

ಲಖನೌ: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹಲವಾರು ವಿಡಿಯೋಗಳ ವೈರಲ್ ಆಗುತ್ತಿರುತ್ತವೆ. ಯಾವುದೇ ಘಟನೆಯಾದರೂ ಅದರ ವಿಡಿಯೋ ಕ್ಷಣಾರ್ಧದಲ್ಲಿ ವೈರಲ್ (Viral Video)ಆಗುತ್ತದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಹರಿದಾಡುತ್ತಿದ್ದು ಅದರಲ್ಲಿ ಊಟ ಮಾಡಲು ಹೋಟೆಲ್ಗೆ ಬಂದವರು ಜಗಳವಾಡುತ್ತಿದ್ದಾರೆ. ಈ ಘಟನೆ ನಡೆದಿರುವುದು ಉತ್ತರ ಪ್ರದೇಶದ ಬಿಜ್ನೋರ್‌ನಲ್ಲಿ ಎನ್ನಲಾಗಿದೆ.
ವೈರಲ್ ವಿಡಿಯೋದಲ್ಲಿ ವ್ಯಕ್ತಿ ತನ್ನ ಮೇಲೆ ದಾಳಿ ಮಾಡಿದ ವ್ಯಕ್ತಿಯ ಮೇಲೆ ಕಬ್ಬಿಣದ ಕುರ್ಚಿಯನ್ನು ಎಸೆಯಲು ಪ್ರಯತ್ನಿಸುವುದನ್ನು ನೋಡಬಹುದು. ಈ ವೀಡಿಯೊದ ಆರಂಭದಲ್ಲಿ ಇಬ್ಬರು ವ್ಯಕ್ತಿಗಳನ್ನು ಹೊಡೆಯುವುದನ್ನು ಕಾಣಬಹುದು. ಈ ವೇಳೆ ಅಲ್ಲಿ ನಿಂತಿದ್ದ ಇತರ ವ್ಯಕ್ತಿಗಳೂ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಬಳಿಕ ಆರಂಭದಲ್ಲಿ ಪೆಟ್ಟು ತಿಂದ ಹುಡುಗ ಎದುರಿರುವ ಮೇಲೆ ಹೊಡೆಯಲು ಪ್ರಾರಂಭಿಸುತ್ತಾನೆ. ಜಗಳಕ್ಕೆ ನಿಖರವಾದ ಕಾರಣ ಸ್ಪಷ್ಟವಾಗಿಲ್ಲ.
ಹೊಡೆದಾಟದಲ್ಲಿ ಹೋಟೆಲ್‌ನಿಂದ ಹೊರಬಂದ ನಂತರವೂ ಜನರು ನೆಲದ ಮೇಲೆ ಬೀಳುತ್ತಿರುವುದು ಕಂಡುಬಂದಿದೆ. ಪೊಲೀಸರು ಈ ವಿಷಯದಲ್ಲಿ ಕ್ರಮ ಕೈಗೊಂಡಿದ್ದಾರೆ ಎಂದರೆ ಸ್ಥಳೀಯ ಮಾಧ್ಯಮಗಳು ತಿಳಿಸಿವೆ. ಸುಮಾರು 43 ಸೆಕೆಂಡ್ಗಳಿರುವ ಈ ವಿಡಿಯೋವನ್ನು 18 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ದಾರೆ. ಜಗಳ ಮಾಡಲು ಏನೂ ಇಲ್ಲ, ಈ ಜನರು ನಿಷ್ಪ್ರಯೋಜಕರು, ಅಂಗಡಿಯವರಿಗೆ ಹಾನಿ ಮಾಡಿದ್ದಾರೆ, ಯಾರಾದರೂ ಅವರನ್ನು ತಡೆಯಿರಿ, ತಮ್ಮ ಜಗಳದಲ್ಲಿ ಈ ಜನರು ಹೋಟೆಲ್ ಅನ್ನು ನಾಶಪಡಿಸಿದರು ಎಂದು ಕಾಮೆಂಟ್ ಮಾಡಿದ್ದಾರೆ. (ಏಜೆನ್ಸೀಸ್)