More

    ಕೇಜ್ರಿವಾಲ್​ ಜೈಲಲ್ಲಿರುವಾಗಲೇ ಎಎಪಿಗೆ ಶಾಕ್; ಪಕ್ಷಕ್ಕೆ ರಾಜೀನಾಮೆ ನೀಡಿದ ಸಚಿವ

    ನವದೆಹಲಿ: ರಾಷ್ಟ್ರ ರಾಜಕಾರಣದ ಮಹತ್ವದ ಬೆಳವಣಿಗೆ ಒಂದರಲ್ಲಿ ದೆಹಲಿ ಸರ್ಕಾರದಲ್ಲಿ ಸಚಿವರಾಗಿ ಸೇವೆ ಸಲ್ಲಿಸುತ್ತಿರುವ ರಾಜ್​ಕುಮಾರ್​ ಆನಂದ್​ ಎಎಪಿಗೆ ರಾಜೀನಾಮೆ ನೀಡಿದ್ದಾರೆ.

    ಸಮಾಜ ಕಲ್ಯಾಣ ಸೇರಿದಂತೆ ವಿವಿಧ ಖಾತೆಗಳನ್ನು ಹೊಂದಿರುವ ರಾಜ್​ಕುಮಾರ್​ ಆನಂದ್, ಆಮ್​ ಆದ್ಮಿ ಪಕ್ಷದಲ್ಲಿ ದಲಿತರಿಗೆ ಸೂಕ್ತ ಪ್ರಾತಿನಿಧ್ಯ ಸಿಗದ ಕಾರಣ ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ. ರಾಜ್​ಕುಮಾರ್​ ಪಟೇಲ್​ ಪಟೇಲ್​ ನಗರ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದಾರೆ.

    ಇದನ್ನೂ ಓದಿ: ಏಕಾಏಕಿ ಬಾಲಕನ ಮೇಲೆ ಪಿಟ್​ಬುಲ್​ ದಾಳಿ; ಆದರೆ ಆತನನ್ನು ರಕ್ಷಿಸಿದ್ದು ಮಾತ್ರ…

    ಎಎಪಿಯಲ್ಲಿ ದಲಿತ ಶಾಸಕರು, ಕೌನ್ಸಿಲರ್‌ಗಳಿಗೆ ಯಾವುದೇ ರೀತಿಯ ಗೌರವ ಸಿಗುತ್ತಿಲ್ಲ. ಭ್ರಷ್ಟಾಚಾರದ ವಿರುದ್ಧ ಹೋರಾಡುವ ಬಲವಾದ ಸಂದೇಶವನ್ನು ನೋಡಿದ ನಂತರ ನಾನು ಎಎಪಿಗೆ ಸೇರಿದೆ. ಇಂದು ಪಕ್ಷವು ಭ್ರಷ್ಟಚಾರದಲ್ಲಿ ತೊಡಗಿದೆ. ಅದಕ್ಕಾಗಿಯೇ ನಾನು ಪಕ್ಷವನ್ನು ತ್ಯಜಿಸಲು ನಿರ್ಧರಿಸಿದ್ಧೇನೆ ಎಂದು ತಿಳಿಸಿದ್ದಾರೆ.

    ಅಬಕಾರಿ ನೀತಿ ಜಾರಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಎಪಿಯ ಹಿರಿಯ ನಾಯಕರಾದ ಅರವಿಂದ್​ ಕೇಜ್ರಿವಾಲ್​, ಮನೀಶ್​ ಸಿಸೋಡಿಯಾ ಸೇರಿದಂತೆ ಅನೇಕರು ಜೈಲು ಸೇರಿದ್ದು, ಈ ನಡುವೆ ಸಚಿವ ಸ್ಥಾನ ಹಾಗೂ ಪಕ್ಷಕ್ಕೆ ರಾಜ್​ಕುಮಾರ್​ ಆನಂದ್​ ಅವರ ರಾಜೀನಾಮೆ ಹಲವು ಅನುಮಾನಗಳಿಗೆ ಆಸ್ಪದ ಮಾಡಿಕೊಟ್ಟಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts