More

  ಸಾರ್ವಕಾಲಿಕ ದಾಖಲೆ ಬರೆದ ಪುಷ್ಪ-2 ಟೀಸರ್​; ಇದರ ಹಿಂದಿದೆ ಅಚ್ಚರಿ ವಿಷಯ

  ಹೈದರಾಬಾದ್: ಐಕಾನಿಕ್​ ಸ್ಟಾರ್​ ಅಲ್ಲು ಅರ್ಜುನ್​-ರಶ್ಮಿಕಾ ಮಂದಣ್ಣ ನಟನೆಯ, ಸುಕುಮಾರ್​ ನಿರ್ದೇಶನದ ಬಹು ನಿರೀಕ್ಷಿತ ಪುಷ್ಪ-2 ಚಿತ್ರದ ಬಗೆಗಿನ ನಿರೀಕ್ಷೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸುಕುಮಾರ್ ನಿರ್ದೇಶನದ ಈ ಪ್ಯಾನ್ ಇಂಡಿಯಾ ಚಿತ್ರದ ಟೀಸರ್​ ಸಾರ್ವಕಾಲಿಕ ದಾಖಲೆ ಒಂದನ್ನು ಬರೆದಿದೆ.

  ಟೀಸರ್​ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಮಂದಿ ವೀಕ್ಷಿಸಿದ್ದು, ಕೇವಲ 101 ನಿಮಿಷಗಳಲ್ಲಿ 500 ಸಾವಿರ ಲೈಕ್ಸ್ ಗಳಿಸುವ ಮೂಲಕ ಸಾರ್ವಕಾಲಿಕ ದಾಖಲೆ ನಿರ್ಮಿಸಿದೆ. ಇದಲ್ಲದೆ ಟೀಸರ್​ ಇದೀಗ 1 ಮಿಲಿಯನ್ ಲೈಕ್ಸ್ ಪಡೆದುಕೊಂಡಿದೆ. ಟೀಸರ್​ ಮೇಕಿಂಗ್​ ಕಂಡು ಫಿದಾ ಆಗಿರುವ ಅಭಿಮಾನಿಗಳು ಚಿತ್ರದ ಬಿಡುಗಡೆಗಾಗಿ ಕಾತುರದಿಂದ ಕಾಯುತ್ತಿದ್ದಾರೆ.

  Pushpa 2

  ಇದನ್ನೂ ಓದಿ: ಗೃಹಲಕ್ಷ್ಮೀ ಹಣದಿಂದ ಯುಗಾದಿ ದಿನವೇ ಫ್ರಿಡ್ಜ್​ ಖರೀದಿಸಿದ ಮಹಿಳೆ

  ಇದಲ್ಲದೆ ಚಿತ್ರದ ಕುರಿತಾದ ಒಂದು ಅಚ್ಚರಿ ವಿಚಾರ ಹೊರಬಿದ್ದಿದ್ದು, ಎಲ್ಲರ ಹುಬ್ಬೇರುವಂತೆ ಮಾಡಿದೆ. ಬಿಡುಗಡೆಯಾಗಿರುವ ಟೀಸರ್​ ​ಚಿತ್ರೀಕರಣದ ವೇಳೆ ಅಲ್ಲು ಅರ್ಜುನ್​ ಅವರು 50ಕ್ಕೂ ಹೆಚ್ಚು ಟೇಕ್​ ತೆಗೆದುಕೊಂಡಿದ್ದರು ಎಂಬ ವಿಚಾರ ಬಯಲಾಗಿದೆ. ಅನುಭವಿ ನಟರು ಸಾಮಾ್ಯವಾಗಿ ಒಂದೆರಡು ಟೇಕ್​ಗಳನ್ನು ತೆಗೆದುಕೊಳ್ಳುವುದನ್ನು ನೋಡಿದ್ದೇವೆ. ಅನುಭವಿ ನಟನಾಗಿದ್ದರು ಅಲ್ಲು ಅರ್ಜುನ್​ ಸಿನಿಮಾದ ಟೀಸರ್​ ಚಿತ್ರೀಕರಣದ ವೇಳೆ ಬರೋಬ್ಬರಿ 51 ಟೇಕ್​ ತೆಗೆದುಕೊಂಡಿದ್ದರು ಎಂದು ತಿಳಿದು ಬಂದಿದೆ.

  ಪುಷ್ಪ-2 ಚಿತ್ರೀಕರಣ ಭರದಿಂದ ಸಾಗಿದ್ದು, ಆಗಸ್ಟ್​ 15ರಂದು ಈ ಸಿನಿಮಾ ವಿಶ್ವದಾದ್ಯಂತ ತೆರೆ ಕಾಣಲಿದೆ. ಚಿತ್ರದಲ್ಲಿ ಅಲ್ಲು ಅರ್ಜುನ ಜೊತೆಗೆ ಸುನೀಲ್​, ಫಹಾದ್​ ಫಾಸಿಲ್​, ಡಾಲಿ ಧನಂಜಯ್​​, ಅನಸೂಯ ಭಾರಧ್ವಾಜ್​ ನಟಿಸುತ್ತಿದ್ದಾರೆ. ಚಿತ್ರಕ್ಕೆ ದೇವಿಶ್ರೀ ಪ್ರಸಾದ್​ ಸಂಗೀತ ಸಂಯೋಜಿಸುತ್ತಿದ್ದು, ಮೈತ್ರಿ ಮೂವಿ ಮೇಕರ್ಸ್​​ ಸಿನಿಮಾಗೆ ಬಂಡವಾಳ ಹೂಡಿದ್ಧಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts