ಗೆ ಅಸುರಕ್ಷಿತನಾಗಿದ್ದ.” ಎಂದು ಹೇಳಿದ. ಅದಕ್ಕೆ ನಾನು, “ನೋಡಿ, ರಾಮನಿಗೆ ಮನೋವೈದ್ಯನಾಗಲು ನೀವು ಖಂಡಿತವಾಗಿಯೂ ಸಮರ್ಥರಲ್ಲ. ಮತ್ತು 6000 ವರ್ಷಗಳ ನಂತರ ನೀವು ಈ ರೀತಿ ತೀರ್ಮಾನಗಳನ್ನು ಮಾಡಬೇಡಿ.” ಎಂದು ಹೇಳಿದೆ.

    ಅವನೊಬ್ಬ ಸಾಮಾನ್ಯ ವ್ಯಕ್ತಿಯಾಗಿದ್ದರೆ, ಅವನು ತನ್ನ ಹೆಂಡತಿಯನ್ನು ನಡೆಸಿಕೊಂಡ ರೀತಿಯನ್ನು ನೀವು ಪ್ರಶ್ನಿಸಬಹುದಾಗಿತ್ತು, ಆದರೆ ಅವನು ರಾಜನಾಗಿದ್ದವನು. ರಾಮನಿಗೆ ಅವನ ಪ್ರಜೆಗಳು ಅತ್ಯಂತ ಮುಖ್ಯವಾಗಿದ್ದರು. ಮತ್ತು ಅವನು ಆ ನೆಲದ ಧರ್ಮವನ್ನು ಸ್ಥಾಪಿಸಲು ಪ್ರಯತ್ನಿಸುತ್ತಿದ್ದ ಕಾಲದಲ್ಲಿ ಜೀವಿಸಿದ್ದ. ಮೂಲಭೂತವಾಗಿ ಅವನು ಅದನ್ನು ಕಾನೂನನ್ನು-ಪಾಲಿಸುವ ಪ್ರಜೆಗಳ ನಾಡನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದ. ಕಥೆಯಲ್ಲಿ ಧೋಬಿಯೊಬ್ಬ ಪ್ರಶ್ನೆಗಳನ್ನು ಕೇಳುತ್ತಿದ್ದ ಎಂದು ಹೇಳಲಾಗುತ್ತದೆ, “ನಿಮ್ಮ ಹೆಂಡತಿ ಎಲ್ಲೋ ಇದ್ದಳು, ಅವಳ ಹೊಟ್ಟೆಯಲ್ಲಿರುವ ಮಕ್ಕಳು ನಿನ್ನದೇ ಎಂದು ನಾವು ಹೇಗೆ ನಂಬುವುದು? ಅವಳು ಯಾವ ರೀತಿಯ ರಾಜ ಮಾತೆ?” ಎಂದೆಲ್ಲ. ಇದು ಕೇವಲ ಧೋಬಿಯ ಬಗ್ಗೆ ಅಲ್ಲ, ಅವರು “ಧೋಬಿ” ಎಂದು ಹೇಳಿದಾಗ, ಅದು ಸಾಮಾನ್ಯ ಜನರು ಹೀಗೆ ಮಾತನಾಡುತ್ತಿದ್ದರು ಎಂದರ್ಥ.

    Ayodhya

    ಇದನ್ನೂ ಓದಿ: ಮಥುರಾದಲ್ಲಿ ಮಂದಿರ ನಿರ್ಮಾಣವಾಗುವವರೆಗೂ ಒಂದೇ ಹೊತ್ತು ಊಟ: ವಿಭಿನ್ನ ಘೋಷಣೆ ಮಾಡಿದ ಸಚಿವ

    ರಾಜನು ಒಂದು ವೇಳೆ, “ನೀವು ಏನು ಬೇಕಾದರೂ ಯೋಚಿಸಿ ನಾನದಕ್ಕೆ ತಲೆ ಕೆಡೆಸಿಕೊಳ್ಳುವುದಿಲ್ಲ, ನಾನು ನನ್ನ ಹೆಂಡತಿಯನ್ನು ಪ್ರೀತಿಸುತ್ತೇನೆ” ಎಂದು ಹೇಳಿದ್ದರೆ ಮತ್ತು ಅವಳನ್ನು ತನ್ನಲ್ಲೇ ಇಟ್ಟುಕೊಂಡಿದ್ದರೆ, ಅವನು ಒಳ್ಳೆಯ ರಾಜನೆಂದು ಪರಿಗಣಿಸಲ್ಪಡುವುದಿಲ್ಲ. ಸೀತೆ ಅವನಿಗೆ ಕೇವಲ ಇನ್ನೊಂದು ಹೆಣ್ಣಾಗಿರಲಿಲ್ಲ. ಅವನು 3000 ಕಿಲೋಮೀಟರ್ ಕಾಲ್ನಡಿಗೆಯಲ್ಲಿ ಸಾಗಿ ಅವಳಿಗಾಗಿ ಯುದ್ಧ ಮಾಡಿದ. ಅವನು ಅವಳಿಗಾಗಿ ಬದುಕುತ್ತಿದ್ದ, ಆದರೆ ಅವಳು ಗರ್ಭಿಣಿಯಾಗಿದ್ದಾಗ ಅವಳನ್ನು ಮರಳಿ ಕಾಡಿಗೆ ಕಳುಹಿಸಿದ. ಯಾವುದೇ ಗಂಡನಿಗೆ ತನ್ನ ಮಗು ಒಂದು ದೊಡ್ಡ ವಿಷಯ, ಆದರೆ ವಿಶೇಷವಾಗಿ ರಾಜನಿಗೆ ಅದು ಅತ್ಯಂತ ಮುಖ್ಯ. ಇದರ ಹೊರತಾಗಿಯೂ, ಅವನು ತನ್ನ ವೈಯಕ್ತಿಕ ಪ್ರೀತಿಗಿಂತ ಆ ಸಮಯದಲ್ಲಿ ಜನರ ಯೋಗಕ್ಷೇಮ ಮತ್ತು ರಾಷ್ಟ್ರದ ಕಾನೂನನ್ನು ಎಲ್ಲದರ ಮೇಲಿರಿಸಿದ.

    ತಮ್ಮ ರಾಷ್ಟ್ರದ ಪ್ರಜೆಗಳನ್ನು, ತಮ್ಮ ಕುಟುಂಬ ಮತ್ತು ವೈಯಕ್ತಿಕ ಅಭಿಮಾನಕ್ಕಿಂತ ಮೇಲಿರಿಸುವ ನಾಯಕರು ನಿಮಗೆ ಬೇಕೇ ಅಥವಾ “ಅದೇನೇ ಆಗಲಿ ನನ್ನ ಮಗ” ಎನ್ನುವ ಧೃತರಾಷ್ಟ್ರ ಬೇಕೇ? ಈ ಸಂದರ್ಭದಲ್ಲಿ ರಾಮ ಜಗತ್ತಿಗೆ ಭವಿಷ್ಯದ ನಾಯಕನಾಗಬೇಕು. ನಮಗೆ ಅವರ ರಕ್ತಸಂಬಂಧ, ಅವರ ವೈಯಕ್ತಿಕ ಇಷ್ಟಾನಿಷ್ಟಗಳು ಮತ್ತು ಅವರ ವೈಯಕ್ತಿಕ ನೋವು ನಲಿವುಗಳು ಮತ್ತು ಸಮಸ್ಯೆಗಳನ್ನು ಮೀರಿ ಯೋಚಿಸುವ ಮತ್ತು ಜನರಿಗೆ ಯಾವುದು ಉತ್ತಮ ಎಂದು ನೋಡುವ ಜನರು ಬೇಕು. ಈ ತ್ಯಾಗದ ಮನೋಭಾವನೆಯನ್ನೇ ರಾಮ ಮತ್ತು ಈ ಸಂಸ್ಕೃತಿ ಎತ್ತಿಹಿಡಿಯುತ್ತದೆ. ನಮ್ಮ ಜೀವ ನಮ್ಮ ವೈಯಕ್ತಿಕ ಜೀವನಕ್ಕಿಂತ ನಮ್ಮ ಸುತ್ತಲಿರುವ ಎಲ್ಲದಕ್ಕಾಗಿ ಮಿಡಿಯುತ್ತದೆ. ನಾವು ಗೌರವಿಸುವ ಏಕೈಕ ವಿಷಯ ಇದೊಂದೇ.

    ಸನಾತನ ಧರ್ಮ ಅಥವಾ ಹಿಂದೂ ಜೀವನ ಪದ್ದತಿಯಲ್ಲಿ, ’ಮುಕ್ತ’ರಾಗುವುದೊಂದೇ ಮುಖ್ಯವಾದ ಏಕೈಕ ವಿಷಯ – ಅದನ್ನು ಮುಕ್ತಿ, ಮೋಕ್ಷ, ನಿರ್ವಾಣ, ಯಾವ ಹೆಸರಿನಿಂದಾದರೂ ಕರೆಯಿರಿ, ಮೂಲಭೂತವಾಗಿ ನೀವು ಮುಕ್ತರಾಗಬೇಕು. ಆದ್ದರಿಂದ ನಾವು ಮುಕ್ತನಾದ ಮನುಷ್ಯನನ್ನು ಕಂಡಾಗ, ಅವನನ್ನು ಆರಾಧಿಸುತ್ತೇವೆ. ರಾಮ ಮಾತ್ರವಲ್ಲ – ಅನೇಕರನ್ನು ನಾವು ಕಾಣಬಹುದು – ಆದರೆ ಇಂತಹ ರಾಜ ಅತ್ಯಂತ ಅಪರೂಪದ ವಿಷಯ. ಬೆಟ್ಟದ ಮೇಲೆ ಕುಳಿತಿರುವ ಋಷಿ, ಸಾರ್ವಜನಿಕರಿಗೆ ಲಭ್ಯವಿರುವುದಿಲ್ಲ ಮತ್ತು ಅವರು ಹೆಚ್ಚಾಗಿ ತಮ್ಮನ್ನು ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಅವರು ಅದ್ಭುತ ವ್ಯಕ್ತಿಗಳು, ಆದರೆ ಒಬ್ಬ ರಾಜ ಪ್ರತಿದಿನ ಅನೇಕ ರೀತಿಯ ಅಸಂಬದ್ಧಗಳನ್ನು ನಿಭಾಯಿಸುವುದು, ಯುದ್ಧಗಳನ್ನು ಮಾಡುವುದು, ಆಡಳಿತವನ್ನು ನಿರ್ವಹಿಸುವುದು ಮತ್ತು ರಾಜಕೀಯ ಮಾಡುವುದು, ಆದರೂ ಅವನು ಎಲ್ಲದರಿಂದ ಸಂಪೂರ್ಣವಾಗಿ ಮುಕ್ತನಾಗಿದ್ದಾನೆ. ಇದೊಂದು ಅದ್ಭುತವಾದ ಸ್ಫೂರ್ತಿಯಾಗಿದೆ.

    ಅದಕ್ಕಾಗಿಯೇ ನಾವು ಅವನನ್ನು “ಮರ್ಯಾದಾ ಪುರುಷೋತ್ತಮ” ಎಂದು ಕರೆಯುತ್ತೇವೆ, ಅಂದರೆ ಎಲ್ಲರ ಗೌರವಕ್ಕೆ ಅರ್ಹನಾದ ಮನುಷ್ಯ ಎಂದರ್ಥ, ಏಕೆಂದರೆ ಅವನು ಆ ಹಂತಕ್ಕೆ‌ ಏರಿದವನು. ಅವನು ಮನುಷ್ಯನಾಗಿ ಜನಿಸಿದ, ಮತ್ತು ಜೀವನದಲ್ಲಿ ಎಷ್ಟೊಂದು ಕಷ್ಟಗಳ ಮೂಲಕ ಸಾಗಿ ಬಂದ – ಇತರರಿಗಿಂತ ಹೆಚ್ಚು ಕಷ್ಟಗಳು, ಆದರೆ ಅವನು ಅವೆಲ್ಲವನ್ನೂ ಮೀರಿ ಮೇಲೇರಿದ. ಅವನೊಬ್ಬ ಋಷಿಯಂತೆ, ಆದರೂ ಸಿಂಹಾಸನದ ಮೇಲೆ ಕುಳಿತು ರಾಷ್ಟ್ರವನ್ನು ನಡೆಸಿದ. ಅದಕ್ಕೇ ಎಲ್ಲೆಲ್ಲೂ ಅವನಿಗೆ ತಲೆಬಾಗುವುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts