More

  ಅರುಣಾಚಲಪ್ರದೇಶದಂತೆ ಚೀನಾದ ಕೆಲವು ಭಾಗಗಳನ್ನು ಭಾರತ ಮರುನಾಮಕರಣ ಮಾಡಿದರೆ ಏನಾಗುತ್ತದೆ: ರಾಜ್​ನಾಥ್​ ಸಿಂಗ್​

  ಅರುಣಾಚಲಪ್ರದೇಶ: ಇತ್ತೀಚಿನ ದಿನಗಳಲ್ಲಿ ಭಾರತದ ಭೂಪ್ರದೇಶವಾಗಿರುವ ಅರುಣಾಚಲಪ್ರದೇಶದ ಕೆಲವು ಭಾಗಗಳನ್ನು ಆಕ್ರಮಿಸಿಕೊಂಡು, ಮರುನಾಮಕಾರಣ ಮಾಡುವ ಮೂಲಕ ಚೀನಾ ಗಡಿ ವಿಚಾರವಾಗಿ ಪದೇ ಪದೇ ಕ್ಯಾತೆ ತೆಗೆಯುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಖಡಕ್​ ಆಗಿ ಉತ್ತರ ಕೊಟ್ಟಿದ್ದಾರೆ.

  ಅರುಣಾಚಲಪ್ರದೇಶದ ನಮ್ಸಾಯಿಯಲ್ಲಿ ಚುನಾವಣಾ ರ್‍ಯಾಲಿಯನ್ನು ಉದ್ಧೇಶಿಸಿ ಮಾತನಾಡಿದ ರಾಜನಾಥ್​ ಸಿಂಗ್​, ಒಂದು ವೇಳೆ ನಾವು ಚೀನಾದಲ್ಲಿರುವ ವಿವಿಧ ರಾಜ್ಯಗಳ ಹೆಸರನ್ನು ಬದಲಾಯಿಸಿದರೆ, ಅವು ಭಾರತಕ್ಕೆ ಸೇರಿದಂತಾಗುತ್ತದ. ಈ ರೀತಿಯ ಕೆಲಸಗಳನ್ನು ಮಾಡುವುದರಿಂದ ಭಾರತ ಹಾಗೂ ಚೀನಾ ನಡುವಿನ ಸಂಬಂಧ ಮತ್ತಷ್ಟು ಹದಗೆಡುತ್ತದೆ. ಅರುಣಾಚಲ ಪ್ರದೇಶದ 30 ಸ್ಥಳಗಳ ಹೆಸರನ್ನು ಬದಲಾಯಿಸುವ ಚೀನಾದ ಕ್ರಮವು ನೆಲದ ವಾಸ್ತವತೆಯನ್ನು ಬದಲಾಯಿಸುವುದಿಲ್ಲ ಎಂದು ಹೇಳಿದ್ದಾರೆ.

  ನಾವು ನಮ್ಮ ಎಲ್ಲಾ ನೆರೆಹೊರೆಯ ರಾಷ್ಟ್ರಗಲೊಂದಿಗೆ ಉತ್ತಮ ಸಂಬಂಧವನ್ನು ಹೊಂದಲು ಬಯಸುತ್ತೇವೆ. ಆದರೆ ಯಾರಾದರೂ ನಮ್ಮ ಆತ್ಮಗೌರವಕ್ಕೆ ಧಕ್ಕೆ ತರಲು ಪ್ರಯತ್ನಿಸಿದರೆ, ಭಾರತಕ್ಕೆ ತಕ್ಕ ಉತ್ತರವನ್ನು ನೀಡುವ ಸಾಮರ್ಥ್ಯವಿದೆ ಎಂಬುದನ್ನು ಮೊದಲು ಅವರು ನೆನಪಿಟ್ಟುಕೊಳ್ಳಬೇಕು. ಅರುಣಾಚಲ ಪ್ರದೇಶವು ಭಾರತದ ಅವಿಭಾಜ್ಯ ಅಂಗವಾಗಿದೆ ಎಂದು ರಕ್ಷಣಾ ಸಚಿವ ರಾಜ್​ನಾಥ್​ ಸಿಂಗ್​ ಪ್ರತಿಪಾದಿಸಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts