More

    ದೇಶದಲ್ಲಿ ರಾಮರಾಜ್ಯ ನಿರ್ಮಾಣವಾಗಲಿದೆ, ಎಲ್ಲರೂ ವಿವಾದಗಳನ್ನು ದೂರವಿಟ್ಟು ಒಗ್ಗಟ್ಟಾಗಿರಬೇಕು: ಮೋಹನ್​ ಭಾಗವತ್

    ಅಯೋಧ್ಯೆ: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ನಂತರ ದೇಶದಲ್ಲಿ ರಾಮರಾಜ್ಯ ನಿರ್ಮಾಣವಾಗಲಿದ್ದು, ಎಲ್ಲರೂ ವಿವಾದಗಳಿಂದ ದೂರ ಇರಬೇಕು ಎಂದು ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್​ ಭಾಗವತ್​ ಕರೆ ನೀಡಿದ್ದಾರೆ.

    ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ಬಳಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮೋಹನ್​ ಭಾಗವತ್​, ಪ್ರಧಾನಿ ಮಾಡಿದ ತಪಸ್ಸನ್ನು ನಾವೆಲ್ಲರೂ ಮಾಡಬೇಕಿದೆ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ‘ಜೈ ಶ್ರೀರಾಮ್’​ ಘೋಷಣೆ ಕೇಳುತ್ತಿದ್ದಂತೆ ತಾಳ್ಮೆ ಕಳೆದುಕೊಂಡ ರಾಹುಲ್​ ಗಾಂಧಿ; ವಿಡಿಯೋ ವೈರಲ್

    ದೇಶದಲ್ಲಿ ರಾಮರಾಜ್ಯ ನಿರ್ಮಾನವಾಗಲಿದ್ದು, ಪ್ರತಿಯೊಬ್ಬರೂ ವಿವಾದಗಳಿಂದ ದೂರವಿರಬೇಕು. ಪ್ರಧಾನಿ ಮೋದಿ ಅವರು ಮಾಡಿದ ತಪಸ್ಸನ್ನು ನಾವೆಲ್ಲರೂ ಮಾಡಬೇಕಿದೆ. ರಾಮಮಂದಿರದ ಉದ್ಘಾಟನೆಯೂ ನವಭಾರತದ ಸಂಕೇತವಾಗಿದ್ದು, ಇಡೀ ಜಗತ್ತಿಗೆ ದುರಂತದಿಂದ ಪರಿಹಾರವನ್ನು ನೀಡುತ್ತದೆ.

    ರಾಮಲಲ್ಲಾ 500 ವರ್ಷಗಳ ಬಳಿಕ ಮನೆಗೆ ಹಿಂತಿರುಗಿದ್ದು, ಇದು ಸ್ವಾಭಿಮಾನದ ಸಂಕೇತವಾಗಿದ್ದು, ಪ್ರಧಾನಿ ಮೋದಿ ಅವರು ಮಾಡಿದ ಸುದೀರ್ಘ ತಪಸ್ಸಿನಿಂದಾಗಿ ರಾಮ ಮನೆಗೆ ಮರಳಿದ್ದಾನೆ. ಎಲ್ಲೆಡೆ ರಾಮನಿದ್ದಾನೆ ಎಂದು ತಿಳಿದುಕೊಂಡು, ನಾವು ನಮ್ಮ ನಡುವೆ ಸಮನ್ವಯ ಸಾಧಿಸಬೇಕು, ಒಟ್ಟಿಗೆ ಇರುವುದೇ ಧರ್ಮದ ಮೊದಲ ನಿಜವಾದ ಆಚರಣೆ ಎಂದು ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್​ ಭಾಗವತ್​ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts