ಗಾಜಿಯಾಬಾದ್: ಪಿಟ್ಬುಲ್ ತಳಿಯ ನಾಯಿಗಳು ನೋಡಲು ಎಷ್ಟು ಮುದ ನೀಡುತ್ತವೋ ಅದೇ ರೀತಿ ಕೆಲವೊಮ್ಮೆ ತಮ್ಮ ಸಿಟ್ಟಿನಿಂದಲೂ ಸಹ ಹೆಚ್ಚು ಸದ್ದು ಮಾಡುತ್ತವೆ. ಇದೀಗ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಬಾಲಕನೋರ್ವನ ಮೇಲೆ ಪಿಟ್ಬುಲ್ ಥಳಿಯ ನಾಯಿಯೊಂದು ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಉತ್ತರಪ್ರದೇಶ ಗಾಜಿಯಾಬಾದ್ನಲ್ಲಿ ನಡೆದಿದೆ.
ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದರೆ, ವ್ಯಕ್ತಿಯ ರಕ್ಷಣೆಗೆ ಮನುಷ್ಯರ ಬದಲು ಬೀದಿನಾಯಿಗಳು ಧಾವಿಸಿದ್ದು ಈ ದೃಶ್ಯ ಎಲ್ಲರ ಮನಗೆದ್ದಿದೆ.
ಇದನ್ನೂ ಓದಿ: ಗೃಹಲಕ್ಷ್ಮೀ ಹಣದಿಂದ ಯುಗಾದಿ ದಿನವೇ ಫ್ರಿಡ್ಜ್ ಖರೀದಿಸಿದ ಮಹಿಳೆ
ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ಬಾಲಕ ಅಲ್ತಾಫ್ ಮೇಲೆ ಪಿಟ್ಬಯುಲ್ ನಾಯಿ ಏಕಾಏಕಿ ದಾಳಿ ಮಾಡುತ್ತದೆ. ಈ ವೇಳೆ ಅಲ್ಲೇ ಇದ್ದ ಜನರು ಅದನ್ನು ನೋಡಿಕೊಂಡು ಸುಮ್ಮನೇ ನಿಂತಿರುತ್ತಾರೆ. ಈ ವೇಳೆ ಮೇಲಿನಿಂದ ಇಬ್ಬರು ನೀರು ಎರಚಿದ್ದು, ಬಾಲಕ ಹೇಗೋ ತಪ್ಪಿಸಿಕೊಳ್ಳುತ್ತಾನೆ. ಈ ವೇಳೆ ಕೆಲ ಬೀದಿನಾಯಿಗಳು ಆತನ ರಕ್ಷಣೆಗೆ ಧಾವಿಸಿದ್ದುಮ ಬಾಲಕನನ್ನು ಅಪಾಯದಿಂದ ಪಾರು ಮಾಡುತ್ತವೆ.
ಇತ್ತ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಗಾಜಿಯಾಬಾದ್ ಪಾಲಿಕೆ ಕೂಡಲೇ ಪ್ರಕರಣ ದಾಖಲಿಸಿಕೊಂಡು ನಾಯಿಯನ್ನು ವಶಕ್ಕೆ ಪಡೆದಿದೆ. ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದು ಬಂದಿದೆ.