More

    ಎಂ.ಎಸ್. ಧೋನಿ ಪರ ಮೊಳಗಿದ ಜೈಕಾರ, ಕಿವಿ ಮುಚ್ಚಿಕೊಂಡ ರಸೆಲ್​; ವಿಡಿಯೋ ವೈರಲ್

    ಚೆನ್ನೈ: ಇಲ್ಲಿನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಕಲ್ಕತ್ತಾ ನೈಟ್​ರೈಡರ್ಸ್​ ವಿರುದ್ಧ ನಡೆದ ಪಂದ್ಯದಲ್ಲಿ ಸರ್ವಾಂಗೀಣ ಪ್ರದರ್ಶನದ ಫಲವಾಗಿ ಚೆನ್ನೈ ಸೂಪರ್​ಕಿಂಗ್ಸ್​ ತಂಡವು ಭರ್ಜರಿ ಜಯ ಸಾಧಿಸಿದೆ. ಎಂದಿನಂತೆ ಅಭಿಮಾನಿಗಳಿಂದ ಕಿಕ್ಕಿರಿದಿದ್ದ ಚೆಪಾಕ್​ ಅಂಗಳದಲ್ಲಿ ಎಂ.ಎಸ್.​ ಧೋನಿ ಬ್ಯಾಟಿಂಗ್​ಗೆ ಬರುವಾಗ ಚೆನ್ನೈ ತಂಡದ ಅಭಿಮಾನಿಗಳ ಹರ್ಷೋದ್ಘಾರ ಮುಗಿಲುಮುಟ್ಟಿತು ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

    ಕ್ರೀಡಾಂಗಣದಲ್ಲಿ ಧೋನಿ, ಧೋನಿ ಘೋಷಣೆಗಳ ಅಬ್ಬರ ಮುಗಿಲುಮುಟ್ಟುತ್ತಿದ್ದಂತೆ ಕೆಕೆಆರ್​ನ ಆಲ್ರೌಂಡರ್​ ಆಂಡ್ರೆ ರಸೆಲ್​ ಕಿವಿ ಮುಚ್ಚಿಕೊಳ್ಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಇದಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆ ನಡೆಯುತ್ತಿದ್ದು, ರಸೆಲ್​ ನಡೆಗೆ ಹಲವರು ಕಿಡಿಕಾರಿದ್ದಾರೆ.

    ಇದನ್ನೂ ಓದಿ: ಯುಗಾದಿ ಹಬ್ಬದಂದು ಹೆಣ್ಣು ಮಗುವಿನ ತಾಯಿಯಾದ ನಟಿ ಅದಿತಿ ಪ್ರಭುದೇವ

    ಶಿವಂ ದುಬೆ ಔಟಾದ ಬಳಿಕ ಜಡೇಜಾ ಮೈದಾನ ಪ್ರವೇಶಿಸುವಂತೆ ನಟಿಸಿ ಹಿಂದೆ ಬಂದ ನಂತರ ಎಂದಿನ ಗತ್ತಿನಲ್ಲಿ ಧೋನಿ ಕ್ರೀಸ್​​ನತ್ತ ತೆರಳಿದರು. ಇದೇ ವೇಳೆ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನೆರೆದಿದ್ದ ಅಪಾರ ಸಂಖ್ಯೆಯ ಅಭಿಮಾನಿಗಳು ‘ಧೋನಿ… ಧೋನಿ..’ ಎಂದು ಅಬ್ಬರದಿಂದ ಘೋಷಣೆಗಳನ್ನು ಕೂಗಲು ಶುರು ಮಾಡಿದರು. ಈ ವೇಳೆ ಬೌಂಡರಿ ಲೈನ್​ ಬಳಿ ನಿಂತಿದ್ದ ಆಂಡ್ರೆ ರಸೆಲ್​ ಅಭಿಮಾನಿಗಖು ಧೋನಿ ಧೋನಿ ಎಂದು ಕೂಗುತ್ತಿರುವುದನ್ನು ಕೇಳಲಾರದೆ ಕಿವಿ ಮುಚ್ಚಿಕೊಂಡಿದ್ದಾರೆ.

    ಇತ್ತ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ವ್ಯಾಪಕ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದೆ. ಹಲವರು ರಸೆಲ್​ ನಡೆಯನ್ನು ಖಂಡಿಸಿದ್ದಾರೆ. ಇನ್ನೂ ಕೆಲವರು ರಸೆಲ್​ ನಡೆಯನ್ನು ಬಂಬಲಿಸಿದ್ದಾರೆ. ಒಟ್ಟಿನಲ್ಲಿ ರಸೆಲ್​ ನಡೆ ಸಾಮಾಜಿಕ ಜಾಲತಾಣಗಳಲ್ಲಿ ಕ್ರೀಡಾಭಿಮಾನಿಗಳ ನಡುವೆ ಬಿರುಕನ್ನು ಉಂಟು ಮಾಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts