ವೇಗವಾಗಿ ಬರುತ್ತಿದ್ದ ದ್ವಿಚಕ್ರವಾಹನದ ಎದುರು ನುಗ್ಗಿದ ಹಸು; ಮುಂದೇನಾಯ್ತು ನೀವೇ ನೋಡಿ | Viral Video

Untitled design - 2024-10-23T182919.347
Published on

ಚೆನ್ನೈ: ಪ್ರತಿದಿನ ಸಾಮಾಜಿಕ ಜಾಲತಾಣದಲ್ಲಿ ಹಲವು ವಿಡಿಯೋಗಳು ಹರಿದಾಡುತ್ತಿರುತ್ತವೆ. ಅದರಲ್ಲಿ ಕೆಲವು ಅಪರಾಧಕ್ಕೆ ಸಂಬಂಧಿಸಿದಂತೆ ವಿಡಿಯೋಗಳಿರಬಹುದು, ಇನ್ನೂ ಕೆಲವು ಅಪರಾಧಗಳಿಗೆ ಸಂಬಂಧಿಸಿದ ವಿಡಿಯೋಗಳು ಇರಬಹುದು. ಆದರೆ ಈ ವಿಡಿಯೋಗಳನ್ನು ನೋಡುವವರು ಒಳ್ಳೆಯದನ್ನು ಕಲಿಯಬಹುದು, ಕೆಟ್ಟದ್ದನ್ನು ಅನುಸರಿಸಬಹುದು. ಸದ್ಯ ನಾವಿಲ್ಲಿ ಅಪಘಾತದ ಕುರಿತು ಹೇಳುತ್ತಿದ್ದು, ಅದಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಹರಿದಾಡುತ್ತಿದೆ.(Viral Video).

ಅಪಘಾತದ ಸುದ್ದಿಗಳನ್ನು ನಾವು ನೋಡಿದಾಗ ಅದರಲ್ಲಿನ ಕೆಲವು ಅಂಶಗಳನ್ನು ಗಮನಿಸಿ ನಾವದನ್ನು ಮಾಡದಂತೆ ಎಚ್ಚರ ವಹಿಸಬೇಕು. ಈಗ ವೈರಲ್ ಆಗಿರುವ ವಿಡಿಯೋದಲ್ಲಿ ಒಂದು ಬದಿಯಿಂದ ಯುವತಿಯೊಬ್ಬರು ವೇಗವಾಗಿ ದ್ವಿಚಕ್ರ ವಾಹನವನ್ನು ಚಲಾಯಿಸುತ್ತಿರುವುದನ್ನು ನೋಡಬಹುದು. ಅದೇ ರಸ್ತೆಯ ಎರಡು ಬದಿಯಲ್ಲಿ ಹಸುಗಳಿರುವುದು ವಿಡಿಯೋದಲ್ಲಿ ತಿಳಿಯುತ್ತದೆ. ವೇಗವಾಗಿ ಬರುತ್ತಿದ್ದ ವಾಹನದ ಮುಂದೆ ಹಠತ್ತಾನೆ ಹೋಗಿ ಡಿಕ್ಕಿ ಹೊಡಯುತ್ತದೆ. ಹಸುವಿಗೆ ಏನು ಆಗುವುದಿಲ್ಲ ಬದಲಿಗೆ ದ್ವಿಚಕ್ರವಾಹನದಲ್ಲಿರುವ ಯುವತಿ ದೂರ ಹೋಗಿ ಬೀಳುವುದನ್ನು ನಾವು ನೋಡಬಹುದು.

ಯುವತಿ ವಾಹನದಿಂದ ಬಿದ್ದ ರಭಸ ನೋಡಿದರೆ ಆಕೆಗೆ ಎಷ್ಟರ ಮಟ್ಟಿಗೆ ಗಾಯಗಳಾಗಿರಬಹುದು ಎಂದು ಊಹಿಸಬಹುದು. ಈ ಘಟನೆಯು ಅಕ್ಟೋಬರ್ 22, 2024 ಅಂದರೆ ಮಂಗಳವಾರ ಬೆಳಗ್ಗೆ 9 ಗಂಟೆಗೆ ಸಂಭವಿಸಿದೆ. ತಿರುನಲ್ವೇಲಿ ಜಿಲ್ಲೆಯ ತಿರುಮಲ್ ನಗರದಲ್ಲಿ ಕಾಲೇಜು ವಿದ್ಯಾರ್ಥಿನಿ ಎಂದು ಸ್ಥಳಿಯ ಮಾಧ್ಯಮಗಳು ವರದಿ ಮಾಡಿವೆ.

ವಿಡಿಯೋ ವೈರಲ್​ ಆದಾಗಿನಿಂದ ಇದುವರೆಗೂ 26 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಹಲವರು ಪ್ರತಿಕ್ರಿಯಿಸಿದ್ದಾರೆ. ವಿಡಿಯೋ ನೋಡಿದ ನೆಟ್ಟಿಗರು ಜಾನುವಾರುಗಳ ಮುಂದೆ ಎಚ್ಚರಿಕೆಯಿಂದ ಚಾಲನೆ ಮಾಡಲು ಯುವಕರಿಗೆ ಸಲಹೆ ನೀಡುತ್ತಿದ್ದಾರೆ. ಕಾಲೇಜಿಗೆ ಹೋಗುವ ಅವಸರದಲ್ಲಿ ಈ ಅವಘಡ ಸಂಭವಿಸಿದೆ, ಯಾರೊ ಒಬ್ಬರು ಹಸುವನ್ನು ಓಡಿಸಲು ಪ್ರಯತ್ನಸಿದ್ದಾರೆ ಅದಕ್ಕಾಗಿಯೇ ಹಸು ವೇಗವಾಗಿ ಓಡಿ ಬಂದು ಸ್ಕೂಟರ್​​ಗೆ ಡಿಕ್ಕಿ ಹೊಡೆದಿದೆ, ರಸ್ತೆಯ ಎರಡೂ ಬದಿಗಳಲ್ಲಿ ಹಸುಗಳನ್ನು ನೋಡಿದ ನಂತರ ದ್ವಿಚಕ್ರ ವಾಹನ ಸವಾರರು ವೇಗವನ್ನು ಕಡಿಮೆ ಮಾಡಬೇಕು, ಅಪಾಯವನ್ನು ಬುದ್ಧಿವಂತಿಕೆಯಿಂದ ತಪ್ಪಿಸುವ ಅವಶ್ಯಕತೆಯಿದೆ, ಅಷ್ಟು ಚಿಕ್ಕ ರಸ್ತೆಗೆ ಈ ದ್ವಿಚಕ್ರ ವಾಹನದ ವೇಗ ಹೆಚ್ಚಾಗಿದೆ ಎಂದು ಕಾಮೆಂಟ್​ ಮಾಡಿದ್ದಾರೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net