More

  ಆರ್‌ಸಿಬಿ ಸೋಲಿಗೆ ಅಸಲಿ ಕಾರಣ ಬಿಚ್ಚಿಟ್ಟ ಫಫ್: ಮ್ಯಾನೇಜ್​ಮೆಂಟ್ ಇನ್ನಾದರೂ ಎಚ್ಚೆತ್ತುಕೊಳ್ಳುತ್ತಾ?

  ಮುಂಬೈ: ಆರ್‌ಸಿಬಿ ಸೋಲಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಫ್ ಡುಪ್ಲೆಸಿ ನೇರಾ ಕಾರಣ ತಿಳಿಸಿದ್ದಾರೆ.

  ನಮ್ಮ ತಂಡದಲ್ಲಿ ಸಾಕಷ್ಟು ಬೌಲಿಂಗ್ ಅಸ್ತ್ರಗಳಿಲ್ಲ. ಹಾಗಾಗಿ, ನಮ್ಮ ಬ್ಯಾಟರ್‌ಗಳು ಹೆಚ್ಚು ರನ್ ಗಳಿಸಬೇಕು ಎಂದು ಫಫ್ ಡುಪ್ಲೆಸಿ ಹೇಳಿದ್ದಾರೆ.
  ಬೌಲಿಂಗ್ ವಿಭಾಗದ ದೌರ್ಬಲ್ಯವನ್ನು ಬ್ಯಾಟರ್‌ಗಳು ತುಂಬಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

  ಇದನ್ನೂ ಓದಿ: ಆರ್​ಸಿಬಿ ಬೌಲರ್​ಗಳ ಬೆಂಡೆತ್ತಿದ್ದ ಇಶಾನ್​-ಸೂರ್ಯಕುಮಾರ್​; ಮುಂಬೈಗೆ 7 ವಿಕೆಟ್​ಗಳ ಜಯ

  ‘ಬ್ಯಾಟಿಂಗ್‌ಗೆ ಸಂಬಂಧಿಸಿದಂತೆ ಹೇಳುವುದಾದರೆ, ನಾವು 200ಕ್ಕೂ ಹೆಚ್ಚು ರನ್ ಗಳಿಸಬೇಕಿದೆ. ನಮ್ಮ ಬೌಲಿಂಗ್ ವಿಭಾಗದಲ್ಲಿ ಹೆಚ್ಚು ಅಸ್ತ್ರಗಳಿಲ್ಲದ ಕಾರಣ ಅದರ ಒತ್ತಡ ಬ್ಯಾಟಿಂಗ್ ಮೇಲೆ ಬೀಳುತ್ತದೆ ಎಂದು ಹೇಳಿದರು.

  ಬೌಲಿಂಗ್ ವಿಭಾಗದ ಕುರಿತಂತೆ ಹೇಳುವುದಾದರೆ, ಆರಂಭದಲ್ಲಿ ವಿಕೆಟ್ ತೆಗೆಯಲು ನಮ್ಮಿಂದ ಸಾಧ್ಯವಾಗುತ್ತಿಲ್ಲ. ಪವರ್‌ಪ್ಲೇಯಲ್ಲಿ ನಾವು ಎರಡು ಅಥವಾ ಮೂರು ವಿಕೆಟ್ ಪಡೆಯಬೇಕು. ಮೊದಲ 4 ಓವರ್ಗಳಲ್ಲಿ ನಾವು ಬಹಳ ಹಿಂದೆ ಉಳಿಯುತ್ತಿದ್ದೇವೆ ಎಂದು ವಿವರಿಸಿದರು. .

  ‘ಈ ಸೋಲನ್ನು ಅರಗಿಸಿಕೊಳ್ಳುವುದು ತುಂಬಾ ಕಠಿಣವಾಗಿದೆ. ಟಾಸ್ ಗೆದ್ದಿದ್ದರೆ ಅದರ ವಿಷಯ ಬೇರೆ ಆಗಿರುತ್ತಿತ್ತು. ಮುಂಬೈ ಬ್ಯಾಟರ್‌ಗಳು ಆಕ್ರಮಕಾರಿ ಆಟದ ಮೂಲಕ ನಮ್ಮ ಬೌಲರ್​ಗಳು ಬಹಳಷ್ಟು ತಪ್ಪುಗಳನ್ನು ಮಾಡುವಂತೆ ನೋಡಿಕೊಂಡರು’ ಎಂದಿದ್ದಾರೆ.

  ನಮಗೆ 215-220 ರನ್ ಅಗತ್ಯವಿತ್ತು. 190 ಸಾಕಾಗಲಿಲ್ಲ. ಇಬ್ಬನಿಯು ಸಹ ಪಂದ್ಯದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ ಎಂದು ನಮಗೆ ತಿಳಿದಿತ್ತು. ಹಲವೆಡೆ ಒದ್ದೆಯಾದ ಮೈದಾನ ಪಂದ್ಯದ ಗತಿ ಬದಲಿಸಿದೆ. ನಾವು ಚೆಂಡನ್ನು ಹಲವು ಬಾರಿ ಬದಲಾಯಿಸಿದ್ದೇವೆ’ ಎಂದು ಅವರು ತಿಳಿಸಿದ್ದಾರೆ.

  ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದ ತಂಡ:
  ಇತ್ತ ಪಂದ್ಯದಿಂದ ಪಂದ್ಯಕ್ಕೆ ನಡೆಯುತ್ತಿರುವ ತಪ್ಪುಗಳು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿವೆ. ಹೀಗೇ ಮುಂದುವರೆದರೆ ಆರ್‌ಸಿಬಿ ಪ್ಲೇ ಆಫ್ ಹಂತ ತಲುಪುವುದು ಅಸಾಧ್ಯವೆನಿಸಲಿದೆ ಎಂದು ಫ್ಯಾನ್ಸ್​ ಕಿಡಿ ಕಾರುತ್ತಿದ್ದಾರೆ.

  ಪ್ರಸಕ್ತ ಪಂದ್ಯಾವಳಿಯಲ್ಲಿ ಆರ್‌ಸಿಬಿ ತಂಡ 11 ಬಲಿಷ್ಟ ಆಟಗಾರರನ್ನೇ ಕಣಕ್ಕಿಳಿಸಿಲ್ಲ. ನಿಜ ಹೇಳಬೇಕೆಂದರೆ ಉತ್ತಮ ತಂಡವೇ ಇಲ್ಲ. ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರನ್ನೇ ಇಡೀ ತಂಡ ನೆಚ್ಚಿಕೊಂಡಿದೆ. ಕೊಹ್ಲಿ ಆಡಿದರೆ ರನ್‌ಗಳು ಬರುತ್ತವೆ, ಇಲ್ಲದಿದ್ದರೆ ಕನಿಷ್ಠ 100ರ ಗಡಿ ಸಹ ತಲುಪುವುದಿಲ್ಲ. ಬಿಗ್ ಹಿಟ್ಟರ್‌ಗಳು ಎಂದು ಹೆಸರು ಗಳಿಸಿರುವ ಫಾಫ್ ಡು ಪ್ಲೆಸಿಸ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಈ ಬಾರಿಯ ಐಪಿಎಲ್‌ನಲ್ಲಿ ಕಳಪೆ ಬ್ಯಾಟಿಂಗ್ ಮಾಡುತ್ತಿದ್ದಾರೆ ಇದು ತಂಡದ ಸೋಲಿಗೆ ಪ್ರಮುಖ ಕಾರಣವಾಗಿದ್ದರೆ, ಬೌಲಿಂಗ್ ವಿಭಾಗವಂತೂ ಅತಿ ಕೆಟ್ಟದಾಗಿದೆ.

  ಆರ್‌ಸಿಬಿ ತಂಡದ ಅಭಿಮಾನಿಯಾಗಲಿ ಅಥವಾ ಕ್ರಿಕೆಟ್ ಪ್ರೇಮಿಯಾಗಲಿ ಆರ್‌ಸಿಬಿ ಯಾವೊಬ್ಬ ಬೌಲರ್ ಮೇಲೆ ನಂಬಿಕೆ ಇಡಲು ಸಾಧ್ಯವಾಗುತ್ತಿಲ್ಲ ಎಲ್ಲರೂ ದುಬಾರಿಯಾಗುತ್ತಿದ್ದಾರೆ ಮತ್ತು ವಿಕೆಟ್ ರಹಿತರಾಗುತ್ತಿದ್ದಾರೆ.

  ಆಡಿದ ಒಂದು ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ವಿಜಯ್‌ಕುಮಾ‌ರ್ ವೈಶಾಕ್‌ರನ್ನು ಆಡುವ 11ರ ಬಳಗಕ್ಕೆ ಸೇರಿಸಿಕೊಳ್ಳುತ್ತಿಲ್ಲ. 17.50 ಕೋಟಿ ರೂಪಾಯಿ ಕೊಟ್ಟು ಖರೀದಿಸಿರುವ ಆಲ್‌ರೌಂಡರ್ ಕ್ಯಾಮೆರಾನ್ ಗ್ರೀನ್ ಈವರೆಗೆ ಹೇಳಿಕೊಳ್ಳುವ ಆಟ ಆಡಿಲ್ಲ. ಇಂತಹ ಆಟಗಾರ ತಂಡಕ್ಕೆ ಬೇಕಿತ್ತಾ? ಎಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ. ಕ್ಯಾಮೆರಾನ್ ಗ್ರೀನ್‌ಗೆ ಕೊಡುವ ಮೊತ್ತದಲ್ಲಿ 3-4 ಭಾರತೀಯ ಆಟಗಾರರು ಸಿಗುತ್ತಿದ್ದರು ಎಂದು ಟೀಕಿಸುತ್ತಿದ್ದಾರೆ.

  ಮೊದಲೇ ಐಪಿಎಲ್ ಹರಾಜಿನಲ್ಲಿ ಪ್ರತಿಭಾವಂತ ಆಟಗಾರರನ್ನು ಬಿಟ್ಟು ದೊಡ್ಡ ಹೆಸರುಗಳಿಗೆ ಮಾತ್ರ ಗಾಳ ಹಾಕುವ ಆರ್‌ಸಿಬಿ, ಈ ಬಾರಿಯೂ ಫಾರ್ಮ್‌ ನಲ್ಲಿಲ್ಲದ ಆಟಗಾರರನ್ನು ಗುಡ್ಡೆ ಹಾಕಿಕೊಂಡಿದೆ.

  ‘ದೇಹ ತೋರಿಸುವುದು..?’ ಕಪ್ಪು ಕೋಟ್​ ಧರಿಸಿ ಶಾಕ್​ ನೀಡಿದ ಸಮಂತಾಗೆ ಅಭಿಮಾನಿಗಳು ಕೊಟ್ಟ ಉತ್ತರ..!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts