ನವೆಂಬರ್​ನಲ್ಲೂ ಇಲ್ಲವೇ ಕನ್ನಡಾಭಿಮಾನ!?; ಕಸಾಪ ಚುನಾವಣೆ, ಮತದಾನ ಪ್ರಮಾಣ ಅರ್ಧಕ್ಕಿಂತ ಚೂರೇಚೂರು ಹೆಚ್ಚು...

KaSaPa Janamatha
Published on

ಬೆಂಗಳೂರು: ಇದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರ ಅಧಿಕಾರಾವಧಿ ಮೂರರಿಂದ ಐದು ವರ್ಷಗಳಿಗೆ ವಿಸ್ತರಣೆ ಆದ ಬಳಿಕ ನಡೆದ ಮೊದಲ ಚುನಾವಣೆ. ಅದರಲ್ಲೂ ಕಾಕತಾಳೀಯ ಎಂಬಂತೆ ಕನ್ನಡ ರಾಜ್ಯೋತ್ಸವ ಮಾಸವಾದ ನವೆಂಬರ್​ನಲ್ಲಿ ನಡೆದ ಮತದಾನ. ಆದರೆ ಈ ಸಲದ ಚುನಾವಣೆಯಲ್ಲಿ ಮತ ಚಲಾಯಿಸಿದ್ದು ಅರ್ಧಕ್ಕರ್ಧದಷ್ಟು ಮಂದಿ ಮಾತ್ರ!

ಅಂದರೆ ರಾಜ್ಯಾದ್ಯಂತ ಭಾನುವಾರ ನಡೆದ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ಈ ಸಲ ಒಟ್ಟು ಶೇ.52.09 ಮತದಾನವಾಗಿದೆ. 2012ರಲ್ಲಿ ಶೇ.59 ಮತದಾನವಾಗಿತ್ತು. ಈ ಪ್ರಮಾಣ 2016ರಲ್ಲಿ ಶೇ.57ಕ್ಕೆ ಕುಸಿದು ಇದೀಗ ಶೇ.52ಕ್ಕಿಳಿದಿದೆ. 2016ರಲ್ಲಿ ಒಟ್ಟು 1.89 ಲಕ್ಷ ಮತದಾರರಲ್ಲಿ 1.08 ಲಕ್ಷ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು. ಈ ಬಾರಿ 3.10 ಲಕ್ಷ ಮತದಾರರಲ್ಲಿ 1.59 ಲಕ್ಷ ಮತದಾರರು ಮತ ಚಲಾಯಿಸಿದ್ದಾರೆ.

ವರ್ಷದಲ್ಲಿ ಕನ್ನಡ ಕನ್ನಡ ಎಂದು ಎಲ್ಲರೂ ಅತಿ ಹೆಚ್ಚು ಸಂಭ್ರಮಿಸುವ ನವೆಂಬರ್ ತಿಂಗಳಲ್ಲೇ ಮತದಾನ ನಡೆದರೂ ಇಷ್ಟೊಂದು ಕಡಿಮೆ ಪ್ರಮಾಣದಲ್ಲಿ ಮತದಾನ ನಡೆದಿರುವುದು ಕನ್ನಡದ ಕುರಿತು ಅಷ್ಟೊಂದು ನಿರಾಸಕ್ತಿಯೇ ಎಂಬ ಅನುಮಾನ ಮೂಡುವಂತಾಗಿದೆ.  

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net