ಸತತ ಸೋಲಿನ ಬಳಿಕ ಡೆಲ್ಲಿ ಕ್ಯಾಪಿಟಲ್ಸ್​ಗೆ ಮತ್ತೊಂದು ಆಘಾತ; ತಂಡದಿಂದ ಹೊರಬಿದ್ದ ಪ್ರಮುಖ ಆಟಗಾರ

Mitchell Marsh

ನವದೆಹಲಿ: ಹಾಲಿ ಟೂರ್ನಿಯಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿರುವ ಡೆಲ್ಲಿ ಕ್ಯಾಪಿಟಲ್ಸ್​ ತಂಡಕ್ಕೆ ಗಾಯದ ಸಮಸ್ಯೆಯೂ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಭಾನುವಾರ ಮುಂಬೈ ವಿರುದ್ಧ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಪ್ರಮುಖ ಆಟಗಾರನೋರ್ವ ಗಾಯಕ್ಕೆ ತುತ್ತಾಗಿದ್ದು, ಈ ಆಟಗಾರ ಐಪಿಎಲ್​ಗೆ ಮರಳುವ ಬಗ್ಗೆ ಇನ್ನು ಖಚಿತ ಮಾಹಿತಿ ದೊರೆತ್ತಿಲ್ಲ.

ನಡೆಯುತ್ತಿರುವ ಐಪಿಎಲ್ 17ನೇ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕಳಪೆ ಪ್ರದರ್ಶನ ಮುಂದುವರೆಸಿದೆ. ಏಪ್ರಿಲ್ 07ರಂದು ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ತಮ್ಮ ನಾಲ್ಕನೇ ಪಂದ್ಯದಲ್ಲಿ ಸೋತ ಡೆಲ್ಲಿ ಪಾಯಿಂಟ್​ ಪಟ್ಟಿಯಲ್ಲಿ ಕುಸಿತ ಕಂಡಿದೆ. ತಂಡದ ಸ್ಟಾರ್ ಆಲ್ ರೌಂಡರ್ ಮಿಚೆಲ್ ಮಾರ್ಷ್ ಮಂಡಿರಜ್ಜು ಗಾಯಕ್ಕೆ ತುತ್ತಾಗಿದ್ದಾರೆ ಎಂದು ತಿಳಿದು ಬಂದಿದೆ.

Mitchell Marsh

ಇದನ್ನೂ ಓದಿ: ಅಬಕಾರಿ ನೀತಿ ಹಗರಣ; ತಮ್ಮ ಬಂಧನ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಲು ಸಜ್ಜಾದ ಕೇಜ್ರಿವಾಲ್​

ಮುಂಬೈ ವಿರುದ್ಧದ ಪಂದ್ಯದಲ್ಲಿ ಮಾರ್ಷ್​ ಕಣಕ್ಕಿಳಿದಿರಲಿಲ್ಲ ಹೀಗಾಗಿ ವೇಗಿ ಜೇ ರಿಚರ್ಡ್‌ಸನ್‌ರನ್ನು ಆಡಿಸಲಾಯಿತು. ಇದರ ಪರಿಣಾಮವಾಗಿ ಡೆಲ್ಲಿ ಕ್ಯಾಪಿಟಲ್ಸ್‌ಗೆ ಒಬ್ಬ ಆಲ್​ರೌಂಡರ್ ಕೊರತೆ ಉಂಟಾಯಿತು. ಅಂತಿಮವಾಗಿ ತಂಡ ಇದರ ಭಾರವನ್ನು ಸೋಲಿನ ರೂಪದಲ್ಲಿ ಹೊರಬೇಕಾಯಿತು. ಮುಂಡಿರಜ್ಜು ಗಾಯದಿಂದ ಬಳಲುತ್ತಿರುವ ಮಿಚೆಲ್ ಮಾರ್ಷ್ ಕನಿಷ್ಠ ಒಂದು ವಾರ ತಂಡದಿಂದ ಹೊರಗುಳಿಯುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.

ಈ ಕುರಿತು ಮಾತನಾಡಿರುವ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಸಹಾಯಕ ಕೋಚ್​ ಪ್ರವೀಣ್​ ಆಮ್ರೆ, ನಮ್ಮ ಕೆಲವು ಆಟಗಾರರು ಗಾಯಗೊಂಡಿದ್ದಾರೆ. ಅದರಲ್ಲಿ ಕೊಂಚ ಆತಂಕ ಹುಟ್ಟಿಸುವುದೆಂದರೆ ಮಿಚಲ್​ ಮಾರ್ಷ್​ ಗಾಯಕ್ಕೆ ತುತ್ತಾಗಿರುವುದು. ಸದ್ಯ ಅವರು ಸ್ಕ್ಯಾನ್‌ಗೆ ಹೋಗಿದ್ದು, ಫಿಸಿಯೋ ಒಂದು ವಾರದಲ್ಲಿ ವರದಿಯನ್ನು ನಮಗೆ ನೀಡುತ್ತಾರೆ. ಆ ನಂತರ ಮಿಚೆಲ್ ಮಾರ್ಷ್​ ಇಡೀ ಸೀಸನ್ ಆಡುತ್ತಾರೆಯೇ ಅಥವಾ ಇಲ್ಲವೇ ಎಂಬುದು ವರದಿಯ ಮೇಲೆ ಅವಲಂಬಿತವಾಗಿರುತ್ತದೆ ಎಂದು ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಸಹಾಯಕ ಕೋಚ್​ ಪ್ರವೀಣ್​ ಆಮ್ರೆ ಹೇಳಿದ್ದಾರೆ.

Share This Article

ಭಗವಂತ ಶ್ರೀರಾಮನ ಜೀವನದ ಈ 5 ತತ್ವವನ್ನು ಅಳವಡಿಸಿಕೊಳ್ಳಿ | Success Tips

ಭಾರತದಲ್ಲಿ ಶ್ರೀರಾಮನನ್ನು ಅತಿ ಹೆಚ್ಚು ಪೂಜಿಸಲಾಗುತ್ತದೆ. ಲಂಕಾದ ರಾವಣನ ಮೇಲೆ ಶ್ರೀರಾಮನ ವಿಜಯವನ್ನು ಇಂದಿಗೂ ದಸರಾ…

ಅತಿಯಾಗಿ ಯೋಚಿಸುವುದನ್ನು ನಿಲ್ಲಿಸಿ! ಸೈಲೆಂಟ್ ಆಗಿ ನಿಮ್ಮನ್ನು ಕಿಲ್ಲ ಮಾಡುತ್ತೆ Over Thinking ಅಭ್ಯಾಸ…

ಬೆಂಗಳೂರು:  ಇಂದಿನ ಬಿಡುವಿಲ್ಲದ ಜೀವನದಲ್ಲಿ ನಾವೆಲ್ಲರೂ ಸಣ್ಣ ಪುಟ್ಟ ವಿಚಾರಗಳನ್ನು ಹೆಚ್ಚು ಯೋಚಿಸುತ್ತೇವೆ ( Over…

ಹೆಂಗಸರು ಪ್ರತಿದಿನ ಹೂವು ಮುಡಿಯುವುದರಿಂದ ಆಗುವ ಲಾಭಗಳೇನು?…Wearing Flower

ಬೆಂಗಳೂರು:  ಹೆಣ್ಣುಮಕ್ಕಳು ತಲೆಗೆ ಎಣ್ಣೆ ಹಚ್ಚಿ, ತಲೆ ಬಾಚಿಕೊಂಡು, ನೀಟಾಗಿ ಹೆಣೆದು, ಹೂವಿನಿಂದ ( Wearing…