

Vijay Mallya: ಕಿಂಗ್ಫಿಶರ್ ಏರ್ಲೈನ್ಸ್ ಮಾಲೀಕನಾಗಿ ಮೆರೆದ ಉದ್ಯಮಿ ವಿಜಯ್ ಮಲ್ಯ, ಆರ್ಸಿಬಿ ಚೊಚ್ಚಲ ಟ್ರೋಫಿ ಗೆದ್ದ ಬೆನ್ನಲ್ಲೇ ಟ್ವೀಟ್ ಮಾಡಿ ಅಭಿನಂದಿಸಿದರು. ಸದ್ಯ ಭಾರತದಿಂದ ಹೊರಗಿರುವ ಮಲ್ಯ ಬಹಳ ವರ್ಷಗಳ ನಂತರ ಸಂದರ್ಶನವೊಂದರಲ್ಲಿ ಭಾಗಿಯಾಗಿ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.
2000ದ ದಶಕದಲ್ಲಿ, ಹೆಸರಾಂತ ಏರ್ಲೈನ್ಸ್ ಬ್ರ್ಯಾಂಡ್ನಿಂದಲೇ ಭಾರೀ ಖ್ಯಾತಿ ಮತ್ತು ಚರ್ಚೆಗೆ ಗ್ರಾಸವಾಗಿದ್ದ ವಿಜಯ್ ಮಲ್ಯ, ಕಿಂಗ್‌ಫಿಷರ್ ಕ್ಯಾಲೆಂಡರ್ ಅನ್ನು ಬಿಡುಗಡೆಗೊಳಿಸಿದ್ದರು. ಇದು 2003ರಲ್ಲಿ ಛಾಯಾಗ್ರಾಹಕ ಅತುಲ್ ಕಸ್ಬೇಕರ್ ಅವರೊಂದಿಗೆ ಬಿಡುಗಡೆಯಾದ ದಿಟ್ಟ ವಾರ್ಷಿಕ ಕ್ಯಾಲೆಂಡರ್ ಆಗಿತ್ತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಾಲೀಕತ್ವವನ್ನು ವಹಿಸಿಕೊಂಡಿದ್ದ ವಿಜಯ್ ಮಲ್ಯ, ಒಂದಷ್ಟು ಕ್ರಿಮಿನಲ್ ಪ್ರಕರಣಗಳಿಂದ ಜನಪ್ರಿಯತೆಯ ಅಮಲನ್ನು ತೊರೆದು ಸದ್ಯ ವಿದೇಶದಲ್ಲಿ ಕುಳಿತಿದ್ದಾರೆ. ಇದೀಗ ಆರ್ಸಿಬಿ ಚೊಚ್ಚಲ ಕಪ್ ಗೆದ್ದ ಬೆನ್ನಲ್ಲೇ ರಾಜ್ ಶಮಾನಿ ಅವರ ಪಾಡ್ಕಾಸ್ಟ್ನಲ್ಲಿ ಮಲ್ಯ ಮುಕ್ತವಾಗಿ ಮಾತನಾಡಿದ್ದಾರೆ.
"ಬಾಲಿವುಡ್ ನಟಿಯರಾದ ದೀಪಿಕಾ ಪಡುಕೋಣೆ, ಕತ್ರಿನಾ ಕೈಫ್‌ವರೆಗೆ ಎಲ್ಲರೂ ಅಂದು ನಮ್ಮ ಕಿಂಗ್ಫಿಶರ್ ಕ್ಯಾಲೆಂಡರ್‌ನ ಭಾಗವಾಗಿದ್ದರು. ಇವರೆಲ್ಲ ರಾತ್ರೋ ರಾತ್ರಿ ಸ್ಟಾರ್ ಆದರು. ಅದು ದೀಪಿಕಾ ಆಗಿರಲಿ ಅಥವಾ ಕತ್ರಿನಾ ಆಗಿರಲಿ, ನಾವು ಸರಿಯಾದ ಹಾಗೂ ಸೂಕ್ತ ಯುವತಿಯರನ್ನೇ ಆಯ್ಕೆ ಮಾಡಿದ್ದೀವಿ. ಒಳ್ಳೊಳ್ಳೆ ಯುವ ಪ್ರತಿಭೆಗಳನ್ನೇ ನಮ್ಮ ತಂಡದ ಭಾಗವಾಗಿ ಆಯ್ಕೆ ಮಾಡಿಕೊಂಡೆವು. ಬಹುತೇಕ ನಟಿಮಣಿಯರು ಮತ್ತು ಸ್ಟಾರ್ಗಳು ನಮ್ಮ ಕ್ಯಾಲೆಂಡರ್ನಲ್ಲಿ ಬಹಳ ಚಿಕ್ಕ ವಯಸ್ಸಿನಲ್ಲೇ ಭಾಗಿಯಾಗಿದ್ದರು. ಈ ಬ್ರ್ಯಾಂಡ್ ಒಂದು ದೊಡ್ಡದಾಗಿ ಬೆಳೆಯಿತು" ಎಂದು ಹೇಳಿದ್ದಾರೆ.
2003ರ ಮೊದಲ ಕಿಂಗ್ಫಿಶರ್ ಕ್ಯಾಲೆಂಡರ್ ಆವೃತ್ತಿಯಲ್ಲಿ ಕತ್ರಿನಾ ಕೈಫ್ ಕಾಣಿಸಿಕೊಂಡರೆ, 2006ರಲ್ಲಿ ದೀಪಿಕಾ ಪಡುಕೋಣೆ ಕಾಣಿಸಿಕೊಂಡರು. ಅದಾದ ನಂತರ ಇಬ್ಬರೂ ಬಾಲಿವುಡ್ ಸ್ಟಾರ್ ನಟಿಯರಾಗಿ ಗುರುತಿಸಿಕೊಂಡರು,(ಏಜೆನ್ಸೀಸ್).