More

    ಮಥುರಾದಲ್ಲಿ ಕೃಷ್ಣನ ಮಂದಿರ ನಿರ್ಮಾಣವಾಗುವವರೆಗೂ ಒಂದೇ ಹೊತ್ತು ಊಟ: ವಿಭಿನ್ನ ಘೋಷಣೆ ಮಾಡಿದ ಸಚಿವ

    ಜೈಪುರ:  ಕೋಟ್ಯಂತರ ಜನರು ಕಾತುರದಿಂದ ಕಾಯುತ್ತಿದ್ದ ದಿನ ಇಂದು (ಜನವರಿ 22) ನೆರವೇರಿದ್ದು, ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮ ಸಂಪನ್ನಗೊಂಡಿದೆ. ರಾಮಮಂದಿರದ ಬಳಿಕ ಇದೀಗ ಶ್ರೀಕೃಷ್ಣನ ಜನ್ಮಸ್ಥಳವಾದ ಮಥುರಾದಲ್ಲಿ ಭವ್ಯವಾದ ನಿರ್ಮಾಣ ಮಾಡಬೇಕೆಂಬ ಆಗ್ರಹ ಕೇಳಿಬರುತ್ತಿದ್ದು, ಇದು ಈಡೇರುವವರೆಗೂ ಒಂದು ಹೊತ್ತು ಊಟ ಮಾಡುವುದಾಗಿ ರಾಜಸ್ಥಾನದ ಸಚಿವರೊಬ್ಬರು ಘೋಷಿಸಿದ್ದಾರೆ.

    ರಾಜಸ್ಥಾನದ ಕೋಟಾದಲ್ಲಿರುವ ರಾಮ್​ಗಂಜ್​ನಲ್ಲಿ ಶಿಕ್ಷಣ ಸಚಿವ ಮದನ್​​ ದಿಲಾವರ್​ ಈ ಹೇಳಿಕೆ ನೀಡಿದ್ದು, ಪರ-ವಿರೋಧದ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದೆ. ಮುಂದಿನ ದಿನಗಳಲ್ಲಿ ಈ ವಿಚಾರ ರಾಷ್ಟ್ರ ರಾಜಕಾರಣದಲ್ಲಿ ಯಾವ ರೀತಿ ಪರಿಣಾಮ ಬೀರಲಿದೆ ಎಂದು ಕಾದು ನೋಡಬೇಕಿದೆ.

    ಇದನ್ನೂ ಓದಿ: ರಾಮಲಲ್ಲಾನ ಪ್ರಾಣಪ್ರತಿಷ್ಠಾನೆ; ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಪ್ರಮುಖ ತಾರೆಯರು

    ಕೃಷ್ಣನ ಜನ್ಮಸ್ಥಳದಲ್ಲಿ ಭವ್ಯ ಮಂದಿರ ನಿರ್ಮಾಣವಾಗುವವರೆಗೆ ನಾನು ಇಂದಿನಿಂದ ದಿನಕ್ಕೆ ಒಮ್ಮೆ ಮಾತ್ರ ಆಹಾರ ಸೇವಿಸುತ್ತೇನೆ. ಇಂದಿನಿಂದ ಆ ವ್ರತವನ್ನು ಆರಂಭಿಸುತ್ತಿದ್ದೇನೆ. 1992ರಲ್ಲಿ ರಾಮ ಜನ್ಮ ಭೂಮಿ ಹೋರಾಟದ ಸಂದರ್ಭ ತಮ್ಮ ಸಹವರ್ತಿಗಳ ಅಕ್ರಮ ಬಂಧನ ಮತ್ತು ಸುಳ್ಳು ಹತ್ಯೆ ಪ್ರಕರಣ ದಾಖಲು ಖಂಡಿಸಿ ನೂರಾರು ಕರಸೇವಕರು ಪ್ರತಿಭಟನೆ ನಡೆಸಿದ್ದನ್ನು ಮಾತನಾಡುವ ವೇಳೆ ಸ್ಮರಿಸಿದ್ದಾರೆ.

    6 ಬಾರಿ ಶಾಸಕ ಮತ್ತು 3 ಬಾರಿ ಸಚಿವರಾಗಿರುವ ದಿಲಾವರ್​, ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ 376 ಕಾಯ್ದೆ ಅಡಿಯ ಸ್ಥಾನಮಾನ ಹಿಂಪಡೆಯುವವರೆಗೂ ಹಾಸಿಗೆ ಮೇಲೆ ಮಲಗುವುದಿಲ್ಲ ಎಂದೂ ಅವರು ಫೆಬ್ರುವರಿ 1990ರಲ್ಲಿ ಪ್ರತಿಜ್ಞೆ ಮಾಡಿದ್ದರು. ಅಂದಿನಿಂದ ಅವರು ಚಾಪೆ ಮೇಲೇ ಮಲಗುತ್ತಿದ್ದರು ಎಂದು ಈ ಹಿಂದೆ ಸುದ್ದಿಯಾಗಿತ್ತು. ರಾಮಮಂದಿರ ನಿರ್ಮಾಣ ಆಗುವವರೆಗೂ ಹಾರಗಳನ್ನು ಸ್ವೀಕರಿಸುವುದಿಲ್ಲ ಎಂದು 1990ರಲ್ಲಿ ಹೇಳಿ ಸುದ್ದಿಯಾಗಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts