More

    ಮುಂಬರುವ ಟಿ-20 ವಿಶ್ವಕಪ್​ನಿಂದ ವಿರಾಟ್​ ಕೊಹ್ಲಿಗೆ ಕೊಕ್​?; ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್​ ಹೇಳಿದ್ದಿಷ್ಟು

    ನವದೆಹಲಿ: ಜೂನ್​ 01ರಿಂದ ಯುಎಸ್​ಎ ಹಾಗೂ ವೆಸ್ಟ್​ ಇಂಡೀಸ್​ ಆತಿಥ್ಯದಲ್ಲಿ ನಡೆಯಲಿರುವ ಟಿ-20 ವಿಶ್ವಕಪ್​ ವೇಳಾಪಟ್ಟಿ ಈಗಾಗಲೇ ಪ್ರಕಟಗೊಂಡಿದ್ದು, ಟೀಮ್​ ಇಂಡಿಯಾ ತನ್ನ ಆಭಿಯಾನವನ್ನು ಜೂನ್​ 05ರಂದು ಐರ್ಲೆಂಡ್​ ವಿರುದ್ಧ ಆಡುವ ಮೂಲಕ ಆರಂಭಿಸಲಿದೆ. ಇನ್ನೂ ಈ ಮಧ್ಯೆ ಟೀಮ್​ ಇಂಡಿಯಾದ ಮಾಜಿ ನಾಯಕ, ರನ್​ಮಷಿನ್​ ಎಂದೇ ಖ್ಯಾತಿ ಪಡೆದಿರುವ ವಿರಾಟ್​ ಕೊಹ್ಲಿ ಅವರನ್ನು ಮುಂಬರುವ ಟಿ-20 ವಿಶ್ವಕಪ್​ಗೆ ಆಯ್ಕೆ ಮಾಡುವುದು ಬಹುತೇಕ ಡೌಟ್​ ಎಂದು ಹೇಳಲಾಗುತ್ತಿದೆ.

    ಕೆರಿಬಿಯನ್‌ನಲ್ಲಿನ ನಿಧಾನಗತಿಯ ಪಿಚ್ ಮತ್ತು ಪರಿಸ್ಥಿತಿಗೆ ಕೊಹ್ಲಿಯ ಬ್ಯಾಟಿಂಗ್ ವೇಗ ಸೂಕ್ತವಾಗುವುದಿಲ್ಲ ಎಂದು ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿಯ (BCCI) ಆಯ್ಕೆ ಸಮಿತಿ ಭಾವಿಸಿದ್ದು, ಈ ಕಾರಣಕ್ಕಾಗಿ ಅವರನ್ನು ತಂಡದಿಂದ ಕೈಬಿಡುವ ಸಾಧ್ಯತೆ ಹೆಚ್ಚಿದೆ ಎಂದು ತಿಳಿದು ಬಂದಿದೆ. ಇದರ ಜೊತೆಗೆ ಹೊಸಬರಿಗೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ವಿರಾಟ್​ ಕೊಹ್ಲಿ ಅವರನ್ನು ಆಯ್ಕೆ ಮಾಡುವುದು ಡೌಟ್​ ಎಂದು ಹೇಳಲಾಗಿದೆ.

    ಇದಕ್ಕೆಲ್ಲಾ ಉತ್ತರಿಸಿರುವ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್​​ ಅಗರ್ಕರ್​, ವಿರಾಟ್​ ಕೊಹ್ಲಿ ಕ್ರಿಕೆಟ್​ನಲ್ಲಿ ಕೆಲವು ಮಾನದಂಡಗಳನ್ನು ಸ್ಥಾಪಿಸಿದ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಕಳೆದ 15-20 ವರ್ಷಗಳಲ್ಲಿ ಆಟಗಾರರಲ್ಲಿ ನಾವು ಏನಾದರೂ ಸಮಸ್ಯೆ ಕಂಡಿದ್ದರೆ ಅದು ಫಿಟ್ಮೆಸ್​ ಸಮಸ್ಯೆ ಎಂದು ಹೇಳಬಹುದಾಗಿದೆ. ಆದರೆ, ಕೊಹ್ಲಿ ತಮ್ಮ 10-15 ವರ್ಷಗಳ ವೃತ್ತಿ ಜೀವನದಲ್ಲಿ ಫಿಟ್​ ಆಗಿದ್ದಾರೆ ಎಂಬುದಕ್ಕೆ ನೀವು ಫಲಿತಾಂಶಗಳನ್ನು ನೋಡಬಹುದಾಗಿದೆ ಎಂದು ಅಜಿತ್​ ಅಗರ್ಕರ್​ ಹೇಳಿದ್ದಾರೆ.

    Virat Rohit

    ಇದನ್ನೂ ಓದಿ: RSS ಗಣವೇಷದಲ್ಲೇ ಕಾಂಗ್ರೆಸ್​ ಸೇರ್ಪಡೆಯಾದ ಬಿಜೆಪಿ ನಾಯಕ

    17ನೇ ಆವೃತ್ತಿಯ ಐಪಿಎಲ್​ನಲ್ಲಿ 105ರ ಸರಾಸರಿಯಲ್ಲಿ 146 ಸ್ಟ್ರೈಕ್​ರೇಟ್​ನೊಂದಿಗೆ 316 ರನ್​ಗಳಿಸಿರುವ ವಿರಾಟ್​ ಕೊಹ್ಲಿ ಮುಂಬರುವ ಟಿ-20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವುದು ಖಚಿತವಾಗಿದೆ. ಉತ್ತಮ ಫಾರ್ಮ್​​ನಲ್ಲಿರುವ ಕೊಹ್ಲಿ ತಂಡದಲ್ಲಿ ಇರಲೇಬೇಕೆಂದು ರೋಹಿತ್ ಶರ್ಮಾ ಬಿಸಿಸಿಐ ಕಾರ್ಯದರ್ಶಿಗೆ ಹೇಳಿರುವುದಾಗಿ ವರದಿಯಾಗಿದೆ.

    ಮುಂಬರುವ ಟಿ20 ವಿಶ್ವಕಪ್​ಗೆ ವಿರಾಟ್ ಕೊಹ್ಲಿಯನ್ನು ಆಯ್ಕೆ ಮಾಡಲೇಬೇಕಾದ ಅನಿವಾರ್ಯತೆ ಬಿಸಿಸಿಐ ಎದುರಾಗಿದೆ. ಏಕೆಂದರೆ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿರುವ ಕೊಹ್ಲಿಯನ್ನು ಯಾವುದೇ ಕಾರಣದಿಂದಲೂ ತಂಡದಿಂದ ಕೈ ಬಿಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಅವರು ಟಿ20 ವಿಶ್ವಕಪ್​ಗೆ ಆಯ್ಕೆಯಾಗುವುದು ಖಚಿತ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts