

ಬಳ್ಳಾರಿ: ಇಂದು ಬಳ್ಳಾರಿಯ ವೀರಶೈವ ಸಮಾಜ ಸಮಾವೇಶದಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ನಿಮ್ಮ ಉತ್ಸಾಹ ನೋಡಿ ಸಂಘಟನೆ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಿದೆ. ಯಡಿಯೂರಪ್ಪ ಅವರ ಮೇಲಿಟ್ಟ ವಿಶ್ವಾಸದಂತೆ ನನ್ನ ಮೇಲೆ ವಿಶ್ವಾಸ ಇಟ್ಟುಕೊಳ್ಳಿ. ನಿಮ್ಮ ಮನೆಯ ಮಗ ಸಹೋದರನಾಗಿ ನಿಮ್ಮ ಜತೆಗೆ ಇರುತ್ತೇನೆ ಎಂದರು.
ಇದು ಎರಡು ಜಾತಿ ಮತ್ತು ಎರಡು ಪಕ್ಷದ ನಡುವಿನ ಚುನಾವಣೆ ಅಲ್ಲ, ದೇಶದ ಭವಿಷ್ಯದ ಚುನಾವಣೆ. ರಾಜ್ಯದ ಕಾಂಗ್ರೆಸ್ ಸರಕಾರ ಜನರಿಗೆ ಕಿವಿಗೆ ಹೂ ಮುಡಿಸಿದೆ. ಮೋದಿ ಅಕ್ಕಿಯನ್ನು ತಮ್ಮ ಫೋಟೋ ಹಾಕಿದ ಸಿದ್ದರಾಮಯ್ಯ, ಇದು ತಮ್ಮ ಅಕ್ಕಿ ಎಂದು ಬಿಂಬಿಸಿದ್ದಾರೆ. ಸಿದ್ದರಾಮಯ್ಯ ಸರಕಾರ ಎಲ್ಲಿಂದ ದುಡ್ಡು ತರುತ್ತಾರೆ ಎಂದು ಅಲೋಚಿಸಿ, ಪ್ರಧಾನ ಮಂತ್ರಿ ಕಿಸಾನ್ ಸನ್ಮಾನ್ ಯೋಜನೆ ಹಣ ಕಾಂಗ್ರೆಸ್ ಸರಕಾರ ಬಂದ್ ಮಾಡಿದೆ. ಈಗ ನೀವೇ ಯೋಚಿಸಿ ಎಂದರು.
ಬಿಜೆಪಿ ಅವಧಿಯಲ್ಲಿ ಜಾರಿಗೊಳಿಸಿದ ಯೋಜನೆಯನ್ನು ಕಾಂಗ್ರೆಸ್ ಹಿಂದಕ್ಕೆ ಪಡೆದಿದೆ ಎಂದು ಟೀಕಿಸಿದರು. ಕಾಂಗ್ರೆಸ್ ಸರಕಾರ ಹಗಲು ದರೋಡೆ ಮಾಡ್ತಿದೆ. ರಾಜ್ಯದ ಜನರು ಸರಕಾರಕ್ಕೆ ಶಾಪ ಹಾಕುತ್ತಿದ್ದಾರೆ. ಸಮಾಜದ ಮಧ್ಯೆ ವಿಷಬೀಜ ಬಿತ್ತುವ ಕೆಲಸ ಮಾಡ್ತಾರೆ. ಲಿಂಗಾಯತ ಸಮಾಜ ಹೊಡೆಯುವ ಕೆಲಸ ಮಾಡಿದರು. ಯಡಿಯೂರಪ್ಪ ರಾಜ್ಯಾಧ್ಯಕ್ಷರಾದಾಗ ಅಧಿಕಾರಕ್ಕೆ ಬರಲ್ಲ ಎಂದು ಸಮಾಜ ಒಡೆಯಲು ಮುಂದಾದರು ಎಂದರು.
ಅಧಿಕಾರಕ್ಕೆ ಬರಬೇಕೆಂದು ಸಮಾಜಗಳ ಮಧ್ಯೆ ವಿಷಬೀಜ ಬಿತ್ತುವ ಕೆಲಸ ಸಿದ್ದರಾಮಯ್ಯ ಮಾಡಿದರು. ಈ ರೀತಿ ಯಾವ ಸಿಎಂ ಸಹ ಮಾಡಿರಲಿಲ್ಲ. ಧರ್ಮ ಹೊಡೆಯಲು ಮುಂದಾಗಿರುವುದಕ್ಕೆ ಸ್ವತಃ ಡಿಕೆಶಿ ಕ್ಷಮೆಯಾಚಿಸಿದ್ರು. ನಮ್ಮ ರಾಜ್ಯದ 28 ಕ್ಷೇತ್ರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಗೆದ್ದು ದಾಖಲೆ ಮಾಡುವುದು ಖಚಿತ, ಕಾಂಗ್ರೆಸ್ ಸರಕಾರದಿಂದ ಅಭಿವೃದ್ಧಿ ಆಗಲು ಸಾಧ್ಯವಿಲ್ಲ, ಅಭಿವೃದ್ಧಿ ಶೂನ್ಯ ಸರಕಾರವಾಗಿದೆ ಎಂದು ಹೇಳಿದರು.