More

  ಚಾಲಕನ ನಿಯಂತ್ರಣ ತಪ್ಪಿ ಕಮರಿಗೆ ಉರುಳಿದ ವಾಹನ; 8 ಮಂದಿ ಸಾವು

  ನೈನಿತಾಲ್: ಚಾಲಕನ ನಿಯಂತ್ರಣ ತಪ್ಪಿ ವಾಹನವೊಂದು ಕಮರಿಗೆ ಉರುಳಿದ ಪರಿಣಾಮ ಎಂಟು ಮಂದಿ ಮೃತಪಟ್ಟಿರುವ ಘಟನೆ ಉತ್ತರಾಖಂಡದ  ನೈನಿತಾಲ್ ಜಿಲ್ಲೆಯಲ್ಲಿ ನಡೆದಿದೆ.

  ನೈನಿತಾಲ್‌ನ ಬೇಟಾಲ್‌ಘಾಟ್​ನಲ್ಲಿ ಈ ಘಟನೆ ನಡೆದಿದ್ದು, ವಾಹನವು ನೇಪಾಳದ ಕಡೆಗೆ ಹೋಗುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ ಇಬ್ಬರು ನೇಪಾಳಿ ಪ್ರಜೆಗಳು ಸೇರಿದಂತೆ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

  ಮೃತರನ್ನು ವಿಶ್ರಮ್ ಚೌಧರಿ (50), ಧೀರಜ್ (45), ಅನಂತರಾಮ್ ಚೌಧರಿ (40), ವಿನೋದ್ ಚೌಧರಿ (38), ಉದಯರಾಮ್ ಚೌಧರಿ (55), ತಿಲಕ್ ಚೌಧರಿ (45) ಗೋಪಾಲ್ ಬಸ್ನಿಯಾತ್ (60) ಮತ್ತು ರಾಜೇಂದ್ರ ಕುಮಾರ್ (38) ಎಂದು ಗುರುತಿಸಲಾಗಿದೆ.

  SDRF

  ಇದನ್ನೂ ಓದಿ: ನನ್ನ ಮಗ ಚುನಾವಣೆಯಲ್ಲಿ ಸೋಲಲಿ ಎಂದು ಶಾಪ ಹಾಕಿದ ಹಿರಿಯ ಕಾಂಗ್ರೆಸ್​ ನಾಯಕ; ಕಾರಣ ಹೀಗಿದೆ

  ಈ ಕುರಿತು ಪ್ರತಿಕ್ರಿಯಿಸಿರುವ ರಾಜ್ಯ ವಿಪತ್ತು ನಿರ್ವಹಣ ತಂಡದ ಹಿರಿಯ ಅಧಿಕಾರಿಯೊಬ್ಬರು, ಸೋಮವಾರ ರಾತ್ರಿ 10:30ರ ಸುಮಾರಿಗೆ ಬಸ್ಕೋಟ್ ಗ್ರಾಮದ ನಿವಾಸಿಯಾದ ಚಾಲಕ ರಾಜೇಂದ್ರ ಕುಮಾರ್ ವಾಹನ ಚಾಲನೆ ಮಾಡುತ್ತಿದ್ದ ವೇಳೆ ನಿಯಂತ್ರಣ ತಪ್ಪಿದ ಪರಿಣಾಮ 200 ಮೀಟರ್ ಆಳದ ಕಮರಿಗೆ ಗಾಡಿ ಉರುಳಿದೆ. ಮೃತರ ಪೈಕಿ ಕುಮಾರ್​ ಹೊರತುಪಡಿಸಿದರೆ ಉಳಿದವರು ನೇಪಾಳ ಮೂಲದವರು ಎಂದು ತಿಳಿದು ಬಂದಿದೆ.

  ಶಾಂತಿ ಚೌಧರಿ, ಛೋಟು ಚೌಧರಿ ಮತ್ತು ಪ್ರೇಮ್ ಬಹದ್ದೂರ್ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಎಂಟು ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಪೊಲೀಸರು ಸಲ್ಲಿಸುವ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ವಿಪತ್ತು ನಿರ್ವಹಣ ತಂಡದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

  See also  ಐಪಿಎಲ್​ ಆರಂಭಕ್ಕೂ ಮುನ್ನ ಟೀಮ್​ ಇಂಡಿಯಾ ಆಟಗಾರರ ನಡುವೆ ಶುರುವಾಯಿತು ಲೈಕ್​ ವಾರ್; ಕಾರಣ ಹೀಗಿದೆ​

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts