ಲ್ಯಾಂಡಿಂಗ್​ ವೇಳೆ ತಾಂತ್ರಿಕ ದೋಷ; ಸೇನಾ ವಿಮಾನ ಪತನ

Mizoram
Published on

ನವದೆಹಲಿ: ಮ್ಯಾನ್ಮಾರ್​ ಸೇನೆಗೆ ಸೇರಿದ ವಿಮಾನವೊಂದು ಮಿಜೋರಾಂನ ಲೆಂಗ್‌ಪುಯಿಯಲ್ಲಿ ಪತನಗೊಂಡು ಎಂಟು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆ ನಡೆದ ವೇಳೆ ವಿಮಾನದಲ್ಲಿ 8 ಮಂದಿ ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ. ಆರು ಮಂದಿ ಸುರಕ್ಷಿತವಾಗಿದ್ದು, ಗಾಯಾಳುಗಳನ್ನು ಲೆಂಗ್‌ಪುಯಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಮಿಜೋರಾಂ ಡಿಜಿಪಿ ಅನಿಲ್​ ಶುಕ್ಲಾ, ಲ್ಯಾಂಡಿಂಗ್​ ವೇಳೆ ತಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಮ ವಿಮಾನ ಪತನಗೊಂಡಿದೆ. ಘಟನೆ ನಡೆದ ವೇಳೆ 14 ಮಂದಿ ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ. ಘಟನೆಯಲ್ಲಿ 8 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, 6 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಭಾರತಕ್ಕೆ ಪಲಾಯನಗೈದಿದ್ದ ಮ್ಯಾನ್ಮಾರ್ ಸೈನಿಕರನ್ನು ಕರೆದುಕೊಂಡು ಹೋಗಲು ವಿಮಾನ ಬಂದಿತ್ತು ಎನ್ನಲಾಗಿದೆ. ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದ್ದು, ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮಿಜೋರಾಂ ಡಿಜಿಪಿ ಅನಿಲ್​ ಶುಕ್ಲಾ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net