More

    ಆರ್​ಸಿಬಿ ಬೌಲರ್​ಗಳ ಬೆಂಡೆತ್ತಿದ್ದ ಇಶಾನ್​-ಸೂರ್ಯಕುಮಾರ್​; ಮುಂಬೈಗೆ 7 ವಿಕೆಟ್​ಗಳ ಜಯ

    ಮುಂಬೈ: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್​ ನಡುವಿನ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್​ ಪ್ರದರ್ಶನದ ಫಲವಾಗಿ ಹಾರ್ದಿಕ್​ ಪಾಂಡ್ಯ ಪಡೆ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಹಾಲಿ ಆವೃತ್ತಿಯಲ್ಲಿ ಆರ್​ಸಿಬಿ ತನ್ನ ಸೋಲಿನ ಸ್ಟ್ರೀಕ್​ಅನ್ನು ಮುಂದುವರೆಸಿದೆ.

    ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ ಆರ್​ಸಿಬಿ ಪರ ನಾಯಕ ಫಾಪ್​ ಡು ಪ್ಲೆಸಿಸ್​ (61 ರನ್, 40 ಎಸೆತ, 4 ಬೌಡಂರಿ, 3 ಸಿಕ್ಸರ್), ರಜತ್​ ಪಾಟಿದಾರ್​ (50 ರನ್, 26 ಎಸೆತ, 3 ಬೌಂಡರಿ, 4 ಸಿಕ್ಸರ್), ದಿನೇಶ್​ ಕಾರ್ತಿಕ್ (53 ರನ್, 23 ಎಸೆತ, 5 ಬೌಂಡರಿ, 4 ಸಿಕ್ಸರ್) ಅರ್ಧಶತಕಗಳ ಫಲವಾಗಿ 20 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 196 ರನ್​ ಪೇರಿಸಿತ್ತು.

    ಮುಂಬೈ ಪರ ಮೊಹಮ್ಮದ್​ ನಬಿ (1-0-7-0), ಗೆರಾಲ್ಡ್​ ಕೋಟ್​ಜೀ (4-0-42-1), ಜಸ್ಪ್ರೀತ್​ ಬುಮ್ರಾ (4-0-21-5), ಆಕಾಶ್​ ಮಧ್ವಾಲ್​ (4-0-57-1), ಶ್ರೇಯಸ್​ ಗೋಪಾಲ್​ (4-0-32-1), ರೊಮಾರಿಯೊ ಶೆಫರ್ಡ್​ (2-0-22-0), ಹಾರ್ದಿಕ್​ ಪಾಂಡ್ಯ (1-0-13-0) ರನ್​ ನೀಡಿ ವಿಕೆಟ್​ ಪಡೆದಿದ್ದಾರೆ.

    ಇದನ್ನೂ ಓದಿ: ಈದ್​ ಹಬ್ಬದಂದು ನೆಚ್ಚಿನ ನಟನನ್ನು ನೋಡಲು ಬಂದವರಿಗೆ ಲಾಠಿ ರುಚಿ ತೋರಿಸಿದ ಪೊಲೀಸರು; ವಿಡಿಯೋ ವೈರಲ್

    197 ರನ್​ ಗಳ ಗುರಿ ಬೆನ್ನತ್ತಿದ್ದ ಮುಂಬೈ ಇಂಡಿಯನ್ಸ್​ ತಂಡವು ಅರಂಭಿಕ ಇಶಾನ್​ ಕಿಶನ್​ (69 ರನ್, 34 ಎಸೆತ, 7 ಬೌಂಡರಿ, 5 ಸಿಕ್ಸರ್), ಸೂರ್ಯಕುಮಾರ್​ ಯಾದವ್​ (52 ರನ್, 19 ಎಸೆತ, 5 ಬೌಂಡರಿ, 4 ಸಿಕ್ಸರ್) ಸ್ಫೋಟಕ ಅರ್ಧಶತಕಗಳ ಫಲವಾಗಿ ಗುರಿಯನ್ನು 15.3 ಓವರ್​ಗಳಲ್ಲಿ 3 ವಿಕೆಟ್​ ನಷ್ಟಕ್ಕೆ 199 ರನ್​ ಗಳಿಸಿ ಗೆಲುವಿನ ನಗೆ ಬೀರಿತ್ತು.

    ಆರ್​ಸಿಬಿ ಪರ ರೀಸ್​ ಟಾಪ್ಲೆ (3-0-34-0), ಮೊಹಮ್ಮದ್​ ಸಿರಾಜ್​ (3-0-37-0), ಆಕಾಶ್​ ದೀಪ್​ (3.3-0-55-1), ಗ್ಲೆನ್​ ಮ್ಯಾಕ್ಸ್​ವೆಲ್​ (1-0-17-0), ವಿಜಯ್​ಕುಮಾರ್​ ವೈಶಾಕ್​ (3-0-32-1), ವಿಲ್​ ಜಾಕ್ಸ್​ (2-0-24-1) ರನ್​ ನೀಡಿ ವಿಕೆಟ್​ ಪಡೆದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts