‘ಸ್ತ್ರೀ 2’ ಹಾಡಿಗೆ ಪುಟ್ಟ ಪೋರಿಯ ಮಸ್ತ್​​​ ಸ್ಟೆಪ್ಸ್​​​; ಜೂ. ಶ್ರದ್ಧಾ ಕಪೂರ್​​ ಎಂದ ನೆಟ್ಟಿಗರು | Viral Video

Untitled-design-91
Published on

ರಾಜ್‌ಕುಮಾರ್ ರಾವ್ ಮತ್ತು ಶ್ರದ್ಧಾ ಕಪೂರ್ ಅಭಿನಯದ ‘ಸ್ತ್ರೀ 2’ ಸಿನಿಮಾ ಥಿಯೇಟರ್​ಗಳಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿದೆ. ಬಾಕ್ಸ್​​​​​​ ಆಫೀಸಲ್ಲೂ ಸಖತ್​ ಸೌಂಡ್​ ಮಾಡುತ್ತಿದೆ. ಇನ್ನು ಚಿತ್ರದ ‘ಆಜ್ ಕಿ ರಾತ್’ ಮತ್ತು ’ಆಯಿ ನಹಿ' ಸೂಪರ್​​​ ಹಿಟ್​​​ ಹಾಡುಗಳಿಗೆ ರೀಲ್ಸ್​ ಮಾಡುತ್ತಿರುವುದನ್ನು ನೋಡಬಹುದು. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್​(Viral Video) ಆಗುತ್ತಿದೆ.

ವೈರಲ್​ ವಿಡಿಯೋದಲ್ಲಿ ಚಿಕ್ಕ ಹುಡುಗಿಯೊಬ್ಬಳು 'ಆಯಿ ನಹಿ' ಹಾಡಿಗೆ ಡ್ಯಾನ್ಸ್​​ ಮಾಡುವುದನ್ನು ನೋಡಬಹುದು. ಈ ಹುಡುಗಿಯ ಡ್ಯಾನ್ಸ್​​ ವಿಡಿಯೋ ಜಾಲತಾಣಗಳಲ್ಲಿ ವೇಗವಾಗಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಹುಡುಗಿಯ ಸುತ್ತ ಆಕೆಯ ಡ್ಯಾನ್ಸ್​ ನೋಡುತ್ತಾ ನಿಂತಿರುವವರನ್ನು ಕಾಣುಬಹುದು. ಹಾಡು ಶುರುವಾದ ತಕ್ಷಣ ಆ ಹುಡುಗಿ ತುಂಬಾ ಬೋಲ್ಡ್ ಆಗಿ ಡ್ಯಾನ್ಸ್ ಮಾಡುತ್ತಾಳೆ. ಸುತ್ತ ನಿಂತಿದ್ದವರು ಚಪ್ಪಾಳೆ ತಟ್ಟುತ್ತಾ ಅವರ ಸಂತೋಷಕ್ಕೆ ಮಿತಿಯೇ ಇಲ್ಲ ಎಂಬಂತಿದೆ.

ವೈರಲ್​ ವಿಡಿಯೋ ಈವರೆಗೂ 2 ಲಕ್ಷಕ್ಕೂ ಹೆಚ್ಚು ಲೈಕ್ಸ್​​ ಅನ್ನು ಪಡೆದುಕೊಂಡಿದೆ. ಅಲ್ಲದೆ ವಿಡಿಯೋವನ್ನು 4 ಮಿಲಿಯನ್​​​​​​ಗೂ ಹೆಚ್ಚು ಮಂದಿ ವೀಕ್ಷಿಸಿದ್ದಾಋಎ. ಹಲವರು ಪ್ರತಿಕ್ರಿಯಿಸಿದ್ದಾರೆ. ಉಫ್...ಆಕೆಯ ಡ್ಯಾನ್ಸ್​ ನೋಡಿ, ದೇವರಿಂದ ಪ್ರತಿಭಾನ್ವಿತ ಪ್ರತಿಭೆಯನ್ನು ಪಡೆದಿದ್ದಾರೆ, ನೃತ್ಯ ಅದ್ಭುತವಾಗಿದೆ, ಬಾಬ್​​ ರೇ... ಈ ಹುಡುಗಿ ಏನು ನೃತ್ಯ ಮಾಡುತ್ತಾಳೆ, ಹುಡುಗಿ ಮಿನಿ ಶ್ರದ್ಧಾ ಕಪೂರ್‌ನಂತೆ ಕಾಣುತ್ತಿದ್ದಾಳೆ ಎಂದು ಕಾಮೆಂಟ್​ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net