
ದುಬೈ: ಒಂಟೆಯನ್ನು ಮರುಭೂಮಿಯ ಹಡಗು ಎಂದು ಕರೆಯುತ್ತಾರೆ ಎಂಬುದು ನಮಗೆ ಶಾಲಾದಿನಗಳಿಂದಲೇ ತಿಳಿದಿರುವ ವಿಷಯ. ಒಂಟೆ ವಿವಿಧ ಕಾರಣಗಳಿಂದಾಗಿ ಅತಿಯಾದ ತಾಪಮಾನದ ಪರಿಸ್ಥಿತಿಗೆ ಸುಲಭವಾಗಿ ಹೊಂದಿಕೊಳ್ಳುತ್ತದೆ. ಮರುಭೂಮಿಯಲ್ಲಿ ನಾವು ಒಂಟೆಯನ್ನು ಹೆಚ್ಚಾಗಿ ಕಾಣಬಹುದು. ಸದ್ಯ ಮರುಭೂಮಿಯಲ್ಲಿ ಸಿಕ್ಕಿಬಿದ್ದ ಮಹಿಳೆಯೊಬ್ಬರು ಉಬರ್ ಕ್ಯಾಬ್ ಮೂಲಕ ಒಂಟೆಯನ್ನು ಬುಕ್ ಮಾಡಿರುವ ತಮಾಷೆಯ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ(VIral Video).
ಇದನ್ನು ಓದಿ: ನನ್ನ ಮದುವೆಗೆ ರಜೆ ಕೊಡಿ; ಉದ್ಯೋಗಿ ಮನವಿ ತಿರಸ್ಕರಿಸಿದ CEO.. ಕಾರಣ ನೋಡಿ ನೆಟ್ಟಿಗರು ಕಿಡಿ | Wedding Leave
ವೈರಲ್ ವಿಡಿಯೋದಲ್ಲಿ ಮಹಿಳೆ ತನ್ನ ಫೋನ್ ಅನ್ನು ತೋರಿಸುತ್ತಾಳೆ. ಅದರಲ್ಲಿ ಅವರು ಉಬರ್ ಮೂಲಕ ಒಂಟೆ ಸವಾರಿಯನ್ನು ಬುಕ್ ಮಾಡಿದ್ದಾರೆ. ಈ ರೈಡ್‌ಗಾಗಿ ಮಹಿಳೆ ಯುಎಇ ದಿರ್ಹಮ್‌ನಲ್ಲಿ 50.61 ದಿರ್ಹಮ್‌ಗಳನ್ನು (ಸುಮಾರು 1158 ರೂ.) ಪಾವತಿಸಬೇಕಾಗುತ್ತದೆ. ಸುಮಾರು 20 ಸೆಕೆಂಡುಗಳ ನಂತರ ಒಂಟೆ ಮಹಿಳೆ ಬುಕ್ ಮಾಡಿದ ಸ್ಥಳಕ್ಕೆ ಬರುತ್ತದೆ. ಉಬರ್ ಮೂಲಕ ಬುಕ್ ಮಾಡಿರುವ ಒಂಟೆಯನ್ನು ನೋಡಿದ ಮಹಿಳೆ ನಂಬಲಾಗದೆ ನೋಡುತ್ತಿರುವುದನ್ನು ಕಾಣಬಹುದು.
ಆ ಮಹಿಳೆ ಶಾಕ್ ಜತೆಗೆ ಒಂಟೆಯನ್ನು ತಂದ ವ್ಯಕ್ತಿಯನ್ನು ಸಂತೋಷದಿಂದ ಸ್ವಾಗತಿಸುತ್ತಾರೆ. ಆ ವ್ಯಕ್ತಿಯನ್ನು ಮಹಿಳೆ ಪ್ರಶ್ನಿಸುತ್ತಾರೆ. ಅದಕ್ಕೆ ಉತ್ತರಿಸಿದ ಆತ ಉಬರ್ ರೈಡ್ಗಳನ್ನು ಮಾಡುತ್ತೇನೆ, ಮರುಭೂಮಿಯಲ್ಲಿ ಕಳೆದು ಹೋದ ಜನರನ್ನು ಅವರ ಪ್ರೀತಿಪಾತ್ರರ ಬಳಿಗೆ ಕರೆದೊಯ್ಯುತ್ತೇನೆ ಎಂದು ಹೇಳುವುದನ್ನು ನೋಡಬಹುದು. ಬಳಿಕ ಮಹಿಳೆ ಒಂಟೆಯ ಬೆನ್ನನ್ನು ಏರಿ ಹೋರಡುತ್ತಾರೆ.
ಸುಮಾರು 62 ಸೆಕೆಂಡುಗಳಿರುವ ಈ ಕ್ಲಿಪ್ ಅನ್ನು ಇಲ್ಲಿಯವರೆಗೆ 30 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. 98 ಸಾವಿರ ಮಂದಿ ಲೈಕ್ ಮಾಡಿದ್ದು, ಅನೇಕರು ಪ್ರತಿಕ್ರಿಯಿಸಿದ್ದಾರೆ. ಉಬರ್ ಒಂಟೆಗೆ ನಂಬರ್ ಪ್ಲೇಟ್ ಇದೆಯೇ, ನಿಮ್ಮ ಒಂಟೆ ಬಂದಾಗ ನಿಮಗೆ ‘ನಿಮ್ಮ ಒಂಟೆ ಬಂದಿದೆ’ ಎಂಬ ಸಂದೇಶ ಬಂದಿದೆಯೇ ಎಂದು ಕಾಮೆಂಟ್ ಮಾಡಿದ್ದಾರೆ.(ಏಜೆನ್ಸೀಸ್)